ಮೂತ್ರಪಿಂಡ ಕಾಯಿಲೆ ರಾಜ್ಯದಲ್ಲಿ ಹೆಚ್ಚಳ: ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಯನ
ನವದೆಹಲಿ: ಮೂತ್ರಪಿಂಡಗಳಿಗೆ ಸಂಬಂಧಿಸಿದಂತೆ, ರೋಗಿಯ ಅರಿವಿಗೇ ಬಾರದಂತಹ ದೀರ್ಘಕಾಲದ ಕಾಯಿಲೆಗಳು (ಸಿಕೆಡಿಯು) ಹೆಚ್ಚುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂದು, ಆರೋಗ್ಯಕ್ಕೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು ಹೇಳಿದೆ.ಕರ್ನಾಟಕದಲ್ಲಿ ರಾಯಚೂರು ಜಿಲ್ಲೆಯಲ್ಲಿ ಮಾತ್ರ ಸಿಕೆಡಿಯು ಬಾಧಿತರು ಕಂಡುಬಂದಿದ್ದರೆ, ಆಂಧ್ರಪ್ರದೇಶ, ತಮಿಳುನಾಡು, ಛತ್ತೀಸಗಢ, ಒಡಿಶಾ,

ನವದೆಹಲಿ: ಮೂತ್ರಪಿಂಡಗಳಿಗೆ ಸಂಬಂಧಿಸಿದಂತೆ, ರೋಗಿಯ ಅರಿವಿಗೇ ಬಾರದಂತಹ ದೀರ್ಘಕಾಲದ ಕಾಯಿಲೆಗಳು (ಸಿಕೆಡಿಯು) ಹೆಚ್ಚುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂದು, ಆರೋಗ್ಯಕ್ಕೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು ಹೇಳಿದೆ.ಕರ್ನಾಟಕದಲ್ಲಿ ರಾಯಚೂರು ಜಿಲ್ಲೆಯಲ್ಲಿ ಮಾತ್ರ ಸಿಕೆಡಿಯು ಬಾಧಿತರು ಕಂಡುಬಂದಿದ್ದರೆ, ಆಂಧ್ರಪ್ರದೇಶ, ತಮಿಳುನಾಡು, ಛತ್ತೀಸಗಢ, ಒಡಿಶಾ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳ ಹಲವು ಜಿಲ್ಲೆಗಳಲ್ಲಿ ಈ ಸಮಸ್ಯೆ ಪತ್ತೆಯಾಗಿದೆ.‘ವಿಶೇಷವಾಗಿ ಗ್ರಾಮೀಣ ವಾಸಿಗಳು, ಕೃಷಿಕರು ಹಾಗೂ ಕಠಿಣ ಶ್ರಮದಾಯಕ ಕೆಲಸಗಳಲ್ಲಿ ತೊಡಗಿರುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಹೆಚ್ಚು ಶಾಖಕ್ಕೆ ಒಡ್ಡಿಕೊಳ್ಳುವುದು, ಕೀಟನಾಶಕಗಳ ಸಂಪರ್ಕಕ್ಕೆ ಬರುವುದು ಮತ್ತಿತರ ಕಾರಣಗಳಿಂದ ಈ ತೊಂದರೆ ಆಗುತ್ತಿದೆ ಎಂಬ ಊಹೆ ಇದ್ದರೂ, ಖಚಿತ ಕಾರಣಗಳು ತಿಳಿದುಬಂದಿಲ್ಲ’ ಎಂದು ಸಮಿತಿಯು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದೆ.‘ಕಾಯಿಲೆ ಬಗ್ಗೆ ಪರಿಶೀಲನೆ ನಡೆಸಿ, ವ್ಯಾಪಕವಾಗಿ ನಿಗಾ ವಹಿಸಬೇಕು. ಹೆಚ್ಚು ಅಪಾಯವಿದೆ ಎಂದು ಗುರುತಿಸಲಾದ ಜಿಲ್ಲೆಗಳಿಗೆ ಅನುಗುಣವಾಗಿ ಕಾಯಿಲೆ ತಡೆ ಮತ್ತು ಕಣ್ಗಾವಲಿಗಾಗಿ ರಾಷ್ಟ್ರೀಯ ಕಾರ್ಯವಿಧಾನವನ್ನು ರೂಪಿಸಬೇಕು’ ಎಂದು ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ರಾಮ್ ಗೋಪಾಲ್ ಯಾದವ್ ನೇತೃತ್ವದ ಸಮಿತಿಯು ಶಿಫಾರಸು ಮಾಡಿದೆ.ಗಂಭೀರ ಸ್ವರೂಪದ ಮೂತ್ರಪಿಂಡಗಳ ಕಾಯಿಲೆಗಳಿಗೆ ಮಧುಮೇಹ ಶೇಕಡ 31ರಷ್ಟು ಕಾರಣವಾಗಿದ್ದರೆ, ಅಧಿಕ ರಕ್ತದೊತ್ತಡ ಶೇ 13ರಷ್ಟು ಕಾರಣವಾಗಿದೆ. ಶೇಕಡ 16ರಷ್ಟು ಮಂದಿಯಲ್ಲಿ ಮೂತ್ರಪಿಂಡದ ಕಾಯಿಲೆಗಳಿಗೆ ಸಿಕೆಡಿಯು ಶೇ 16ರಷ್ಟು ಕಾರಣವಾಗಿದೆ. ಅದರಲ್ಲೂ ಯುವಜನರು ಮತ್ತು ಕಡಿಮೆ ಆದಾಯದ ಜನರನ್ನೇ ಸಿಕೆಡಿಯು ಹೆಚ್ಚಾಗಿ ಬಾಧಿಸುತ್ತಿದೆ ಎಂದು ವರದಿ ಹೇಳಿದೆ.ಸಮಿತಿಯ ಪ್ರಮುಖ ಶಿಫಾರಸುಗಳುತೀವ್ರ ಬಾಧಿತ ವಲಯದಲ್ಲಿ ವ್ಯವಸ್ಥಿತ ಕಣ್ಗಾವಲಿಗೆ ಕಾರ್ಯವಿಧಾನ ರೂಪಿಸುವುದುದುರ್ಬಲ ಕಾರ್ಮಿಕ ವರ್ಗದವರಿಗೆ ನಿಯಮಿತ ಆರೋಗ್ಯ ತಪಾಸಣೆಶುದ್ಧ ಕುಡಿಯುವ ನೀರು ಲಭ್ಯವಾಗುವಂತೆ ಮಾಡುವುದುಕೆಲಸದ ಸ್ಥಳದಲ್ಲಿ ಸಾಕಷ್ಟು ನೀರಿನ ಪೂರೈಕೆ ಇರಬೇಕುದೀರ್ಘಕಾಲದ ಹೊರಾಂಗಣ ಕೆಲಸದಲ್ಲಿ ನೀರಿನ ಸೇವನೆಗೆ ಸಾಕಷ್ಟು ವಿರಾಮ ನೀಡುವುದುಕೆಲಸದ ಸ್ಥಳದಲ್ಲಿ ತಾಪಮಾನದಿಂದ ರಕ್ಷಿಸಿಕೊಳ್ಳಲು ವ್ಯವಸ್ಥೆ ಮಾಡುವುದು30 ವರ್ಷಗಳ ಹಿಂದೆ ಪತ್ತೆಮಧ್ಯ ಅಮೆರಿಕ ರಾಷ್ಟ್ರಗಳ ಕಬ್ಬು ಕೃಷಿ ಕಾರ್ಮಿಕರಲ್ಲಿ 30 ವರ್ಷಗಳ ಹಿಂದೆ ಮೊದಲ ಬಾರಿ ಸಿಕೆಡಿಯು ಕಂಡುಬಂತು, ಬಳಿಕ ಉತ್ತರ ಶ್ರೀಲಂಕಾದಲ್ಲಿ ಪತ್ತೆಯಾಗಿದೆ ಎಂಬುದು ತಜ್ಞರ ಅಭಿಪ್ರಾಯ.‘ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಉದ್ದಾನಮ್ ಭಾಗದಲ್ಲಿ ದಶಕದ ಹಿಂದೆ ಅರಿವಿಗೆ ಬಾರದೆಯೇ ಮೂತ್ರಪಿಂಡ ವೈಫಲ್ಯ ಪ್ರಕರಣಗಳು ಹೆಚ್ಚಾದಾಗ ಭಾರತದಲ್ಲಿ ಮೊದಲ ಬಾರಿ ಈ ಕಾಯಿಲೆಯನ್ನು ಗುರುತಿಸಲಾಯಿತು. 2015ರ ವೇಳೆಗೆ 34 ಸಾವಿರ ಜನರಲ್ಲಿ ಈ ಸಮಸ್ಯೆ ಪತ್ತೆಯಾಗಿದ್ದು, 4,500 ಜನ ಮೃತಪಟ್ಟಿದ್ದಾರೆ. ಅಷ್ಟು ಹೊತ್ತಿಗಾಗಲೇ ಕಾಯಿಲೆಯು ಹಲವು ರಾಜ್ಯಗಳಿಗೆ ವ್ಯಾಪಿಸಿತ್ತು. ಕೆಲವು ಗ್ರಾಮೀಣ ಪ್ರದೇಶಗಳ ಶೇಕಡ 18–20ರಷ್ಟು ಜನರು ಇಂಥ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದು ನಮ್ಮ ಅಧ್ಯಯನದಿಂದ ತಿಳಿದುಬಂದಿದೆ’ ಎಂದು ವಿವೇಕಾನಂದ ಝಾ ತಿಳಿಸಿದರು.