ಬೆಂಗಳೂರಿನಲ್ಲಿ ₹50 ಲಕ್ಷ ಸಂಪಾದಿಸಿದರೂ ಶ್ರೀಮಂತರಾಗಲ್ಲ: ಟೆಕ್ಕಿ ಲೆಕ್ಕ ಹೀಗಿದೆ
ಸಿಲಿಕಾನ್ ಸಿಟಿ ಬೆಂಗಳೂರು ದಿನಗೂಲಿ ನೌಕರರಿಂದ ಹಿಡಿದು ತಿಂಗಳಿಗೆ ಕೋಟಿಗಟ್ಟಲೆ ಸಂಪಾದಿಸುವವರಿಗೂ ನೆಲೆ ಕಲ್ಪಿಸಿದೆ. ಇತ್ತೀಚಿನ ದಿನಗಳಲ್ಲಿ, ಬೆಂಗಳೂರಿನ ಜೀವನ ಶೈಲಿ ದುಬಾರಿಯಾಗಿದ್ದು, ಬದುಕು ನಡೆಸುವುದು ಕಠಿಣ ಎಂಬಂತಾಗಿದೆ. ಈ ನಡುವೆ ಟೆಕ್ಕಿಯೊಬ್ಬರು ವಾರ್ಷಿಕ ₹50 ಲಕ್ಷ ಸಂಪಾದಿಸುವವರನ್ನು ಕೂಡ ಶ್ರೀಮಂತರು ಎಂದು ಪರಿಗಣಿಸಲಾಗದು ಎಂದು ಹೇಳಿದ್ದಾರೆ.ಬೆಂಗಳೂರಿನಲ

ಸಿಲಿಕಾನ್ ಸಿಟಿ ಬೆಂಗಳೂರು ದಿನಗೂಲಿ ನೌಕರರಿಂದ ಹಿಡಿದು ತಿಂಗಳಿಗೆ ಕೋಟಿಗಟ್ಟಲೆ ಸಂಪಾದಿಸುವವರಿಗೂ ನೆಲೆ ಕಲ್ಪಿಸಿದೆ. ಇತ್ತೀಚಿನ ದಿನಗಳಲ್ಲಿ, ಬೆಂಗಳೂರಿನ ಜೀವನ ಶೈಲಿ ದುಬಾರಿಯಾಗಿದ್ದು, ಬದುಕು ನಡೆಸುವುದು ಕಠಿಣ ಎಂಬಂತಾಗಿದೆ. ಈ ನಡುವೆ ಟೆಕ್ಕಿಯೊಬ್ಬರು ವಾರ್ಷಿಕ ₹50 ಲಕ್ಷ ಸಂಪಾದಿಸುವವರನ್ನು ಕೂಡ ಶ್ರೀಮಂತರು ಎಂದು ಪರಿಗಣಿಸಲಾಗದು ಎಂದು ಹೇಳಿದ್ದಾರೆ.ಬೆಂಗಳೂರಿನಲ್ಲಿ ₹50 ಲಕ್ಷ ವಾರ್ಷಿಕ ವೇತನ ಎಂದರೆ ಸಾಮಾನ್ಯ ವಿಷಯವಲ್ಲ. ಬಹುತೇಕರಿಗೆ ಇದು ಕನಸಿನ ಸಂಬಳ. ಆದರೆ, ಬೆಂಗಳೂರಿನಲ್ಲಿ ವಾರ್ಷಿಕ ₹50 ರಿಂದ ₹70 ಲಕ್ಷ ಗಳಿಸಿದರೂ ಶ್ರೀಮಂತರಾಗುವುದು ಸುಲಭವಲ್ಲ ಎಂದು ಬೆಂಗಳೂರಿನ ಸಾಫ್ಟ್ವೇರ್ ಎಂಜಿನಿಯರ್ ಅನ್ಮೋಲ್ ಅಗರ್ವಾಲ್ ಎಂಬುವವರು ವಿಡಿಯೋ ಮೂಲಕ ಪ್ರತಿಪಾದಿಸಿದ್ದಾರೆ. ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆ ಉಂಟಾಗಿದೆ.₹50 ಲಕ್ಷ ಸಂಬಳದ 'ಲೆಕ್ಕಾಚಾರ'ಅನ್ಮೋಲ್ ಅಗರ್ವಾಲ್ ಪ್ರಕಾರ, ₹50 ಲಕ್ಷದ ವಾರ್ಷಿಕ ಸಂಬಳದಲ್ಲಿ ತೆರಿಗೆ ಮತ್ತು ಪಿಎಫ್ (EPF) ಕಡಿತಗೊಂಡ ನಂತರ ಕೈಗೆ ಸಿಗುವುದು ಸುಮಾರು ₹35 ಲಕ್ಷ ಮಾತ್ರ (ಅಂದರೆ ತಿಂಗಳಿಗೆ ಸುಮಾರು ₹3 ಲಕ್ಷ). ಆದರೆ, ನಗರದ ದುಬಾರಿ ಜೀವನಶೈಲಿಯಿಂದ ಈ ಹಣ ಕ್ಷಣಾರ್ಧದಲ್ಲಿ ಖಾಲಿಯಾಗುತ್ತದೆ ಎಂದಿದ್ದಾರೆ.ಮನೆ ಬಾಡಿಗೆ: 2BHK ಮನೆಗೆ ತಿಂಗಳಿಗೆ ₹60,000 ರಿಂದ ₹70,000.ಮನೆ ಕೆಲಸ ಮತ್ತು ಅಡುಗೆ: ಕೆಲಸದಾಳು ಮತ್ತು ಅಡುಗೆಯವರಿಗೆ ತಿಂಗಳಿಗೆ ₹20,000.ದೈನಂದಿನ ವೆಚ್ಚ: ದಿನಸಿ, ಜಿಮ್, ಶಾಪಿಂಗ್ ಮತ್ತು ಪ್ರಯಾಣದ ವೆಚ್ಚ ಸೇರಿ ₹1.2 ಲಕ್ಷದಿಂದ ₹1.3 ಲಕ್ಷ.ಕಾರು ಮತ್ತು ಇಎಂಐ: ಸ್ವಂತ ಕಾರು ಹೊಂದಿದ್ದರೆ ತಿಂಗಳಿಗೆ ಹೆಚ್ಚುವರಿ ₹50,000.ಮನೆ ಖರೀದಿ ಸವಾಲು: ನಗರದಲ್ಲಿ ₹3 ಕೋಟಿ ಮೌಲ್ಯದ ಮನೆ ಕೆಲವೇ ವರ್ಷಗಳಲ್ಲಿ ₹6-7 ಕೋಟಿಗೆ ಏರುತ್ತದೆ. ಹೀಗಿದ್ದಾಗ ಹೂಡಿಕೆ ಮಾಡಲು ಹಾಗೂ ಮನೆ ಕೊಳ್ಳಲು ಹಣ ಉಳಿಸುವುದು ಕಷ್ಟ ಎಂದಿದ್ದಾರೆ.ಮದುವೆ, ಮಕ್ಕಳ ಶಿಕ್ಷಣ ಹಾಗೂ ಕುಟುಂಬದ ನಿರ್ವಹಣೆ ಸೇರಿಕೊಂಡರೆ ತಿಂಗಳಿಗೆ ₹1 ಲಕ್ಷ ಕೂಡ ಉಳಿಯುವುದಿಲ್ಲ ಎಂದಿದ್ದಾರೆ.ನೆಟ್ಟಿಗರ ಪರ-ವಿರೋಧದ ಚರ್ಚೆಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಲು ಆರಂಭವಾಗುತ್ತಿದ್ದಂತೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ.ಶ್ರೀಮಂತರಾಗುವುದು ನಾವು ಎಷ್ಟು ಸಂಪಾದಿಸುತ್ತೇವೆ ಎನ್ನುವುದಕ್ಕಿಂತ, ಎಷ್ಟು ಉಳಿಸುತ್ತೇವೆ ಮತ್ತು ಎಲ್ಲಿ ಹೂಡಿಕೆ ಮಾಡುತ್ತೇವೆ ಎಂಬುದರ ಮೇಲೆ ಆಧಾರಿತವಾಗಿರುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.‘ಬೆಂಗಳೂರಿನಲ್ಲಿ ತಿಂಗಳಿಗೆ ₹40,000ಕ್ಕೆ ಉತ್ತಮ ಮನೆಗಳು ಸಿಗುತ್ತವೆ. ಪ್ರತಿಯೊಬ್ಬರೂ ₹70,000 ಬಾಡಿಗೆ ಕೊಟ್ಟು ಇರಬೇಕಾದ ಅಗತ್ಯವಿಲ್ಲ. ಅತಿಯಾದ ದುಬಾರಿ ಜೀವನಶೈಲಿ ಇದಕ್ಕೆ ಕಾರಣ’ ಎಂದು ಹಲವರು ಕಮೆಂಟ್ ಮಾಡಿದ್ದಾರೆ.ಟೆಕ್ಕಿಯ ವಾದವನ್ನು ಬೆಂಬಲಿಸಿದವರು:‘ಬೆಂಗಳೂರು, ಮುಂಬೈನಂತಹ ಮೆಟ್ರೋ ನಗರಗಳಲ್ಲಿ ಮನೆಗಳ ಬೆಲೆ ಮತ್ತು ದೈನಂದಿನ ಜೀವನ ವೆಚ್ಚಗಳು ಗಗನಕ್ಕೇರಿವೆ. ಇದರಿಂದಾಗಿ ಶೇ. 30ರಷ್ಟು ತೆರಿಗೆ ಕಟ್ಟಿದ ಮೇಲೆಯೂ ಹೂಡಿಕೆಗೆ ಹೆಚ್ಚಿನ ಹಣ ಉಳಿಯುವುದಿಲ್ಲ’ ಎಂದು ಕೆಲವರು ಒಪ್ಪಿಕೊಂಡಿದ್ದಾರೆ.ಸಣ್ಣ ನಗರಗಳಿಂದ ರಿಮೋಟ್ ಕೆಲಸ ಮಾಡುವುದು ಆರ್ಥಿಕವಾಗಿ ಹೆಚ್ಚು ಸೂಕ್ತ ಎಂಬ ಸಲಹೆಯನ್ನೂ ಹಲವರು ಬೆಂಬಲಿಸಿದ್ದಾರೆ.