ಮಹೇಶ್ ಬಾಬು ಜನ್ಮದಿನ: ಅಭಿಮಾನಿಗಳಿಗಾಗಿ ವಾರಾಣಸಿ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ
ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಹಾಗೂ ನಟ ಮಹೇಶ್ ಬಾಬು ಅವರ ಅಭಿನಯನದಲ್ಲಿ ವಾರಾಣಸಿ ಸಿನಿಮಾ ನಿರ್ಮಾಣವಾಗುತ್ತಿದೆ. ಮಹೇಶ್ ಬಾಬು ಅವರ ಹುಟ್ಟುಹಬ್ಬದ ಪ್ರಯುಕ್ತ ಪಾತ್ರದ ಫಸ್ಟ್ ಲುಕ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಬಾಹುಬಲಿ, ಆರ್ಆರ್ಆರ್ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿ ಯಶಸ್ವಿಯಾಗಿರುವ ರಾಜಮೌಳಿ ಅವರು ಮತ್ತೊಂದು ಐತಿಹಾಸಿಕ ಘಟನೆ ಆ

ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಹಾಗೂ ನಟ ಮಹೇಶ್ ಬಾಬು ಅವರ ಅಭಿನಯನದಲ್ಲಿ ವಾರಾಣಸಿ ಸಿನಿಮಾ ನಿರ್ಮಾಣವಾಗುತ್ತಿದೆ. ಮಹೇಶ್ ಬಾಬು ಅವರ ಹುಟ್ಟುಹಬ್ಬದ ಪ್ರಯುಕ್ತ ಪಾತ್ರದ ಫಸ್ಟ್ ಲುಕ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಬಾಹುಬಲಿ, ಆರ್ಆರ್ಆರ್ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿ ಯಶಸ್ವಿಯಾಗಿರುವ ರಾಜಮೌಳಿ ಅವರು ಮತ್ತೊಂದು ಐತಿಹಾಸಿಕ ಘಟನೆ ಆಧಾರಿತ ಸಿನಿಮಾದ ತಯಾರಿಯಲ್ಲಿದ್ದಾರೆ. ಈಗಾಗಲೇ ಚಿತ್ರೀಕರಣವು ಅಂತಿಮ ಹಂತ ತಲುಪಿದ್ದು. 2027ರಲ್ಲಿ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇದೆ. ದಕ್ಷಿಣ ಕೊರಿಯಾದ ಯುವತಿಯನ್ನು ಸೊಸೆ ಮಾಡಿಕೊಂಡ ಮಹೇಶ್ ಬಾಬು ಕುಟುಂಬದರ್ಶನ್ ನಟನೆಯ ಬಗ್ಗೆ ಪುನೀತ್ ರಾಜ್ಕುಮಾರ್ ಹೊಗಳುತ್ತಿದ್ದರು: ಮಹೇಶ್ ಬಾಬುಮಹೇಶ್ ಬಾಬು ನಟನೆಯ ‘ವಾರಾಣಸಿ’ ಸಿನಿಮಾ ಬಿಡುಗಡೆ ದಿನಾಂಕ ನಿಗದಿರಾಜಮೌಳಿ–ಮಹೇಶ್ ಬಾಬು ಹೊಸ ಚಿತ್ರದ ಶೀರ್ಷಿಕೆ ಅನಾವರಣ: ಅಭಿಮಾನಿಗಳ ಶಿಳ್ಳೆ, ಜೈಕಾರಇಂದು (ಆಗಸ್ಟ್ 9) ಮಹೇಶ್ ಬಾಬು ಅವರು ತಮ್ಮ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ವೇಳೆ ವಾರಾಣಸಿ ಸಿನಿಮಾದಲ್ಲಿ ಅವರ ಪಾತ್ರದ ಎರಡು ಫೋಟೊಗಳನ್ನು ಹಂಚಿಕೊಳ್ಳಲಾಗಿದೆ.ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಸಾಮಾಜಿಕ ಮಾಧ್ಯಮದಲ್ಲಿ ರುದ್ರನ ಪಾತ್ರದ ಫೋಟೊಗಳನ್ನು ಹಂಚಿಕೊಂಡಿದ್ದು, ‘ಉಗ್ರ ಆತನ ಏಕೈಕ ನೆರಳು. ವಾರಾಣಸಿಯಲ್ಲಿ ರುದ್ರ’ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೊದಲ್ಲಿ ಮಹೇಶ್ ಬಾಬು ಅವರು ಬಿದಿರಿನ ಮಂಚದ ಮೇಲೆ ಮಲಗಿದ್ದಾರೆ. ರಾಜಮೌಳಿ ಹಾಗೂ ಮಹೇಶ್ ಬಾಬು ಜೋಡಿಯ ಈ ಚಿತ್ರ ನಿರೀಕ್ಷೆಗಳನ್ನು ಹೆಚ್ಚಿಸಿದೆ. View this post on Instagram A post shared by SS Rajamouli (@ssrajamouli) ಮಹೇಶ್ ಬಾಬು ನಟನೆಯ ಈ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಶೀರ್ಷಿಕೆ ಬಿಡುಗಡೆ ವೇಳೆ ನಾಯಕಿ ಪ್ರಿಯಾಂಕಾ ಅವರ ಪಾತ್ರವನ್ನು ರಾಜಮೌಳಿ ಅವರು ಪರಿಚಯಿಸಿದ್ದರು. ‘ಮಂದಾಕಿನಿ’ ಎಂಬ ಪಾತ್ರದಲ್ಲಿ ಪ್ರಿಯಾಂಕಾ ನಟಿಸಿದ್ದಾರೆ. ‘ಈಕೆ ನಕ್ಕಾಗ ಅಲ್ಲೊಂದು ಕಳೆ ಇರುತ್ತದೆ. ನಗದೇ ಇದ್ದಾಗ ಆಕೆ ಬೆಂಕಿ’ ಎಂಬ ವಾಕ್ಯದೊಂದಿಗೆ ‘ಮಂದಾಕಿನಿ’ ಪಾತ್ರದ ವ್ಯಕ್ತಿತ್ವವನ್ನು ರಾಜಮೌಳಿ ವಿವರಿಸಿದ್ದರು.‘ವಾರಾಣಸಿ’ ಒಂದು ಪೌರಾಣಿಕ ಹಿನ್ನೆಲೆಯ ಫ್ಯಾಂಟಸಿ ಚಿತ್ರವಾಗಿದ್ದು, ಶ್ರೀ ದುರ್ಗಾ ಆರ್ಟ್ಸ್ ಮತ್ತು ಶೋಯಿಂಗ್ ಬಿಝಿನೆಸ್ ಸಂಸ್ಥೆಗಳ ಅಡಿ ಕೆ.ಎಲ್.ನಾರಾಯಣ ಮತ್ತು ಎಸ್.ಎಸ್. ಕಾರ್ತಿಕೇಯ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ರಾಜಮೌಳಿ ತಂದೆ ವಿಜಯಪ್ರಸಾದ್ ಕಥೆ-ಚಿತ್ರಕಥೆ ರಚಿಸಿದ್ದು, ಎಂ.ಎಂ. ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ಮಹೇಶ್ ಬಾಬು ‘ರುದ್ರ’ ಎಂಬ ಪಾತ್ರದಲ್ಲಿ ಅಭಿನಯಿಸಿದರೆ, ಪೃಥ್ವಿರಾಜ್ ಸುಕುಮಾರನ್ ‘ಕುಂಭ’ ಎಂಬ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.