ಬರಗಾಲದ ಕರ್ನಾಟಕಕ್ಕೆ ಗುಜರಾತ್ ‘ಜಲ ಪಾಠ’: ಏನಿದು ವರದಿ?
ಬೆಂಗಳೂರು: ‘ಬರಗಾಲವನ್ನು ಎದುರಿಸುತ್ತಿರುವ ಕರ್ನಾಟಕವು ಗುಜರಾತ್ನ ಜಲ ಆಡಳಿತ ನಿರ್ವಹಣೆಯಿಂದ ಪಾಠಗಳನ್ನು ಕಲಿಯಬೇಕು’ ಎಂದು ಕೇಂದ್ರ ಜಲಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿವೃತ್ತ ಕಾರ್ಯದರ್ಶಿ ಪರಮೇಶ್ವರನ್ ಅಯ್ಯರ್ ಅಭಿಪ್ರಾಯಪಟ್ಟರು.2001ರಿಂದ 2026ರವರೆಗೆ 25 ವರ್ಷಗಳಲ್ಲಿ ಗುಜರಾತ್ ರಾಜ್ಯದ ಜಲ ಆಡಳಿತ ನಿರ್ವಹಣೆಯ ಕುರಿತು ಸಿದ್ಧಪಡಿಸ

ಬೆಂಗಳೂರು: ‘ಬರಗಾಲವನ್ನು ಎದುರಿಸುತ್ತಿರುವ ಕರ್ನಾಟಕವು ಗುಜರಾತ್ನ ಜಲ ಆಡಳಿತ ನಿರ್ವಹಣೆಯಿಂದ ಪಾಠಗಳನ್ನು ಕಲಿಯಬೇಕು’ ಎಂದು ಕೇಂದ್ರ ಜಲಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿವೃತ್ತ ಕಾರ್ಯದರ್ಶಿ ಪರಮೇಶ್ವರನ್ ಅಯ್ಯರ್ ಅಭಿಪ್ರಾಯಪಟ್ಟರು.2001ರಿಂದ 2026ರವರೆಗೆ 25 ವರ್ಷಗಳಲ್ಲಿ ಗುಜರಾತ್ ರಾಜ್ಯದ ಜಲ ಆಡಳಿತ ನಿರ್ವಹಣೆಯ ಕುರಿತು ಸಿದ್ಧಪಡಿಸಿದ ‘ಗುಜರಾತ್ನಿಂದ ಭಾರತಕ್ಕೆ: ಜಗತ್ತಿಗಾಗಿ ನೀರಿನ ಪಾಠಗಳು’ ಅಧ್ಯಯನ ವರದಿಯನ್ನು ನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಬುಧವಾರ ಬಿಡುಗಡೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.‘ಜಲ ಸಂರಕ್ಷಣೆ ಮತ್ತು ಅಂತರ್ಜಲ ವೃದ್ಧಿಗಾಗಿ ರೂಪಿಸಿದ್ದ ‘ಸುಜಲಾಂ ಸುಫಲಾಂ ಅಭಿಯಾನ’ವು ಮುಂಗಾರು ಮಳೆ ಕೊರತೆಯ ನಿರ್ವಹಣೆಯ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಿಸುವತ್ತಲೂ ಗಮನ ಹರಿಸಿತ್ತು. ಪ್ರತಿ ವರ್ಷ ಬೇಸಿಗೆಯಲ್ಲಿ ಜನರ ಸಹಭಾಗಿತ್ವದಲ್ಲೇ ಜಲಮೂಲಗಳ ಸ್ವಚ್ಛತೆ, ಹೂಳು ತೆರವು, ಮಳೆ ನೀರು ಸಂಗ್ರಹದಂಥ ಕಾರ್ಯಕ್ರಮಗಳನ್ನು ಕರ್ನಾಟಕವೂ ಅನುಸರಿಸಬಹುದು’ ಎಂದು ಹೇಳಿದರು.‘ಜಲಮೂಲಗಳ ಸುಸ್ಥಿರ ನಿರ್ವಹಣೆ, ಶುದ್ಧ ನೀರಿನ ಬಳಕೆ, ಮರು ಬಳಕೆಯ ವಿಷಯದಲ್ಲಿ ಜನರ ಬದ್ಧತೆ ಹಾಗೂ ಸಹಭಾಗಿತ್ವ ಹಾಗೂ ಜಲ ಸೇವಾ ಆಂದೋಲನದ ವಿಷಯದಲ್ಲಿ ಗುಜರಾತ್ ಇಡೀ ಜಗತ್ತಿಗೆ ಮಾದರಿ ಪ್ರಯೋಗಗಳನ್ನು ನೀಡಿದೆ. ದೇಶದ ಪ್ರತಿ ಮನೆಗೂ ನೀರು ಕೊಡುವ ಜಲಜೀವನ್ ಮಿಷನ್ಗೂ ಆ ರಾಜ್ಯದ ಕಾರ್ಯಕ್ರಮಗಳೇ ಪ್ರೇರಣೆಯಾಗಿವೆ’ ಎಂದರು.ಇದಕ್ಕೂ ಮೊದಲು ಮಾತನಾಡಿದ ಇಲಾಖೆಯ ಕಾರ್ಯದರ್ಶಿ ಅಶೋಕ್ ಕೆ. ಮೀನಾ, ‘ಹಾಲಿನ ಗುಣಮಟ್ಟವನ್ನು ಜನರೇ ಗುರುತಿಸಿ, ನಿರ್ಧರಿಸುವ ರೀತಿಯಲ್ಲಿ ನೀರಿನ ಗುಣಮಟ್ಟವನ್ನು ಪರೀಕ್ಷಿಸುವ ದಿನಗಳು ಬರಬೇಕು. ಇದು ಶಾಲೆ, ಅಂಗನವಾಡಿ, ಮನೆಗಳಲ್ಲೂ ನಡೆಯಬೇಕು. ಅದಕ್ಕೆ ಕೇಂದ್ರ ಸರ್ಕಾರವು ಸಿದ್ಧತೆ ನಡೆಸುತ್ತಿದೆ’ ಎಂದರು.‘ಗುಜರಾತ್ನಲ್ಲಿ ಗ್ರಾಮ ಪಂಚಾಯಿತಿ ಸೇರಿ ಸ್ಥಳೀಯ ಆಡಳಿತ ಸಂಸ್ಥೆಗಳೇ ಜಲ ಆಸ್ತಿಗಳ ಜವಾಬ್ದಾರಿ ಹೊತ್ತಿವೆ. ಜಲ ಸೇವಾ ಆಂದೋಲನವು ಪ್ರತಿ ಹಳ್ಳಿಯಲ್ಲೂ ನಡೆಯುವಂತಾಗಬೇಕು. ಇಡೀ ದೇಶಕ್ಕೆ ಇದು ಹಬ್ಬಬೇಕು’ ಎಂದರು.ನಂತರ ನಡೆದ ಸಂವಾದದಲ್ಲಿ ವರದಿಯ ಲೇಖಕರು, ಜಲ ತಜ್ಞರು ಹಾಗೂ ನೀತಿ ನಿರೂಪಕರು ಭಾಗವಹಿಸಿದರು. ಜಲಜೀವನ್ ಮಿಷನ್ ನಿರ್ದೇಶಕ ಕಮಲ್ ಕಿಶೋರ್ ಸೋನ್, ಐಐಎಂಬಿ ನಿರ್ದೇಶಕ ಯು.ದಿನೇಶ್ ಕುಮಾರ್, ಸಂಸ್ಥೆಯ ಸಾರ್ವಜನಿಕ ನೀತಿ ಕೇಂದ್ರದ ಅಧ್ಯಕ್ಷ ಪ್ರೊ.ಗೋಪಾಲ್ ನಾಯ್ಕ್ ಪಾಲ್ಗೊಂಡಿದ್ದರು.ಏನಿದು ವರದಿ?ಜಾರ್ಜ್ ಮ್ಯಾಸನ್ ವಿಶ್ಚವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡೇನಿಯಲ್ ಡಬ್ಲ್ಯು ಸ್ಮಿತ್, ಇಂಧನ ಪರಿಸರ ಮತ್ತು ನೀರು ಮಂಡಳಿ ಸಂಸ್ಥೆಯ ಫೆಲೋ ನಿತಿನ್ ಬಸ್ಸಿ ಹಾಗೂ ಪರಮೇಶ್ವರನ್ ಅಯ್ಯರ್ ಅವರ ತಂಡವು 3 ತಿಂಗಳಲ್ಲಿ ತಯಾರಿಸಿರುವ ವರದಿಯನ್ನು ಮೇಸನ್ ವಿಶ್ವವಿದ್ಯಾಲಯ ಹಾಗೂ ಗೇಟ್ಸ್ ಫೌಂಡೇಶನ್ ಜಂಟಿಯಾಗಿ ಪ್ರಕಟಿಸಿವೆ.2001 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಯವರ ನೇತೃತ್ವದಲ್ಲಿ ಆರಂಭವಾದ 25 ವರ್ಷಗಳ ಪಯಣ ವರದಿಯಲ್ಲಿದೆ.‘ನಿರಂತರ ಬರಗಾಲ ಮತ್ತು ನೀರಿನ ತೀವ್ರ ಅಭಾವವು ಮೂಲಸೌಕರ್ಯ, ಅಂತರ್ಜಲ ಮರುಪೂರಣ, ಜಲ ಸಂರಕ್ಷಣೆ, ನೀರಿನ ಬಳಕೆಯಲ್ಲಿ ದಕ್ಷತೆ, ಸಾಂಸ್ಥಿಕ ಸುಧಾರಣೆ ಹಾಗೂ ಸಮುದಾಯದ ಸಹಭಾಗಿತ್ವದ ಸಮನ್ವಯಕ್ಕೆ ನಾಂದಿ ಹಾಡಿತು. 2014ರವರೆಗೆ ಅಲ್ಲಿ ನಡೆದ ಜಲ ಆಡಳಿತ ಸುಧಾರಣೆಗಳು, ಬಳಿಕ ರಾಷ್ಟ್ರಮಟ್ಟದಲ್ಲಿ ವಿಸ್ತರಿಸಲಾದ ನೀತಿ ಮತ್ತು ವಿಧಾನಗಳಿಗೂ ಪ್ರೇರಣೆಯಾದವು’ ಎಂದು ವರದಿ ಬಣ್ಣಿಸಿದೆ. ‘ಆಫ್ರಿಕಾ, ಲ್ಯಾಟಿನ್ ಅಮೆರಿಕ, ಕೆರಿಬಿಯನ್ ಹಾಗೂ ಏಷ್ಯಾ ಖಂಡದ ದೇಶಗಳು ಮತ್ತು ಪೆಸಿಫಿಕ್ ಮಹಾಸಾಗರದಲ್ಲಿರುವ ಸಾವಿರಾರು ಸಣ್ಣ ದ್ವೀಪಗಳಿರುವ ಪ್ರದೇಶಗಳಿಗೂ ಭಾರತದ ಪ್ರಯೋಗಗಳು ಪಾಠವಾಗಿದೆ’ ಎಂದೂ ಹೇಳಿದೆ.ಅಶೋಕ್ ಕೆ. ಮೀನಾ, ಕೇಂದ್ರ ಜಲಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿಬಲಿಷ್ಠ ಸಂಸ್ಥೆಗಳು, ನಿರಂತರ ಬಂಡವಾಳ ಹೂಡಿಕೆ, ಗ್ರಾ.ಪಂ ಮಾಲೀಕತ್ವದ ಬೆಂಬಲದೊಂದಿಗೆ ನೀರು ಜನರ ಆಂದೋಲನವಾದರೆ ವ್ಯಾಪಕ ಬದಲಾವಣೆ ಸಾಧ್ಯ ಎಂಬುದು ನಾವು ಕಲಿತ ಪಾಠ 261008-4-1477810333