ಜಿಎಸ್ಟಿ: ಬಂಧನ ಅಧಿಕಾರ ನ್ಯಾಯಾಂಗಕ್ಕೆ
ನವದೆಹಲಿ: ಜಿಎಸ್ಟಿ ವ್ಯವಸ್ಥೆಯ ಅಡಿಯಲ್ಲಿ ಆರೋಪಿಗಳನ್ನು ಬಂಧಿಸುವ ಅಧಿಕಾರವನ್ನು ತೆರಿಗೆ ಅಧಿಕಾರಿಗಳಿಂದ ಹಿಂದಕ್ಕೆ ಪಡೆಯುವ ಪ್ರಸ್ತಾವಕ್ಕೆ ಜಿಎಸ್ಟಿ ಮಂಡಳಿಯು ಗುರುವಾರದ ಸಭೆಯಲ್ಲಿ ಒಪ್ಪಿಗೆ ನೀಡಿದೆ.ಸಭೆಯಲ್ಲಿ ಕೈಗೊಳ್ಳಲಾದ ತೀರ್ಮಾನವನ್ನು ಸುದ್ದಿಗಾರರಿಗೆ ತಿಳಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘ಎಸಗಿದ ತಪ್ಪಿಗೆ ದಂಡದ ಮೊತ್ತ ಇಂತಿಷ್ಟ

ನವದೆಹಲಿ: ಜಿಎಸ್ಟಿ ವ್ಯವಸ್ಥೆಯ ಅಡಿಯಲ್ಲಿ ಆರೋಪಿಗಳನ್ನು ಬಂಧಿಸುವ ಅಧಿಕಾರವನ್ನು ತೆರಿಗೆ ಅಧಿಕಾರಿಗಳಿಂದ ಹಿಂದಕ್ಕೆ ಪಡೆಯುವ ಪ್ರಸ್ತಾವಕ್ಕೆ ಜಿಎಸ್ಟಿ ಮಂಡಳಿಯು ಗುರುವಾರದ ಸಭೆಯಲ್ಲಿ ಒಪ್ಪಿಗೆ ನೀಡಿದೆ.ಸಭೆಯಲ್ಲಿ ಕೈಗೊಳ್ಳಲಾದ ತೀರ್ಮಾನವನ್ನು ಸುದ್ದಿಗಾರರಿಗೆ ತಿಳಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘ಎಸಗಿದ ತಪ್ಪಿಗೆ ದಂಡದ ಮೊತ್ತ ಇಂತಿಷ್ಟು ಎಂಬ ಉಲ್ಲೇಖ ಕಾನೂನಿನಲ್ಲಿ ಇಲ್ಲದಿರುವೆಡೆ, ದಂಡದ ಮೊತ್ತವನ್ನು ₹25 ಸಾವಿರದಿಂದ ₹10 ಸಾವಿರಕ್ಕೆ ಇಳಿಸಲಾಗುತ್ತದೆ’ ಎಂದರು. ಬದಲಾವಣೆಗಳು 2027ರ ಏಪ್ರಿಲ್ 1ರಿಂದ ಜಾರಿಗೆ ಬರಲಿವೆ.ತೆರಿಗೆ ವಿವರಗಳನ್ನು ತಡವಾಗಿ ಸಲ್ಲಿಸುವವರಿಂದ, ವಿವರಗಳನ್ನು ನಮೂದಿಸುವಾಗ ತಪ್ಪು ಮಾಡುವವರಿಂದ ಅಥವಾ ಪಾವತಿಯನ್ನು ತಡವಾಗಿ ಮಾಡುವವರಿಂದ ಬಾಕಿ ಮೊತ್ತದ ವಸೂಲಿ ಮಾಡಲಾಗುತ್ತದೆ, ಅವರಿಗೆ ಬಡ್ಡಿ ಅಥವಾ ಸೂಕ್ತ ಪ್ರಮಾಣದ ದಂಡ ವಿಧಿಸಲಾಗುತ್ತದೆ. ಅದಕ್ಕಿಂತ ಹೆಚ್ಚಿನ ಯಾವುದೇ ಶಿಕ್ಷೆಯನ್ನು ಅವರಿಗೆ ನೀಡಬಾರದು ಎಂಬ ಪ್ರಸ್ತಾವಕ್ಕೆ ಕೂಡ ಮಂಡಳಿಗೆ ಒಪ್ಪಿಗೆ ಸೂಚಿಸಿದೆ.₹5 ಕೋಟಿಗಿಂತ ಹೆಚ್ಚಿನ ಮೊತ್ತದ ಜಿಎಸ್ಟಿ ಪ್ರಕರಣಗಳಲ್ಲಿ ಮಾತ್ರ ಕ್ರಿಮಿನಲ್ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ನಿರ್ಮಲಾ ಅವರು ಹೇಳಿದರು. ಈವರೆಗೆ ಈ ಮಿತಿಯು ₹1 ಕೋಟಿ ಆಗಿತ್ತು.₹10 ಸಾವಿರಕ್ಕಿಂತ ಕಡಿಮೆ ಮೊತ್ತದ ವ್ಯಾಜ್ಯಗಳು ಇದ್ದಾಗ, ಅದಕ್ಕೆ ಸಂಬಂಧಿಸಿದಂತೆ ನೋಟಿಸ್ ಕೂಡ ಜಾರಿಮಾಡುವುದಿಲ್ಲ ಎಂದರು.ತಪ್ಪು ಮಾಡಿದವರಿಗೆ ದಂಡ ಅಥವಾ ಜೈಲುಶಿಕ್ಷೆ ಅಥವಾ ಅವೆರಡನ್ನೂ ವಿಧಿಸುವ ಹೊಣೆಯನ್ನು ಎಲ್ಲ ಪ್ರಕರಣಗಳಲ್ಲಿಯೂ ನ್ಯಾಯಾಂಗದ ವಿವೇಚನೆಗೆ ಬಿಡುವ ತೀರ್ಮಾನ ಕೈಗೊಳ್ಳಲಾಗಿದೆ.ಇತರ ಕೆಲವು ಪ್ರಮುಖ ತೀರ್ಮಾನಗಳು* ಇ–ವಾಣಿಜ್ಯ ವೇದಿಕೆಗಳ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುವ ಸಣ್ಣ ವ್ಯಾಪಾರಿಗಳಿಗೆ ಸರಳೀಕೃತ ನೋಂದಣಿ ಪ್ರಕ್ರಿಯೆ* ಜಿಎಸ್ಟಿ ದರ ಪರಿಷ್ಕರಣೆ ಬಗ್ಗೆ ವರ್ಷಕ್ಕೊಮ್ಮೆ ಪರಿಶೀಲನೆ* ಮರುಪಾವತಿ ಕ್ಲೇಮ್ಗಳನ್ನು ಸ್ವೀಕರಿಸಿರುವ ಬಗ್ಗೆ 15 ದಿನಗಳ ಬದಲಿಗೆ 10 ದಿನಗಳಲ್ಲಿ ತಿಳಿಸಲಾಗುತ್ತದೆ* ನೌಕರರಿಗಾಗಿ ಪಡೆದ ಆರೋಗ್ಯ ಮತ್ತು ಜೀವ ವಿಮೆಗಳ ಮೇಲೆ ಉದ್ಯೋಗದಾತರು ಐಟಿಸಿ ಪ್ರಯೋಜನ ಪಡೆಯಬಹುದು* ಸರಕು ಸಾಗಣೆ ಮಾಡುತ್ತಿರುವ ವಾಹನ ತಡೆಗಟ್ಟಲು ಹಿರಿಯ ಅಧಿಕಾರಿಗಳಿಂದ ಅನುಮತಿ ಅಗತ್ಯ* ವಹಿವಾಟಿನ ಪ್ರಧಾನ ಸ್ಥಳ ಸೇರಿದಂತೆ ಜಿಎಸ್ಟಿ ನೋಂದಣಿಯಲ್ಲಿ ಬದಲಾವಣೆ ತರುವುದಕ್ಕೆ ಸರಳ ಪ್ರಕ್ರಿಯೆ* ಹಲವೆಡೆ ಜಿಎಸ್ಟಿ ನೋಂದಣಿ ಹೊಂದಿರುವ, ಕೇಂದ್ರ ಜಿಎಸ್ಟಿ ನೋಂದಾಯಿತ ತೆರಿಗೆ ಪಾವತಿದಾರರಿಗೆ ಫೇಸ್ಲೆಸ್ ಪರಿಶೀಲನಾ ವ್ಯವಸ್ಥೆ