ಕರ್ಮದ ಪ್ರತಿಫಲ... ಗಂಧರ್ವ ಮಂಜನನ್ನು ಗೋಳಾಡಿಸಿದ ರಾಕ್ಷಸರು
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 13, 32 ದಿನಕ್ಕೆ ಕಾಲಿಟ್ಟಿದೆ. ಬಿಗ್ ಬಾಸ್ ಮನೆಯಲ್ಲಿ ರಾಕ್ಷಸ ಹಾಗೂ ಗಂಧರ್ವರ ಆಟ ದಿನದಿಂದ ದಿನಕ್ಕೆ ರಂಗೇರುತ್ತಿದೆ. ನಿನ್ನೆ ರಾಕ್ಷಸನಾಗಿ ಅಬ್ಬರಿಸಿದ್ದ ಮಾಡರ್ನ್ ಮಹಾಕವಿ ಮಂಜ ಇಂದು ಗಂಧರ್ವನಾಗಿದ್ದಾನೆ. ಹೀಗಾಗಿ ಆಟಕ್ಕೆ ಮತ್ತಷ್ಟು ಮೆರಗು ಬಂದಂತಾಗಿದೆ. ಕಲರ್ಸ್ ಕನ್ನಡ ಸಾಮಾಜಿಕ ಜಾಲತಾಣದಲ್ಲಿ ಪ್ರೋಮೊವೊಂದನ್

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 13, 32 ದಿನಕ್ಕೆ ಕಾಲಿಟ್ಟಿದೆ. ಬಿಗ್ ಬಾಸ್ ಮನೆಯಲ್ಲಿ ರಾಕ್ಷಸ ಹಾಗೂ ಗಂಧರ್ವರ ಆಟ ದಿನದಿಂದ ದಿನಕ್ಕೆ ರಂಗೇರುತ್ತಿದೆ. ನಿನ್ನೆ ರಾಕ್ಷಸನಾಗಿ ಅಬ್ಬರಿಸಿದ್ದ ಮಾಡರ್ನ್ ಮಹಾಕವಿ ಮಂಜ ಇಂದು ಗಂಧರ್ವನಾಗಿದ್ದಾನೆ. ಹೀಗಾಗಿ ಆಟಕ್ಕೆ ಮತ್ತಷ್ಟು ಮೆರಗು ಬಂದಂತಾಗಿದೆ. ಕಲರ್ಸ್ ಕನ್ನಡ ಸಾಮಾಜಿಕ ಜಾಲತಾಣದಲ್ಲಿ ಪ್ರೋಮೊವೊಂದನ್ನು ಹಂಚಿಕೊಂಡಿದೆ. View this post on Instagram ಮಂಜ ರಾಕ್ಷಸನಾಗಿದ್ದಾಗ ಎಲ್ಲರಿಗೂ ಹಿಂಸೆ ಕೊಟ್ಟಿದ್ದ. ಈಗ ಮಂಜಗೆ ಕರ್ಮ ರಿಟರ್ನ್ಸ್ ಆದಂತಾಗಿದೆ. ಮಂಜ ಗಂಧರ್ವನಾಗಿ ಬದಲಾಗುತ್ತಿದ್ದಂತೆ ಇಡೀ ರಾಕ್ಷಸರ ತಂಡ ಅವರ ವಿರುದ್ಧ ತಿರುಗಿ ಬಿದ್ದಿದೆ. ಈಗ ರಾಕ್ಷಸರು, ಮಂಜ ಕೊಟ್ಟ ಕಾಟಕ್ಕಿಂತ ದುಪ್ಪಟ್ಟನ್ನು ಅವರಿಗೆ ಮರಳಿ ನೀಡುತ್ತಿದ್ದಾರೆ. ಇಂದು (ಅ.8) ರಾತ್ರಿ 9.30ಕ್ಕೆ ಬಿಗ್ ಬಾಸ್ ಸೀಸನ್ 13, ಕಲರ್ಸ್ ಕನ್ನಡ ಹಾಗೂ ಜಿಯೋ ಹಾಟ್ಸ್ಟಾರ್ನಲ್ಲಿ ಪ್ರಸಾರವಾಗಲಿದೆ.
Read the complete story at Prajavani