‘ನಾವು ಮದುವೆ ಆಗುತ್ತಿದ್ದೇವೆ’ ಎನ್ನುತ್ತಾ ಹುಡುಗನ ಮುಖ ರಿವೀಲ್ ಮಾಡಿದ ಸ್ಪಂದನಾ
ಕನ್ನಡ ಕಿರುತೆರೆ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಸ್ಪಂದನಾ ಸೋಮಣ್ಣ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.ಈಗ, ಸ್ಪಂದನಾ ಸೋಮಣ್ಣ ಅವರು ತಾವು ಮದುವೆಯಾಗುತ್ತಿರುವ ಹುಡುಗನ ಫೋಟೊವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವರುಣ್ ಮುನಿರಾಜು ಅವರು, ಪ್ಯಾರಿಸ್ನಲ್ಲಿರುವ ಐಫೆಲ್ ಟವರ್ ಮುಂದೆ ಮಂಡಿಯೂರಿ ಸ್ಪಂದನಾಗೆ ಪ್ರೇಮ ನಿವೇದನ

ಕನ್ನಡ ಕಿರುತೆರೆ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಸ್ಪಂದನಾ ಸೋಮಣ್ಣ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.ಈಗ, ಸ್ಪಂದನಾ ಸೋಮಣ್ಣ ಅವರು ತಾವು ಮದುವೆಯಾಗುತ್ತಿರುವ ಹುಡುಗನ ಫೋಟೊವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವರುಣ್ ಮುನಿರಾಜು ಅವರು, ಪ್ಯಾರಿಸ್ನಲ್ಲಿರುವ ಐಫೆಲ್ ಟವರ್ ಮುಂದೆ ಮಂಡಿಯೂರಿ ಸ್ಪಂದನಾಗೆ ಪ್ರೇಮ ನಿವೇದನೆ ಮಾಡಿದ ಫೋಟೊ ಹಂಚಿಕೊಂಡಿದ್ದಾರೆ.ಇನ್ನು, ಫೋಟೊ ಜೊತೆಗೆ ‘ಇಬ್ಬರೂ ಉದ್ಯೋಗವಿಲ್ಲದೆ, ಕೈಯಲ್ಲಿ ಹಣವಿಲ್ಲದೆ, ಜೀವನ ನಮ್ಮನ್ನು ಎತ್ತ ಕರೆದೊಯ್ಯುತ್ತದೆ ಎಂದೇ ತಿಳಿಯದ ಆ ದಿನಗಳಲ್ಲಿ ನಾವು ಮೊದಲ ಬಾರಿಗೆ ಸಿಕ್ಕಿದ್ದು ನನಗಿನ್ನೂ ನೆನಪಿದೆ. ಅಂತಹ ಕಷ್ಟದ ದಿನಗಳಲ್ಲೂ ನಾವಿಬ್ಬರೂ ಒಬ್ಬರಿಗೊಬ್ಬರು ಹೆಗಲಾಗಿ ನಿಂತಿದ್ದೆವು’ ಎಂದಿದ್ದಾರೆ. ನನ್ನ ಆಡಿಷನ್ಗಳಿಗೆಲ್ಲಾ ನೀನು ನನ್ನೊಂದಿಗೆ ಬರುತ್ತಿದ್ದೆ, ಹೊಸ ವಿಷಯಗಳನ್ನು ಪ್ರಯತ್ನಿಸಲು ನನ್ನನ್ನು ಹುರಿದುಂಬಿಸುತ್ತಿದ್ದೆ, ಹಾಗೂ ನನ್ನ ಮೇಲೆಯೇ ನನಗೆ ಅನುಮಾನ ಮೂಡಿದಾಗಲೂ ಪ್ರತಿಯೊಂದು ಹೆಜ್ಜೆಯಲ್ಲೂ ನನ್ನನ್ನು ಸಂಪೂರ್ಣವಾಗಿ ನಂಬುತ್ತಿದ್ದೆ. ಈ ಎಲ್ಲಾ ವರ್ಷಗಳಲ್ಲಿ ನೀನೇ ನನ್ನ ಶಕ್ತಿ ಮತ್ತು ಅತ್ಯಂತ ದೊಡ್ಡ ಬೆಂಬಲವಾಗಿದ್ದೀಯ’ ಎಂದು ಭಾವುಕರಾಗಿದ್ದಾರೆ.