ಟೈಲ್ಸ್ ನಡುವೆ ಉಳಿದುಕೊಂಡಿರುವ ಕೊಳಕನ್ನು ಸುಲಭವಾಗಿ ಹೀಗೆ ಸ್ವಚ್ಛಗೊಳಿಸಿ
ಬಹುತೇಕ ಮನೆಗಳ ನೆಲಹಾಸು ಟೈಲ್ಸ್ಗಳಿಂದ ಕೂಡಿರುತ್ತದೆ. ಇದು ನೋಡಲು ಚೆನ್ನಾಗಿ ಕಾಣುವುದರ ಜೊತೆಗೆ ಮನೆಯ ಸೌಂದರ್ಯವನ್ನು ದುಪ್ಪಟ್ಟುಗೊಳಿಸುತ್ತದೆ. ಆದರೆ, ಮನೆ ಅಥವಾ ಪಾರ್ಕಿಂಗ್ ನೆಲವನ್ನು ಸ್ವಚ್ಛಗೊಳಿಸಿದ ಬಳಿಕವೂ ಟೈಲ್ಸ್ಗಳ ಮಧ್ಯೆ ಇರುವ ಕಿರಿದಾದ ಸಂದುಗಳಲ್ಲಿ ಕೊಳೆ ಉಳಿದುಕೊಳ್ಳುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಪಾರ್ಕಿಂಗ್ ಟೈಲ್ಸ್ಗಳಲ್ಲಿ ಹೆಚ್ಚಿನ ಕೊಳೆ

ಬಹುತೇಕ ಮನೆಗಳ ನೆಲಹಾಸು ಟೈಲ್ಸ್ಗಳಿಂದ ಕೂಡಿರುತ್ತದೆ. ಇದು ನೋಡಲು ಚೆನ್ನಾಗಿ ಕಾಣುವುದರ ಜೊತೆಗೆ ಮನೆಯ ಸೌಂದರ್ಯವನ್ನು ದುಪ್ಪಟ್ಟುಗೊಳಿಸುತ್ತದೆ. ಆದರೆ, ಮನೆ ಅಥವಾ ಪಾರ್ಕಿಂಗ್ ನೆಲವನ್ನು ಸ್ವಚ್ಛಗೊಳಿಸಿದ ಬಳಿಕವೂ ಟೈಲ್ಸ್ಗಳ ಮಧ್ಯೆ ಇರುವ ಕಿರಿದಾದ ಸಂದುಗಳಲ್ಲಿ ಕೊಳೆ ಉಳಿದುಕೊಳ್ಳುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಪಾರ್ಕಿಂಗ್ ಟೈಲ್ಸ್ಗಳಲ್ಲಿ ಹೆಚ್ಚಿನ ಕೊಳೆ ಸಂಗ್ರಹವಾಗುತ್ತದೆ. ಹಳೆಯ ಟೂತ್ಬ್ರಷ್ ಬಳಸಿಕೊಂಡು ಇಂತಹ ಕೊಳೆಯನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಗೃಹಾಲಂಕಾರ: ಗೋಡೆ ಅಲಂಕರಿಸಿ ಮನೆಯ ಅಂದ ಹೆಚ್ಚಿಸಿಪಾತ್ರೆ ತೊಳೆಯುವ ಲಿಕ್ವಿಡ್ ಮತ್ತು ಬಿಸಿ ನೀರುಒಂದು ಬಟ್ಟಲಿನಲ್ಲಿ ಉಗುರು ಬೆಚ್ಚಗಿನ ಬಿಸಿ ನೀರನ್ನು ತೆಗೆದುಕೊಂಡು, ಅದಕ್ಕೆ ಸ್ವಲ್ಪ ಪಾತ್ರೆ ತೊಳೆಯುವ ಲಿಕ್ವಿಡ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಟೂತ್ಬ್ರಷ್ ಅನ್ನು ಈ ಮಿಶ್ರಣದಲ್ಲಿ ಅದ್ದಿ, ಟೈಲ್ಸ್ ನಡುವಿನ ಸಂದುಗಳನ್ನು ಉಜ್ಜಿದರೆ ಕೊಳೆ ಸುಲಭವಾಗಿ ಹೊರಬರುತ್ತದೆ.ಅಡುಗೆ ಸೋಡಾ ಮತ್ತು ನಿಂಬೆ ರಸಒಂದು ಪಾತ್ರೆಯಲ್ಲಿ ಅಡುಗೆ ಸೋಡಾ ಹಾಗೂ ನಿಂಬೆ ರಸವನ್ನು ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಿ. ಇದನ್ನು ಟೈಲ್ಸ್ ನಡುವಿನ ಸಂದುಗಳಿಗೆ ಹಚ್ಚಿ 20 ನಿಮಿಷ ಬಿಡಿ. ನಂತರ ಟೂತ್ ಬ್ರಷ್ನಿಂದ ಉಜ್ಜಿ, ನೀರಿನಿಂದ ತೊಳೆದರೆ ಕಲೆಗಳು ಮಾಯವಾಗುತ್ತವೆ.ಟಿವಿ ಸ್ಕ್ರೀನ್ ಮೇಲೆ ಧೂಳು, ಜಿಡ್ಡು ಇದೆಯಾ? ಈ ರೀತಿ ಸ್ವಚ್ಛಗೊಳಿಸಿ...ಹೈಡ್ರೋಜನ್ ಪೆರಾಕ್ಸೈಡ್ ಮತ್ತು ಅಡುಗೆ ಸೋಡಾಅಡುಗೆ ಸೋಡಾ ಹಾಗೂ ಹೈಡ್ರೋಜನ್ ಪೆರಾಕ್ಸೈಡ್ ಮಿಶ್ರಣವು ಅತ್ಯುತ್ತಮ ಬ್ಲೀಚಿಂಗ್ ಏಜೆಂಟ್ನಂತೆ ಕೆಲಸ ಮಾಡುತ್ತದೆ. ಎರಡನ್ನೂ ಸೇರಿಸಿ ಪೇಸ್ಟ್ ಮಾಡಿ ಸಂದುಗಳ ಮೇಲೆ ಹಚ್ಚಿ 20 ನಿಮಿಷಗಳ ನಂತರ ಬ್ರಷ್ನಿಂದ ಉಜ್ಜಿ ಸ್ವಚ್ಛಗೊಳಿಸಿ.ಬ್ಲೀಚಿಂಗ್ ಪೌಡರ್ ಮತ್ತು ಬಿಸಿ ನೀರುಹೆಚ್ಚು ಕೊಳಕಾಗಿರುವ ಪಾರ್ಕಿಂಗ್ ಟೈಲ್ಸ್ಗಳಿಗೆ ಬ್ಲೀಚಿಂಗ್ ಪೌಡರ್ ಹಾಗೂ ಬಿಸಿ ನೀರು ಅತ್ಯಂತ ಪರಿಣಾಮಕಾರಿಯಾಗಿದೆ. ಬಿಸಿ ನೀರಿಗೆ ಬ್ಲೀಚಿಂಗ್ ಪೌಡರ್ ಸೇರಿಸಿ ಮಿಶ್ರಣ ತಯಾರಿಸಿ, ಟೈಲ್ಸ್ ಸಂದುಗಳ ಮೇಲೆ ಹಾಕಿ 20 ನಿಮಿಷ ಬಿಡಿ. ನಂತರ ಟೂತ್ ಬ್ರಷ್ನಿಂದ ಉಜ್ಜಿ ಸ್ವಚ್ಛಗೊಳಿಸಿದರೆ ಕಲೆಗಳ ಜೊತೆಗೆ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.ಬಾತ್ರೂಮ್ ಟೈಲ್ಸ್, ಟಬ್, ಕನ್ನಡಿ ಸ್ವಚ್ಛಗೊಳಿಸುವ ಸುಲಭ ವಿಧಾನ ಇಲ್ಲಿದೆಬೋರಾಕ್ಸ್ ಪೌಡರ್ ಬೋರಾಕ್ಸ್ ಪೌಡರ್ ಅನ್ನು ನೀರಿನೊಂದಿಗೆ ಸೇರಿಸಿ ಪೇಸ್ಟ್ ತಯಾರಿಸಿಕೊಂಡು, ಕೊಳಕಿರುವ ಸ್ಥಳಕ್ಕೆ ಹಚ್ಚಿ. 20 ನಿಮಿಷಗಳ ಬಳಿಕ ಉಜ್ಜಿ ಸ್ವಚ್ಛಗೊಳಿಸಿದರೆ, ಟೈಲ್ಸ್ ನಡುವಿನ ಕಲೆಗಳ ಜೊತೆಗೆ ಜಿಡ್ಡು ಕೂಡ ಮಾಯವಾಗುತ್ತದೆ.