ಮೈಸೂರು ದಸರಾ ಮಹೋತ್ಸವ: ಪರಂಪರೆ ಇಲಾಖೆಯಲ್ಲಿ ‘ನವದುರ್ಗೆ’ಯರು
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಮನೆಗಳಲ್ಲಿ ಬೊಂಬೆ ಕೂರಿಸುವ ವಿಶೇಷ ಆಚರಣೆ ಇದೆ. ಇದೇ ಮೊದಲ ಬಾರಿಗೆ, ದೊಡ್ಡಕೆರೆ ಮೈದಾನದ ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆವರಣದಲ್ಲಿ ಬೊಂಬೆಗಳನ್ನು ಜೋಡಿಸಿ ಪ್ರದರ್ಶಿಸುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಲು ನಿರ್ಧರಿಸಲಾಗಿದೆ.ನವದುರ್ಗೆಯರ ಅವತಾರಗಳ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಮನೆಗಳಲ್ಲಿ ಬೊಂಬೆ ಕೂರಿಸುವ ವಿಶೇಷ ಆಚರಣೆ ಇದೆ. ಇದೇ ಮೊದಲ ಬಾರಿಗೆ, ದೊಡ್ಡಕೆರೆ ಮೈದಾನದ ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆವರಣದಲ್ಲಿ ಬೊಂಬೆಗಳನ್ನು ಜೋಡಿಸಿ ಪ್ರದರ್ಶಿಸುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಲು ನಿರ್ಧರಿಸಲಾಗಿದೆ.ನವದುರ್ಗೆಯರ ಅವತಾರಗಳನ್ನು ಬಿಂಬಿಸುವ 5 ಸಾಲಿನ ಬೊಂಬೆಗಳನ್ನು ವರಾಂಡದಲ್ಲಿ ಜೋಡಿಸಲು ತೀರ್ಮಾನಿಸಲಾಗಿದೆ.ಬೊಂಬೆ ಕೂರಿಸುವುದು ಎಂದರೆ ಕಥೆಗಳನ್ನು ಹೇಳುವ ಪದ್ಧತಿ. ಮಹಿಷಾಸುರರನ್ನು ಸಂಹರಿಸಲು ಹೊರಟ ಚಾಮುಂಡಿಗೆ ದೇವ, ದೇವತೆಗಳು, ಸಕಲ ಜೀವಿಗಳು ತಮ್ಮ ಶಕ್ತಿಯನ್ನು ನೀಡುತ್ತವೆ. ಹಾಗೆ ಶಕ್ತಿಯನ್ನು ಕಳೆದುಕೊಂಡು ನಿಸ್ತೇಜ ಬೊಂಬೆಗಳಂತಾದ ಅವುಗಳನ್ನು ಆರಾಧಿಸುವ ಪರಂಪರೆ ಇದು. ಜೋಡಣೆಯು ಪೌರಾಣಿಕ, ಐತಿಹಾಸಿಕ ಹಿನ್ನೆಲೆಯನ್ನು ಪ್ರತಿಬಿಂಬಿಸುವ ಪದ್ಧತಿಯಾಗಿದೆ. ಬೊಂಬೆಗಳನ್ನು ಬೆಸ ಸಂಖ್ಯೆಯ ಹಂತಗಳಲ್ಲಿ ಜೋಡಿಸುವ ಪದ್ಧತಿ ಇದೆ. ಇದರಲ್ಲಿ ಒಂದು ಅವತಾರಕ್ಕೆ ಸಂಬಂಧಿಸಿದ ಬೊಂಬೆಗಳನ್ನು ಕೂರಿಸಲು ಇಲಾಖೆಯಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.ಪರಂಪರೆಯ ಭಾಗ: ‘ಶೈಲಪುತ್ರಿ‘, ‘ಬ್ರಹ್ಮಚಾರಿಣಿ, ‘ಚಂದ್ರಘಂಟಾ’, ‘ಕೂಷ್ಮಾಂಡಾ’, ‘ಸ್ಕಂದಮಾತಾ’, ‘ಕಾತ್ಯಾಯಿನಿ’, ‘ಕಾಳರಾತ್ರಿ’, ‘ಮಹಾಗೌರಿ’ ಹಾಗೂ ‘ಸಿದ್ಧಿದಾತೃ’ – ಈ ನವದುರ್ಗೆಯರ ಅವತಾರಗಳನ್ನು ಬಿಂಬಿಸುವ ಬೊಂಬೆಗಳನ್ನು ಜೋಡಿಸಲಾಗುವುದು. ಅವುಗಳನ್ನು ಅ.11ರಿಂದ 21ರವರೆಗೆ ಪ್ರದರ್ಶಿಸಲು ಯೋಜಿಸಲಾಗಿದೆ.ನವರಾತ್ರಿ ಸಂದರ್ಭದಲ್ಲಿ ಬೊಂಬೆಗಳನ್ನು ಕೂರಿಸುವ ಪದ್ಧತಿಯು ನಮ್ಮ ಪರಂಪರೆಯ ಮತ್ತು ಸಂಪ್ರದಾಯದ ಭಾಗವಾಗಿದೆ. ಹೀಗಾಗಿ, ಇಲಾಖೆಯಿಂದಲೂ ಈ ಬಾರಿ ನವದುರ್ಗೆಯರನ್ನು ಬಿಂಬಿಸುವ ಬೊಂಬೆಗಳನ್ನು ಜೋಡಿಸಿ ಪ್ರದರ್ಶಿಸಲಾಗುವುದು ಎಂದು ಇಲಾಖೆಯ ಉಪನಿರ್ದೇಶಕಿ (ಪರಂಪರೆ) ಸಿ.ಎನ್.ಮಂಜುಳಾ ‘ಪ್ರಜಾವಾಣಿ’ಗೆ ತಿಳಿಸಿದರು.ಪಾರಂಪರಿಕ ಸವಾರಿ, ನಡಿಗೆ:ಮೈಸೂರಿನ ಪರಂಪರೆ, ಇಲ್ಲಿರುವ ಹಲವಾರು ಐತಿಹಾಸಿಕ ಸ್ಥಳಗಳು, ಪಾರಂಪರಿಕ ತಾಣಗಳು ಹಾಗೂ ಪಾರಂಪರಿಕ ಕಟ್ಟಡಗಳ ಬಗ್ಗೆ ಸಾರ್ವಜನಿಕರು ಮತ್ತು ಪ್ರವಾಸಿಗರಲ್ಲಿ ಅರಿವು ಮೂಡಿಸುವ ಸಂಬಂಧ ಪಾರಂಪರಿಕ ಬೈಸಿಕಲ್ ಸವಾರಿ, ಪಾರಂಪರಿಕ ನಡಿಗೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಪಾಲ್ಗೊಳ್ಳುವವರಿಗೆ ಇತಿಹಾಸ ತಜ್ಞರಿಂದ ಆಯಾ ಸ್ಥಳದ ಬಗ್ಗೆ ಮಾಹಿತಿ ಕೊಡಿಸಲಾಗುವುದು.ಮೈಸೂರು ಪೇಟ ತೊಟ್ಟು, ಮೈಸೂರು ರೇಷ್ಮೆ ಮೊದಲಾದ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿದ ದಂಪತಿಗಳಿಗೆ ಟಾಂಗಾ ಸವಾರಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ.ಮಂಜುಳಾ ಮಂಜುಳಾ , ಪರಂಪರೆ ಇಲಾಖೆ ಉಪ ನಿರ್ದೇಶಕಿದಸರಾ ಸಂದರ್ಭದಲ್ಲಿ ಮೈಸೂರಿನ ಪರಂಪರೆಯನ್ನು ಪರಿಣಾಮಕಾರಿ ಬಿಂಬಿಸಲು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಬೊಂಬೆ ಕೂರಿಸುವವರ ಮನೆಗೆ ಭೇಟಿ ಬಹುಮಾನ ‘ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ಬೊಂಬೆಗಳನ್ನು ಕೂರಿಸುವವರು 10ರಿಂದ 15 ಮನೆಗಳಿಗೆ ಭೇಟಿ ನೀಡಿ ಉತ್ತಮವಾಗಿ ಆಯೋಜಿಸಿರುವವರಿಗೆ ಬಹುಮಾನ ನೀಡಲಾಗುವುದು. ಮೊದಲ ಮೂರು ಬಹುಮಾನವಾಗಿ ₹ 5ಸಾವಿರ ₹3ಸಾವಿರ ಹಾಗೂ ₹ 2 ಸಾವಿರ ನೀಡಲಾಗುವುದು. ಇದಕ್ಕಾಗಿ ಬೊಂಬೆಗಳನ್ನು ಕೂರಿಸುವ ಪದ್ಧತಿಯ ಬಗ್ಗೆ ಗೊತ್ತಿರುವವರಿಂದ ಸಲಹೆ ಪಡೆಯಲಾಗುವುದು. ಅರ್ಜಿ ಆಹ್ವಾನಿಸಲಾಗುವುದು. ನಾವೇ ಮನೆಗಳಿಗೆ ಹೋಗಿ ವೀಕ್ಷಿಸುತ್ತೇವೆ. ಅ.11ರಿಂದ 14ರವರೆಗೆ ಆ ಕಾರ್ಯ ನಡೆಸಲಾಗುವುದು’ ಎಂದು ಮಂಜುಳಾ ತಿಳಿಸಿದರು. ಸೆಲ್ಫಿ ವಿತ್ ಹೆರಿಟೇಜ್ ಬಿಲ್ಡಿಂಗ್’ ಫೋಟೊ ಸ್ಪರ್ಧೆ ಈ ಬಾರಿ ವಿಶೇಷವಾಗಿ ಯುವಜನರು ಹಾಗೂ ಜೆನ್ ಝೀ ತಲೆಮಾರನ್ನು ಸೆಳೆಯುವ ಉದ್ದೇಶದಿಂದ ‘ಸೆಲ್ಫಿ ವಿತ್ ಹೆರಿಟೇಜ್ ಬಿಲ್ಡಿಂಗ್’ (ಪಾರಂಪರಿಕ ಕಟ್ಟಡಗಳೊಂದಿಗೆ ಸೆಲ್ಫಿ) ಫೋಟೊ ಸ್ಪರ್ಧೆ ಆಯೋಜಿಸಲು ನಿರ್ಧರಿಸಲಾಗಿದೆ. ಇದರಲ್ಲಿ ಪಾಲ್ಗೊಳ್ಳುವಂತೆ ಅರ್ಜಿಗಳನ್ನು ಆಹ್ವಾನಿಸಲಾಗುವುದು. ಪರಂಪರೆಯನ್ನು ಬಿಂಬಿಸುವ ಸೆಲ್ಫಿ ಫೋಟೊ ಆಯ್ಕೆ ಮಾಡಿ ಮೂವರಿಗೆ ಬಹುಮಾನ (ಕ್ರಮವಾಗಿ ₹ 5ಸಾವಿರ ₹3ಸಾವಿರ ಹಾಗೂ ₹ 2ಸಾವಿರ ನೀಡಲಾಗುವುದು). ಇದಕ್ಕಾಗಿ ಪರಂಪರೆ ಹಾಗೂ ಫೋಟೊಗ್ರಫಿ ಬಗ್ಗೆ ಗೊತ್ತಿರುವವರ ನೆರವನ್ನೂ ಪಡೆಯಲಾಗುವುದು ಎಂದು ಮಂಜುಳಾ ಮಾಹಿತಿ ನೀಡಿದರು.