ಜಮ್ಮು– ಕಾಶ್ಮೀರದಲ್ಲಿ ಐವರು ಉಗ್ರರ ಬಂಧನ: ಅಪಾರ ಶಸ್ತ್ರಾಸ್ತ್ರ ವಶ
ಶ್ರೀನಗರ (ಪಿಟಿಐ): ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಐವರು ಭಯೋತ್ಪಾದಕರನ್ನು ಬಂಧಿಸಲಾಗಿದ್ದು, ಅವರ ಬಳಿ ಇದ್ದ ಅಪಾರ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದರು.ಖಚಿತ ಮಾಹಿತಿ ಮೇರೆಗೆ ಖೇವಾನ್ ಚಾದರ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಬಂಧಿತರಿಂದ ಎರಡು ಪಿಸ್ತೂಲು, 3 ಗ್ರೆನೇಡ್, ಮದ್ದುಗುಂಡುಗಳು ಹಾಗೂ

ಶ್ರೀನಗರ (ಪಿಟಿಐ): ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಐವರು ಭಯೋತ್ಪಾದಕರನ್ನು ಬಂಧಿಸಲಾಗಿದ್ದು, ಅವರ ಬಳಿ ಇದ್ದ ಅಪಾರ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದರು.ಖಚಿತ ಮಾಹಿತಿ ಮೇರೆಗೆ ಖೇವಾನ್ ಚಾದರ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಬಂಧಿತರಿಂದ ಎರಡು ಪಿಸ್ತೂಲು, 3 ಗ್ರೆನೇಡ್, ಮದ್ದುಗುಂಡುಗಳು ಹಾಗೂ ಮ್ಯಾಗಜಿನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.ಬಂಧಿತರನ್ನು ತಾಜಾಮುಲ್ ಹುಸೇನ್ ಮಿರ್, ಗುಫ್ಬಾಲ್, ರೆಹಮತ್ ಅಲಿ ನೈಕೂ, ತೆಹ್ರಿಮ್ ಅಹ್ಮದ್ ಭಟ್ ಹಾಗೂ ಮನ್ಜೂರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದರು.ಉಗ್ರರ ಅಡಗುತಾಣ ಧ್ವಂಸ: ಜಮ್ಮು ಮತ್ತು ಕಾಶ್ಮೀರದ ಕುಪ್ವಾಡ ಜಿಲ್ಲೆಯ ಹಂದ್ವಾರದಲ್ಲಿ ಉಗ್ರರ ಅಡಗುತಾಣವೊಂದನ್ನು ಧ್ವಂಸಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಖಚಿತ ಮಾಹಿತಿ ಮೇರೆಗೆ ಪೊಲೀಸರು, ಸೇನೆ ಹಾಗೂ ಸಿಆರ್ಪಿಎಫ್ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ, ಹಂದ್ವಾರದ ನಗದಾ ನಾರ್ ಅರಣ್ಯ ಪ್ರದೇಶದಲ್ಲಿ ಅಡಗುತಾಣವನ್ನು ಭೇದಿಸಲಾಯಿತು.ಸ್ಥಳದಲ್ಲಿದ್ದ ಮೂರು ಗ್ರೆನೇಡ್, ಒಂದು ಎಕೆ–47 ಬಂದೂಕು ಹಾಗೂ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.261008-51-1044692593