ನೈಸ್ ಅಕ್ರಮ ಮರೆಮಾಚಲು ಸಿಎಂ ಡಿಕೆ ಶಿವಕುಮಾರ್ ಟ್ರ್ಯಾಪ್ ಆರೋಪ: ಹೆಚ್ಡಿಕೆ ತಿರುಗೇಟು
– ನೈಸ್ ಕಂಪನಿ ಮಾಲೀಕ ನಿಮ್ಮನ್ನ ಟ್ರ್ಯಾಪ್ ಮಾಡೋಕೆ ಬಂದಿದ್ರಾ? ಅಂತ ಪ್ರಶ್ನೆ ನವದೆಹಲಿ: ನೈಸ್ ಅಕ್ರಮಗಳ ದಾಖಲೆ ಬಿಡುಗಡೆಯಿಂದ ಸಿಎಂಗೆ ಮುಜುಗರ ಆಗಿದೆ. ಅದಕ್ಕಾಗಿ ಟ್ರ್ಯಾಪ್ ಆರೋಪದಂತಹ ಸುದ್ದಿಗಳನ್ನ ಹರಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ತಿರುಗೇಟು ನೀಡಿದರು. ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸ

– ನೈಸ್ ಕಂಪನಿ ಮಾಲೀಕ ನಿಮ್ಮನ್ನ ಟ್ರ್ಯಾಪ್ ಮಾಡೋಕೆ ಬಂದಿದ್ರಾ? ಅಂತ ಪ್ರಶ್ನೆ ನವದೆಹಲಿ: ನೈಸ್ ಅಕ್ರಮಗಳ ದಾಖಲೆ ಬಿಡುಗಡೆಯಿಂದ ಸಿಎಂಗೆ ಮುಜುಗರ ಆಗಿದೆ. ಅದಕ್ಕಾಗಿ ಟ್ರ್ಯಾಪ್ ಆರೋಪದಂತಹ ಸುದ್ದಿಗಳನ್ನ ಹರಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ತಿರುಗೇಟು ನೀಡಿದರು. ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವರು ʻನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಲು ಯತ್ನಿಸಿದ್ದರುʼ ಎನ್ನುವ ಡಿಕೆ ಶಿವಕುಮಾರ್ (DK Shivakumar) ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು. ಮುಖ್ಯಮಂತ್ರಿ ಹೇಳಿಕೆ ನೋಡಿ ಎಂತಾ ಮುಖ್ಯಮಂತ್ರಿ ಬಂದರೂ ಅಂತಾ ಚರ್ಚೆ ಆಗ್ತಿದೆ. ಕ್ಯಾಬಿನೆಟ್ ನಲ್ಲಿ ಚರ್ಚೆ ಆಗಿದ್ದು ಮಾಧ್ಯಮದಲ್ಲಿ ಬರಲು ಕಾರಣ ಏನು? ನೈಸ್ ಸುದ್ದಿ ಮುನ್ನಲೆಗೆ ಬರಬಾರದು ಎನ್ನುವುದು ಅವರ ಉದ್ದೇಶ. ನೈಸ್ ಅಕ್ರಮಗಳ (NICE Scam) ದಾಖಲೆ ಬಿಡುಗಡೆಯಿಂದ ಸಿಎಂಗೆ ಮುಜುಗರವಾಗಿದೆ. ಅದಕ್ಕಾಗಿ ಈ ರೀತಿಯ ಸುದ್ದಿಗಳನ್ನ ಹರಡುತ್ತಿದ್ದಾರೆ ಎಂದು ಕುಟುದರು. ಯಾರು ಆ ಪಿತಾಮಹಾ? ನನ್ನನ್ನ ಟ್ರ್ಯಾಪ್ ಮಾಡುತ್ತಿದ್ದಾರೆ, ಫೋಟೊ ಇದ್ದಾವೆ ಅಂತಾರೆ. ಪಿತಾಮಹ ಯಾರು ಅಂತಾ ಗೊತ್ತಿದೆ ಎಂದಿದ್ದಾರೆ. ಯಾರು ಆ ಪಿತಾಮಹ ಜನರ ಮುಂದೆ ಇಡಿ. ಸಿದ್ದರಾಮಯ್ಯ ಅವರನ್ನ ಟ್ರ್ಯಾಪ್ ಮಾಡಲು ಯತ್ನಿಸಿದ್ರು ಅನ್ನೊ ಸುದ್ದಿ ಇದೆ. ಯಾಕೆ ಇದನ್ನೆಲ್ಲ ಮುಚ್ಚಿಡುತ್ತಿದ್ದೀರಿ. ನನಗೂ ಟ್ರ್ಯಾಪ್ ಮಾಡುವ ಯತ್ಬ ನಡೆದಿದೆ ಅನ್ನೋದಾದ್ರೆ ಯಾಕೆ ಅವರನ್ನ ಹಿಡಿಲಿಲ್ಲ, ಕಂಡು ಕಂಡು ಯಾಕೆ ಬಿಟ್ಟಿರಿ. ನೈಸ್ ಕಂಪನಿ ಮಾಲೀಕ ನಿಮ್ಮನ್ನ ಭೇಟಿ ಮಾಡಲು ಬಂದಿದ್ದ ದೃಶ್ಯ ನೋಡಿದೆ. ಅವರೂ ನಿಮ್ಮನ್ನ ಟ್ರ್ಯಾಪ್ ಮಾಡಲು ಬಂದಿದ್ದಾರಾ? ಕುಂಬಳಕಾಯಿ ಕಳ್ಳರಂತೆ ಅವರೇ ವರ್ತಿಸುತ್ತಿದ್ದಾರೆ. ಅವರ ಬಳಿ ಇದು ತನಿಖೆಯಾಗಬೇಕು, ಯಾರು ಪಿತಾಮಹಾ? ರಾಜ್ಯಪಾಲರ ಭೇಟಿ ಮಾಡಿದ ನಿಯೋಗದಲ್ಲಿ ಒಬ್ಬರು ಇದರ ಪಿತಾಮಹ ಎಂದಿದ್ದಾರೆ. ಅವರು ಯಾರು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು. ಟ್ರ್ಯಾಪ್ ಮಾಡಲು ಬಂದವರನ್ನ ಯಾಕೆ ಬಿಟ್ಟರು? ಸಿಎಂ ಭೇಟಿಗೆ ಬಂದ್ರೆ ಫೊನ್ ಹೊರಗಿಟ್ಟು ಹೋಗಬೇಕು. ಟ್ರ್ಯಾಪ್ ಮಾಡಲು ಬಂದವರನ್ನ ಯಾಕೆ ಬಿಟ್ಟರು? ಕಾಲ ಬಂದಾಗ ದಾಖಲೆ ಬಿಡ್ತಾರಂತೆ. ಕೆಲಸ ಮಾಡಲು ಆಗದೇ, ಅಕ್ರಮ ಬಯಲಿಗೆ ಎಳೆದಾಗ ಇಂತಹ ಸುದ್ದಿ ಬಿಡ್ತಾರೆ. ಇದು ಅವರಿಗೆ ಸುತ್ತಿಕೊಳ್ಳುತ್ತದೆ, ಕುಂಬಳಕಾಯಿ ಕಳ್ಳತನ ಕಥೆ ಸಿಎಂ ಹೆಗಲ ಮೇಲೆ ಕೂತಿದೆ. ರಮೇಶ್ ಜಾರಕಿಹೊಳಿ ಟ್ರ್ಯಾಪ್ ಮಾಡಿದ್ದರು ಯಾರು? ಸತೀಶ್, ರಾಜಣ್ಣ ಅವರನ್ನ ಸೈಲೆಂಟ್ ಮಾಡಿದ್ದರು ಯಾರು? 134 ಮಂದಿ ಶಾಸಕರು ಇದ್ದಾರೆ ಸರ್ಕಾರ ಅಸ್ಥಿರ ಯಾಕೆ ಆಗುತ್ತೆ. ಬಿಜೆಪಿ ಜೆಡಿಎಸ್ ನಲ್ಲಿ ಬೆಂಬಲ ಕೊಡೋರು ಇದಾರೆ ಅಂತಾರೆ. ನಮ್ಮಗೆ ಈಗ ಸರ್ಕಾರ ಅಸ್ಥಿರ ಮಾಡುವ ಶಕ್ತಿ ಇದಿಯಾ? ಸುಳ್ಳು ಹೇಳಿಕೊಂಡು ಎಷ್ಟು ದಿನ ರಾಜಕೀಯ ಮಾಡ್ತಿರಿ? ರಾಜಕೀಯ ವಾತಾವರಣ ಹಾಳು ಮಾಡುವ ಕೆಲಸ ನಡೆಯುತ್ತಿದೆ ವಾಗ್ದಾಳಿ ನಡೆಸಿದರು. ಇನ್ನೂ ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯೆ, ಇಂಜಿನಿಯರ್ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಅಧಿಕಾರಿಗಳು ತಂದು ಕೊಟ್ಟ ಪೆನ್ ಡ್ರೈವ್ ತೋರಿಸಿದ್ದೇನೆ. ಇನ್ಯಾವುದೊ ಪೆನ್ಡ್ರೈವ್ ತೋರಿಸಿಲ್ಲ. ಕೆಪಿಎಸ್ಸಿಯಲ್ಲಿ 2024ರ ನೇಮಕಾತಿಗೆ ಸಹಿ ಹಾಕಿದ್ದಕ್ಕೆ ಉತ್ತರ ಕೊಟ್ಟಿಲ್ಲ. ಗೃಹ ಸಚಿವರು ನೈತಿಕತೆ ಬಗ್ಗೆ ಪ್ರಶ್ನೆ ಮಾಡ್ತಾರೆ, ನಾನು ಟ್ರಸ್ಟ್ ಮಾಡಿಕೊಂಡು ಸರ್ಕಾರದ ಭೂಮಿ ಹೊಡೆದಿಲ್ಲ. ಬುದ್ಧನ ಹೆಸರಿನಲ್ಲಿ ಏನೇಲ್ಲ ಅಕ್ರಮ ಮಾಡಿದ್ದೀರಿ? ನನ್ನ ನೈತಿಕತೆ ಪ್ರಶ್ನೆ ಮಾಡುವ ಬದಲು ಉತ್ತರ ಕೊಡಿ ಎಂದು ಸವಾಲು ಹಾಕಿದರು. ಸಿದ್ದಾರ್ಥ ಟ್ರಸ್ಟ್ ಅಕ್ರಮವಾಗಿ ಕುಟುಂಬದ ವ್ಯವಹಾರ ನಡೆಯುತ್ತಿದೆ. ಹೈಕೋರ್ಟ್ ಆದೇಶ ತಡೆಯುವ ಕೆಲಸ ಆಯ್ತು. ನಮ್ಮ ಮನೆ ವ್ಯವಹಾರ ಸರಿಪಡಿಸಿಕೊಳ್ಳುವುದು ನಮ್ಮಗೆ ಗೊತ್ತಿದೆ. ನಿಮ್ಮ ಕಥೆ ಏನು ಹೇಳಿ? ಎಂದು ಸಚಿವ ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದರು.