ಉತ್ತರ ಪಾಲಿಕೆ | ಪ್ರತಿ ಕಿಲೋ ಮೀಟರ್ಗೆ 6 ಗುಂಡಿಗಳು: ಪೊಮ್ಮಲ ಸುನೀಲ್ಕುಮಾರ್
ಬೆಂಗಳೂರು: ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 2,493.5 ಕಿ.ಮೀ. ಉದ್ದದ ರಸ್ತೆಗಳಿದ್ದು, ಅದರಲ್ಲಿ ಶೇ 82ರಷ್ಟು ರಸ್ತೆ ಉತ್ತಮವಾಗಿದೆ. ಪ್ರತಿ ಕಿಲೋಮೀಟರ್ ರಸ್ತೆಗೆ 5.8 ಗುಂಡಿಗಳಿವೆ ಎಂದು ಆಯುಕ್ತ ಪೊಮ್ಮಲ ಸುನೀಲ್ಕುಮಾರ್ ತಿಳಿಸಿದ್ದಾರೆ.ನಗರ ಪಾಲಿಕೆ ವ್ಯಾಪ್ತಿಯ ಏಳು ವಿಭಾಗಗಳ 72 ವಾರ್ಡ್ಗಳಲ್ಲಿ ರಸ್ತೆಗಳ ಸ್ಥಿತಿಗತಿಯನ್ನು ಎಐ ಆಧಾರಿತ ತಂತ್ರಜ್ಞಾನ

ಬೆಂಗಳೂರು: ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 2,493.5 ಕಿ.ಮೀ. ಉದ್ದದ ರಸ್ತೆಗಳಿದ್ದು, ಅದರಲ್ಲಿ ಶೇ 82ರಷ್ಟು ರಸ್ತೆ ಉತ್ತಮವಾಗಿದೆ. ಪ್ರತಿ ಕಿಲೋಮೀಟರ್ ರಸ್ತೆಗೆ 5.8 ಗುಂಡಿಗಳಿವೆ ಎಂದು ಆಯುಕ್ತ ಪೊಮ್ಮಲ ಸುನೀಲ್ಕುಮಾರ್ ತಿಳಿಸಿದ್ದಾರೆ.ನಗರ ಪಾಲಿಕೆ ವ್ಯಾಪ್ತಿಯ ಏಳು ವಿಭಾಗಗಳ 72 ವಾರ್ಡ್ಗಳಲ್ಲಿ ರಸ್ತೆಗಳ ಸ್ಥಿತಿಗತಿಯನ್ನು ಎಐ ಆಧಾರಿತ ತಂತ್ರಜ್ಞಾನ ಬಳಸಿ ಸಮಗ್ರವಾಗಿ ಸಮೀಕ್ಷೆ ನಡೆಸಲಾಗಿದೆ. ಡ್ಯಾಶ್ಕ್ಯಾಮ್ ಮೂಲಕ ಸಂಗ್ರಹಿಸಲಾದ ನೈಜ ರಸ್ತೆ ಚಿತ್ರಗಳನ್ನು ಆಧರಿಸಿ, ರಸ್ತೆ ಮೇಲ್ಮೈಯ ಸ್ಥಿತಿ, ರಸ್ತೆ ಗುಂಡಿಗಳು, ದುರಸ್ತಿ ಅಗತ್ಯವಿರುವ ಸ್ಥಳಗಳು ಹಾಗೂ ವಿವಿಧ ಇಲಾಖೆಗಳ ಕಾಮಗಾರಿಗಳಿಂದ ಉಂಟಾದ ರಸ್ತೆ ಹಾನಿ ಸೇರಿದಂತೆ ವಿವಿಧ ಅಂಶಗಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ.ಈ ಸಮೀಕ್ಷೆಯ ಮೂಲಕ ಪಾಲಿಕೆ ವ್ಯಾಪ್ತಿಯ ರಸ್ತೆ ಜಾಲದ ಪ್ರಸ್ತುತ ಸ್ಥಿತಿಯನ್ನು ಸಮಗ್ರವಾಗಿ ಗುರುತಿಸುವುದರ ಜೊತೆಗೆ, ಯಾವ ಪ್ರದೇಶಗಳಲ್ಲಿ ರಸ್ತೆ ನಿರ್ವಹಣೆ, ದುರಸ್ತಿ, ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂಬುದನ್ನು ಗುರುತಿಸಲು ತಂತ್ರಜ್ಞಾನವನ್ನು ಬಳಸಲಾಗಿದೆ. 1,426.8 ಕಿ.ಮೀ. ರಸ್ತೆ ಉತ್ತಮ ಸ್ಥಿತಿಯಲ್ಲಿದ್ದು, 607.1 ಕಿ.ಮೀ. ರಸ್ತೆಗಳಲ್ಲಿ ಸಣ್ಣ ಪ್ರಮಾಣದ ಮೇಲ್ಮೈ ದೋಷಗಳು ಕಂಡುಬಂದಿವೆ. ಈ ಎರಡು ವರ್ಗಗಳನ್ನು ಒಟ್ಟುಗೂಡಿಸಿದಾಗ, ಸಮೀಕ್ಷೆಗೊಳಪಡಿಸಿದ ರಸ್ತೆ ಉದ್ದದ ಶೇ.82.1ರಷ್ಟು ಭಾಗವು ಉತ್ತಮ ಸಮರ್ಪಕದ ಸ್ಥಿತಿಯಲ್ಲಿದೆ. ಉಳಿದ ಶೇ 17.9ರಷ್ಟು ರಸ್ತೆ ಉದ್ದದಲ್ಲಿ ಸ್ಥಳೀಯ ರಸ್ತೆ ಹಾನಿ, ಯುಟಿಲಿಟಿ ಕಾಮಗಾರಿಗಳಿಂದ ಉಂಟಾದ ಹಾನಿ ಹಾಗೂ ಡಾಂಬರು ಇಲ್ಲದ/ಕಚ್ಚಾ ರಸ್ತೆಗಳ ಸಮಸ್ಯೆಗಳು ಗುರುತಿಸಲ್ಪಟ್ಟಿವೆ ಎಂದು ವಿವರ ನೀಡಿದ್ದಾರೆ.14,393 ರಸ್ತೆ ಗುಂಡಿ: ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 14,393 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದೆ. ಸರಾಸರಿಯಾಗಿ ಪ್ರತಿ ಕಿ.ಮೀ.ಗೆ 5.8 ರಸ್ತೆ ಗುಂಡಿಗಳು ಕಂಡುಬಂದಿವೆ. ರಸ್ತೆ ಗುಂಡಿಗಳ ಜೊತೆಗೆ, ವಿವಿಧ ಯುಟಿಲಿಟಿ ಕಾಮಗಾರಿಗಳಿಂದ ರಸ್ತೆಗಳಿಗೆ ಉಂಟಾಗಿರುವ ಹಾನಿಯನ್ನೂ ಸಮೀಕ್ಷೆಯಲ್ಲಿ ದಾಖಲಿಸಲಾಗಿದೆ.ಡಾಂಬರು ಇಲ್ಲದ ಕಚ್ಚಾ ರಸ್ತೆಗಳು 102.8 ಕಿ.ಮೀ. ಇದ್ದು, ಒಟ್ಟು 821 ರಸ್ತೆಗಳನ್ನು ಗುರುತಿಸಲಾಗಿದೆ. ಇಂತಹ ರಸ್ತೆಗಳನ್ನು ಅಗತ್ಯಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸಿ, ಸಾರ್ವಜನಿಕರಿಗೆ ಉತ್ತಮ ಹಾಗೂ ಸುರಕ್ಷಿತ ರಸ್ತೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ರಸ್ತೆ ಅಭಿವೃದ್ಧಿ ಯೋಜನೆಗಳಲ್ಲಿ ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.ಎಐ ಆಧಾರಿತ ಸಮೀಕ್ಷೆಯಿಂದ ಲಭ್ಯವಾಗಿರುವ ಮಾಹಿತಿಯನ್ನು ಆಧರಿಸಿ, ರಸ್ತೆ ಗುಂಡಿಗಳು, ಮೇಲ್ಮೈ ದೋಷಗಳು, ಯುಟಿಲಿಟಿ ಕಾಮಗಾರಿಗಳಿಂದ ಉಂಟಾಗಿರುವ ಹಾನಿ ಹಾಗೂ ಡಾಂಬರು ಇಲ್ಲದ ರಸ್ತೆಗಳಂತಹ ಸಮಸ್ಯೆಗಳನ್ನು ಗುರುತಿಸಿ, ಅಗತ್ಯವಿರುವ ಕಡೆಗಳಲ್ಲಿ ರಸ್ತೆ ನಿರ್ವಹಣೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನಿಗದಿಪಡಿಸಲು ಪಾಲಿಕೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ. ಈ ಮೂಲಕ ರಸ್ತೆ ನಿರ್ವಹಣೆಯನ್ನು ಕೇವಲ ದೂರು ಆಧಾರಿತವಾಗಿ ನಡೆಸುವುದಕ್ಕಿಂತ, ಡೇಟಾ ಮತ್ತು ತಂತ್ರಜ್ಞಾನ ಆಧಾರಿತವಾಗಿ ಯೋಜಿಸಿ, ಅಗತ್ಯವಿರುವ ಸ್ಥಳಗಳಿಗೆ ಆದ್ಯತೆ ನೀಡಿ ಕಾಮಗಾರಿಗಳನ್ನು ಕೈಗೊಳ್ಳಲು ಈ ಸಮೀಕ್ಷೆ ಸಹಕಾರಿಯಾಗಲಿದೆ ಎಂದಿದ್ದಾರೆ.ಎಸ್.ಬಿಂಗಿಪುರದಲ್ಲಿ ಪ್ರಾಣಿ ಚಿತಾಗಾರಜಿಗಣಿ ಹೋಬಳಿಯ ಎಸ್. ಬಿಂಗಿಪುರದಲ್ಲಿನ ಬೇಗೂರು-ಕೊಪ್ಪ ಮುಖ್ಯರಸ್ತೆಯಲ್ಲಿ ಪಾಲಿಕೆಗೆ ಸೇರಿದ ಜಾಗದಲ್ಲಿ ಪ್ರಾಣಿ ಚಿತಾಗಾರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, 2026-27ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಅಗತ್ಯ ಹಣವನ್ನು ಕಾಯ್ದಿರಿಸಲಾಗಿದೆ’ ಎಂದು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ತಿಳಿಸಿದರು.ಸಾರ್ವಜನಿಕರಿಂದ ಹಾಗೂ ಪ್ರಾಣಿ ಪ್ರಿಯರಿಂದ ಈ ಭಾಗದಲ್ಲಿ ಪ್ರಾಣಿ ಚಿತಾಗಾರ ಸ್ಥಾಪನೆಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿರುವುದರಿಂದ, ಯಾವುದೇ ವಿಳಂಬವಿಲ್ಲದೆ ತ್ವರಿತಗತಿಯಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಸತ್ತ ಪ್ರಾಣಿಗಳ ಕಳೇಬರಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲೂ ಸುಸಜ್ಜಿತ ಪ್ರಾಣಿ ಚಿತಾಗಾರವನ್ನು ಶೀಘ್ರವೇ ಸ್ಥಾಪಿಸಲು ತುರ್ತುಗಾಗಿ ಯೋಜನೆ ರೂಪಿಸಲಾಗುತ್ತಿದೆ. ಈಗಾಗಲೇ ಪ್ರಾಣಿ ಚಿತಾಗಾರಗಳನ್ನು ಸ್ಥಾಪಿಸಿ ನಿರ್ವಹಿಸುತ್ತಿರುವ ಅನುಭವವುಳ್ಳ ಸಂಸ್ಥೆಗಳು ಹಾಗೂ ತಜ್ಞರೊಂದಿಗೆ ಚರ್ಚೆ ನಡೆಸಲಾಗಿದೆ. ಚಿತಾಗಾರಕ್ಕೆ ಬೇಕಾಗುವ ಜಾಗದ ವಿಸ್ತೀರ್ಣ, ನಕ್ಷೆ, ವಿದ್ಯುತ್, ಎಲ್ಪಿಜಿ, ಸಿಎನ್ಜಿ ಅಥವಾ ಹೈಬ್ರಿಡ್ ಇಂಧನ ವ್ಯವಸ್ಥೆ, ನಿರ್ಮಾಣದ ಅಂದಾಜು ವೆಚ್ಚ ಹಾಗೂ ಕಾಲಮಿತಿ, ಪ್ರತಿ ಕಳೇಬರದ ದಹನಕ್ಕೆ ತಗಲುವ ವೆಚ್ಚ, ದಿನವೊಂದಕ್ಕೆ ದಹನ ಮಾಡಬಹುದಾದ ಪ್ರಾಣಿಗಳ ಸಂಖ್ಯೆ ಮತ್ತು ಸಂಬಂಧಿತ ಇಲಾಖೆಗಳಿಂದ ಪಡೆಯಬೇಕಾದ ಶಾಸನಬದ್ಧ ಅನುಮೋದನೆಗಳ ಕುರಿತು ಪರಿಶೀಲನೆ ನಡೆಸಲಾಗಿದೆ ಎಂದರು. ಗುತ್ತಿಗೆದಾರರಿಗೆ ದಂಡ ವಿಧಿಸಿ: ಮಹೇಶ್ವರ್ ರಾವ್ಜಿಬಿಎ ವ್ಯಾಪ್ತಿಯಲ್ಲಿ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸಿ, ಕೇಂದ್ರೀಕೃತ ನಿರ್ವಹಣಾ ವ್ಯವಸ್ಥೆ ಅಳವಡಿಸದಿರುವ ಗುತ್ತಿಗೆದಾರರಿಗೆ ನಿಯಮಾನುಸಾರ ದಂಡ ವಿಧಿಸುವಂತೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.ಪೂರ್ವ ನಗರ ಪಾಲಿಕೆಯನ್ನು ಹೊರತುಪಡಿಸಿ ಉಳಿದ ನಾಲ್ಕು ನಗರ ಪಾಲಿಕೆಗಳಲ್ಲಿ ಈಗಾಗಲೇ 4.5 ಲಕ್ಷ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಎಲ್ಇಡಿ ಬೀದಿ ದೀಪಗಳ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು. ದುರಸ್ತಿಯಾಗಿರುವ ಬೀದಿ ದೀಪಗಳು ಹಾಗೂ ಸಹಾಯ ತಂತ್ರಾಂಶದಲ್ಲಿ ದಾಖಲಾಗುವ ದೂರುಗಳನ್ನು ತ್ವರಿತವಾಗಿ ಪರಿಹರಿಸಬೇಕು. ಸರಿಯಾಗಿ ಕಾರ್ಯನಿರ್ವಹಿಸದ ಗುತ್ತಿಗೆದಾರರಿಗೆ ನಿಯಮಾನುಸಾರ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.261008-4-1630507491