ರಾಜ್ಘಾಟ್ನಲ್ಲಿ ವಿಪಕ್ಷ ನಾಯಕರ ಪ್ರಾರ್ಥನೆ: ಸಿಇಸಿ ರಾಜೀನಾಮೆಗೆ ಪಟ್ಟು
ನವದೆಹಲಿ: 'ಇಂಡಿಯಾ' ಮೈತ್ರಿಕೂಟದ ನಾಯಕರು ಗುರುವಾರ ಮಹಾತ್ಮ ಗಾಂಧಿ ಸಮಾಧಿ ಸ್ಥಳವಾದ ರಾಜ್ಘಾಟ್ನಲ್ಲಿ ಪ್ರಾರ್ಥನೆ ಸಲ್ಲಿಸಿ ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) 'ಮತಗಳ್ಳತನ'ದ ಸಂಚು ರೂಪಿಸಿ ಇಡೀ ದೇಶವನ್ನೇ ಹೈಜಾಕ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ

ನವದೆಹಲಿ: 'ಇಂಡಿಯಾ' ಮೈತ್ರಿಕೂಟದ ನಾಯಕರು ಗುರುವಾರ ಮಹಾತ್ಮ ಗಾಂಧಿ ಸಮಾಧಿ ಸ್ಥಳವಾದ ರಾಜ್ಘಾಟ್ನಲ್ಲಿ ಪ್ರಾರ್ಥನೆ ಸಲ್ಲಿಸಿ ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) 'ಮತಗಳ್ಳತನ'ದ ಸಂಚು ರೂಪಿಸಿ ಇಡೀ ದೇಶವನ್ನೇ ಹೈಜಾಕ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜ್ಘಾಟ್ಗೆ ತೆರಳಿ ಗಾಂಧಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ವಿಪಕ್ಷಗಳ ನಾಯರು ಬಿಜೆಪಿ ಸರ್ಕಾರ ಹಾಗೂ ಮುಖ್ಯ ಚುನಾವಣಾ ಆಯುಕ್ತರಿಗೆ ಸದ್ಬುದ್ಧಿ ನೀಡಲಿ ಎಂದು ಪ್ರಾರ್ಥಿಸಿ ಧರಣಿ ಕುಳಿತರು. VIDEO | Delhi: Lok Sabha LoP Rahul Gandhi leaves from Raj Ghat after paying tribute to Mahatma Gandhi. (Full video available on PTI Videos - https://t.co/d8jp61yd2p) pic.twitter.com/bIqkFkEmGA— Press Trust of India (@PTI_News) October 8, 2026 ಶುಕ್ರವಾರವೂ ಮುಂದುವರಿಯಲಿದೆ ಹೋರಾಟ: ಇಂಡಿಯಾ ಒಕ್ಕೂಟದ ಹೋರಾಟವು ಶುಕ್ರವಾರವೂ ಮುಂದುವರಿಯಲಿದ್ದು, ಬೆಳಿಗ್ಗೆ ಸಂಸತ್ ಭವನದಲ್ಲಿ ಸಭೆ ಸೇರುವ ಸಾಧ್ಯತೆಯಿದೆ ಎಂದು ನಾಯಕರು ತಿಳಿಸಿದ್ದಾರೆ.ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲದು ಎಂದು ನಾಯಕರು ಸ್ಪಷ್ಟಪಡಿಸಿದ್ದಾರೆ.VIDEO | Delhi: Visuals of Congress National President Mallikarjun Kharge (@kharge), Lok Sabha LoP Rahul Gandhi (@RahulGandhi), Congress MPs Priyanka Gandhi Vadra (@priyankagandhi), K Suresh, KC Venugopal (@kcvenugopalmp), and other leaders at Raj Ghat after paying tribute to… pic.twitter.com/JuX8F8sjb5— Press Trust of India (@PTI_News) October 8, 2026 ಸಂವಿಧಾನ ನಾಶ: ರಾಹುಲ್ಈ ಮುನ್ನ ಮಾತನಾಡಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, 'ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಸಿಇಸಿ ಜ್ಞಾನೇಶ್ ಕುಮಾರ್ ಸಂವಿಧಾನವನ್ನು ನಾಶಪಡಿಸಿದ್ದಾರೆ. ಅವರಿಗೆ ತಕ್ಕ ಪಾಠವಾಗಬೇಕು. ದೇಶದ ಜನರಿಗೆ ನ್ಯಾಯ ಸಿಗುವಂತೆ ಮಾಡುತ್ತೇವೆ, ಇದು ನಮ್ಮ ಗ್ಯಾರಂಟಿ' ಎಂದು ಹೇಳಿದ್ದಾರೆ. ये तीसरा दिन है। हमने peacefully protest किया और जनता के मुद्दे उठाए हैं। हमने यहां आकर प्रार्थना की कि इस सरकार को सद्बुद्धि दे। वोट की चोरी बंद होनी चाहिए, जिन्होंने गलतियाँ की हैं उन्हें इस्तीफा देना चाहिए और देश के नागरिकों का वोट देने का अधिकार सुरक्षित रहना चाहिए। pic.twitter.com/Q1Y20c3Ejj— Mallikarjun Kharge (@kharge) October 8, 2026 ಮೋದಿ, ಶಾ, ಜ್ಞಾನೇಶ್, ಭಾಗವತ್ರನ್ನು ಕಾನೂನಿನ ಮುಂದೆ ತರುತ್ತೇವೆ: ರಾಹುಲ್ ಗಾಂಧಿಖರ್ಗೆ ನೇತೃತ್ವದಲ್ಲಿ 2ನೇ ಸಲ ಔತಣಕೂಟ: ರಾಜ್ಘಾಟ್ನಲ್ಲಿ 'ಇಂಡಿಯಾ' ಪ್ರತಿಭಟನೆ