ಮೈಸೂರು ದಸರಾ: ಹೂಗಳಲ್ಲಿ ಅರಳಲಿದೆ ‘ಪ್ರಜಾಪ್ರಭುತ್ವದ ಹಬ್ಬ’
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ‘ಫಲಪುಷ್ಪ ಪ್ರದರ್ಶನ’ದಲ್ಲಿ ಈ ಬಾರಿ ಹೂವುಗಳಲ್ಲಿ ‘ಪ್ರಜಾಭುತ್ವದ ಹಬ್ಬ’ದ ಪರಿಕಲ್ಪನೆ ಅರಳಲಿದೆ. ತೋಟಗಾರಿಕೆ ಇಲಾಖೆಯಿಂದ ನಗರದ ಹಾರ್ಡಿಂಜ್ ವೃತ್ತದ ಸಮೀಪದ ಕುಪ್ಪಣ್ಣ ಉದ್ಯಾನದ ಗಾಜಿನಮನೆಯಲ್ಲಿ ವಿಧಾನಸೌಧದ ಪ್ರತಿಕೃತಿಯನ್ನು (42 ಅಡಿ ಅಗಲ, 15 ಅಡಿ ಎತ್ತರ) ಹಲವು ಬಗೆಯ ಹೂವುಗಳಲ್

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ‘ಫಲಪುಷ್ಪ ಪ್ರದರ್ಶನ’ದಲ್ಲಿ ಈ ಬಾರಿ ಹೂವುಗಳಲ್ಲಿ ‘ಪ್ರಜಾಭುತ್ವದ ಹಬ್ಬ’ದ ಪರಿಕಲ್ಪನೆ ಅರಳಲಿದೆ. ತೋಟಗಾರಿಕೆ ಇಲಾಖೆಯಿಂದ ನಗರದ ಹಾರ್ಡಿಂಜ್ ವೃತ್ತದ ಸಮೀಪದ ಕುಪ್ಪಣ್ಣ ಉದ್ಯಾನದ ಗಾಜಿನಮನೆಯಲ್ಲಿ ವಿಧಾನಸೌಧದ ಪ್ರತಿಕೃತಿಯನ್ನು (42 ಅಡಿ ಅಗಲ, 15 ಅಡಿ ಎತ್ತರ) ಹಲವು ಬಗೆಯ ಹೂವುಗಳಲ್ಲಿ ಅಲಂಕರಿಸಿ ಪ್ರದರ್ಶಿಸಲಾಗುವುದು. ಸಂವಿಧಾನದ ಪ್ರತಿ, ಅಶೋಕ ಚಕ್ರ ಮೊದಲಾದ ಪ್ರತಿಕೃತಿಗಳು ಕೂಡ ಪುಷ್ಪಗಳಲ್ಲಿ ರೂಪ ಪಡೆಯಲಿವೆ. ಸೊಗಸಿನ ಘಮವು ಉದ್ಯಾನವನ್ನು ಆವರಿಸಲಿದೆ. ಉದ್ಯಾನದ ಇತರ ಭಾಗದಲ್ಲಿ ಸಾವಿರಾರು ಹೂಕುಂಡಗಳನ್ನು ಆಕರ್ಷಕವಾಗಿ ಜೋಡಿಸಿ ಪ್ರದರ್ಶಿಸಲಾಗುವುದು. ಭೇಟಿ ನೀಡುವವರಿಗೆ, ಹೂವುಗಳ ಲೋಕವನ್ನು ಪರಿಚಯಿಸುವ ಜೊತೆಗೆ ತೋಟದ ಬೇಸಾಯದ ಬಗ್ಗೆ, ಅದರಿಂದ ಆಗುವ ಪ್ರಯೋಜನಗಳ ಕುರಿತು ಕೂಡ ತಿಳಿಸಿಕೊಡಲಾಗುವುದು. ಈ ಬೆಳೆಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆಯೂ ಜಾಗೃತಿ ಮೂಡಿಸಲು ತೀರ್ಮಾನಿಸಲಾಗಿದೆ. ಕಿಚನ್ ಗಾರ್ಡನ್ ವಿಶೇಷ:ಇದೇ ಮೊದಲಿಗೆ, ‘ಕಿಚನ್ ಗಾರ್ಡನ್’ ಅಭಿವೃದ್ಧಿಪಡಿಸಲಾಗುತ್ತಿದ್ದು, ಅಡುಗೆಗೆ ಬೇಕಾದ ಹಾಗೂ ಪೌಷ್ಟಿಕಾಂಶವುಳ್ಳ ಸೊಪ್ಪು, ತರಕಾರಿಗಳನ್ನು ಮನೆಯ ಹಿತ್ತಲಿನಲ್ಲಿಯೇ ಅಥವಾ ಟೆರೇಸ್ನಲ್ಲಿಯೇ ಬೆಳೆದುಕೊಳ್ಳಲು ಇರುವ ಅವಕಾಶಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯವೂ ನಡೆಯಲಿದೆ.‘ಪ್ರಜಾಪ್ರಭುತ್ವದ ಸೌಂದರ್ಯವನ್ನು ಮತ್ತು ಅದರ ಮಹತ್ವವನ್ನು ತಿಳಿಸುವ ರೀತಿಯಲ್ಲಿ ಫಲಪುಷ್ಪ ಪ್ರದರ್ಶನವನ್ನು ಸಜ್ಜುಗೊಳಿಸಬೇಕು ಎಂಬ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಪರಿಕಲ್ಪನೆ ಅಂತಿಮಗೊಳಿಸಲಾಗಿದೆ. ದಸರ ಉದ್ಘಾಟನೆಯ ದಿನವಾದ ಅ.11ರಂದೇ ಉದ್ಘಾಟನೆ ನಡೆಯಲಿದ್ದು, ಅ.21ರವರೆಗೆ ನಡೆಯಲಿದೆ. ₹ 48 ಲಕ್ಷಕ್ಕೆ ಟೆಂಡರ್ ಆಗಿದೆ. ನಿತ್ಯವೂ ಸಾವಿರಾರು ಮಂದಿ ಬರುವ ನಿರೀಕ್ಷೆ ಇದ್ದು, ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.75ಸಾವಿರ ಹೂಕುಂಡಗಳ ಬಳಕೆ: ಪ್ರದರ್ಶನಕ್ಕಾಗಿ ಇಲಾಖೆಯ ನರ್ಸರಿಗಳಲ್ಲಿ ಹೂಕುಂಡಗಳನ್ನು ಸಜ್ಜುಗೊಳಿಸಲಾಗಿದೆ. ಅ.2ರಿಂದ ಗಾಜಿನಮನೆಯಲ್ಲಿ, ಅ.5ರಿಂದ ಉದ್ಯಾನದಲ್ಲಿ ಜೋಡಣೆ ಕಾರ್ಯ ಆರಂಭಗೊಳ್ಳಲಿದೆ. 25 ವಿವಿಧ ಬಗೆಯ ಹೂವುಗಳನ್ನು ಪ್ರದರ್ಶಿಸಲಾಗುವುದು. ಊಟಿ, ಪುಣೆ ಮೊದಲಾದ ಕಡೆಗಳಿಂದಲೂ ವಿಶೇಷ ಹೂವುಗಳನ್ನು ತರಿಸಲಾಗುತ್ತಿದೆ. ಒಟ್ಟು 75ಸಾವಿರ ಹೂಕುಂಡಗಳು ಹೂವಿನ ಲೋಕ ಸೃಷ್ಟಿಸಲಿದ್ದು, ಉದ್ಯಾನಕ್ಕೆ ಮೆರುಗು ನೀಡಲಿವೆ. ನೋಡುಗರ ಕಣ್ಮನ ಸೆಳೆಯಲಿವೆ. ವಯಸ್ಕರಿಗೆ ₹ 60, 6 ವರ್ಷ ಮೇಲಿನ ಮಕ್ಕಳಿಗೆ ₹30 ಪ್ರವೇಶ ಶುಲ್ಕ ಇರಲಿದೆ. ಸಮವಸ್ತ್ರದಲ್ಲಿ ಬರುವ ಮಕ್ಕಳಿಗೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಉಚಿತ ಪ್ರವೇಶ ನೀಡಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರದ ‘ಪಂಚ ಗ್ಯಾರಂಟಿ’ ಯೋಜನೆಗಳನ್ನು ( ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಹಾಗೂ ಅನ್ನಭಾಗ್ಯ) ಬಿಂಬಿಸುವ, ದಸರಾ ಆನೆಗಳು, ನಾಡದೇವತೆ ಚಾಮುಂಡೇಶ್ವರಿ ದೇವಿ ಮೊದಲಾದ ಕಲಾಕೃತಿಗಳು ಹೂವುಗಳಲ್ಲಿ ಸಿದ್ಧಪಡಿಸಿ ಪ್ರದರ್ಶಿಸಲಾಗುತ್ತದೆ. ಗಾಜಿನ ಮನೆಯ ಮುಂಭಾಗದಲ್ಲಿ ‘ಹಸಿರು ಚಪ್ಪರ’ ರೂಪಪಡೆಯಲಿದೆ.ರೂಪಶ್ರೀ, ಉಪನಿರ್ದೇಶಕಿ ತೋಟಗಾರಿಕೆ ಇಲಾಖೆದಸರಾ ಫಲಪುಷ್ಪ ಪ್ರದರ್ಶನವನ್ನು ಸಾರ್ವಜನಿಕರ ಕಣ್ಮನ ಸೆಳೆಯುವಂತೆ ರೂಪಿಸಲಾಗುವುದು. ತೋಟದ ಬೆಳೆಗಳ ಬಗ್ಗೆಯೂ ಪರಿಚಯಿಸಲಾಗುವುದು ಉದ್ಯಾನದ ಎದುರಿನ ದೊಡ್ಡ ಮೋರಿ ದುರಸ್ತಿ ಪಾದಚಾರಿ ಮಾರ್ಗ ಹಾಗೂ ರಸ್ತೆಯನ್ನು (ನಜರ್ಬಾದ್ ಸಂಪರ್ಕಿಸುವ ರಸ್ತೆ) ಹೊಸದಾಗಿ ನಿರ್ಮಿಸುವ ಕಾರ್ಯ ಇನ್ನೂ ಪ್ರಗತಿಯಲ್ಲಿಯೇ ಇದೆ. ದಸರಾ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು ಫಲಪುಷ್ಪ ಪ್ರದರ್ಶನದ ಉದ್ಘಾಟನೆ ವೇಳೆಗೆ ಪೂರ್ಣಗೊಳ್ಳದಿದ್ದರೆ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವ ಸಾಧ್ಯತೆ ಇದೆ. ಸಂಚಾರದಟ್ಟಣೆಯೂ ಉಂಟಾಗಲಿದೆ. ಪ್ರಗಯಲ್ಲಿರುವ ಕಾಮಗಾರಿ