ವೇಮುಲ ಸಾವು ಖಂಡಿಸಿ ಪ್ರತಿಭಟನೆ: ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು: ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣವನ್ನು ಖಂಡಿಸಿ 2016ರಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದ 15 ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನ ಕೊಯಿಲಾ ಗ್ರಾಮದ ಮೊಹಮ್ಮದ್ ತುಫೈಲ್ ಸೇರಿದಂತೆ ಒಟ್ಟು 15 ಜನರು ಸಲ್ಲಿಸಿದ್ದ ಕ್ರಿಮ

ಬೆಂಗಳೂರು: ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣವನ್ನು ಖಂಡಿಸಿ 2016ರಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದ 15 ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನ ಕೊಯಿಲಾ ಗ್ರಾಮದ ಮೊಹಮ್ಮದ್ ತುಫೈಲ್ ಸೇರಿದಂತೆ ಒಟ್ಟು 15 ಜನರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.ಬೆಂಗಳೂರಿನ ಸಭೆಗಳು ಮತ್ತು ಸಾರ್ವಜನಿಕ ಮೆರವಣಿಗೆಗಳ ಪರವಾನಗಿ ಹಾಗೂ ನಿಯಂತ್ರಣ ಆದೇಶ-2009 ಅನ್ನು ಪರಾಮರ್ಶಿಸಿರುವ ನ್ಯಾಯಪೀಠ, ‘ಒಂದೇ ಸ್ಥಳದಲ್ಲಿ ಸಭೆ, ಪ್ರತಿಭಟನೆ ಅಥವಾ ಸಾರ್ವಜನಿಕ ಭಾಷಣ ನಡೆಸುವ ಉದ್ದೇಶದಿಂದ 250ಕ್ಕಿಂತ ಹೆಚ್ಚು ಜನರು ಸೇರುವುದಾದರೆ ಮಾತ್ರ ಪೂರ್ವಾನುಮತಿ ಅಗತ್ಯ’ ಎಂದು ವಿವರಿಸಿದೆ.ಪ್ರಕರಣ: ‘ಜಾತಿ ತಾರತಮ್ಯದ ಆರೋಪದಿಂದ ಮನನೊಂದು ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದರು.‘ಪೂರ್ವಾನುಮತಿ ಪಡೆಯದೆ ಗುಂಪು ಸೇರಿ ಘೋಷಣೆ ಕೂಗಿರುವ ವಿದ್ಯಾರ್ಥಿಗಳು ಸುಗಮ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ್ದಾರೆ’ ಎಂದು ಆರೋಪಿಸಿ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು 15 ವಿದ್ಯಾರ್ಥಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 283, 341, 143 ಮತ್ತು 144ರ ಜೊತೆಗೆ ಕಲಂ 149ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. 2016ರ ಜುಲೈ 20ರಂದು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.‘ವಾಹನ ಇನ್ಸ್ಪೆಕ್ಟರ್ ಹುದ್ದೆ ನೇಮಕ ತಡೆ ಸಲ್ಲ’‘ಭಾರಿ ಸರಕು ಸಾಗಣೆ ವಾಹನ (ಎಚ್ಜಿವಿ) ಮತ್ತು ಭಾರಿ ಪ್ರಯಾಣಿಕ ವಾಹನಗಳಲ್ಲಿ (ಎಚ್ಪಿವಿ) ಪೆಟ್ರೋಲ್ ಎಂಜಿನ್ಗಳ ಗ್ಯಾರೇಜ್ ಸೇವಾನುಭವ ಹೊಂದಿಲ್ಲ ಎಂಬ ಕಾರಣಕ್ಕೆ, ಸಾರಿಗೆ ಇಲಾಖೆಯಲ್ಲಿನ 150 ಮೋಟಾರು ವಾಹನ ಇನ್ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ನೇಮಕಾತಿ ಆದೇಶ ತಡೆಹಿಡಿಯಲು ಸಾಧ್ಯವಿಲ್ಲ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.ಈ ಸಂಬಂಧ ಕೆಎಟಿ ಆದೇಶವನ್ನು ಪ್ರಶ್ನಿಸಿ ಸಾರಿಗೆ ಇಲಾಖೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಆರ್.ದೇವದಾಸ್ ನೇತೃತ್ವದ ದ್ವಿಸದಸ್ಯ ನ್ಯಾಯಪೀಠವು ಅಭ್ಯರ್ಥಿಗಳು ಸಲ್ಲಿಸಿದ್ದ ಹಲವು ಅರ್ಜಿಗಳನ್ನು ಪುರಸ್ಕರಿಸಿದೆ. ‘ಪರಿಷ್ಕೃತ ಅಂತಿಮ ಆಯ್ಕೆ ಪಟ್ಟಿಯಲ್ಲಿರುವ ಅರ್ಹ ಅಭ್ಯರ್ಥಿಗಳಿಗೆ ಮುಂದಿನ ಎರಡು ತಿಂಗಳ ಒಳಗಾಗಿ ನೇಮಕಾತಿ ಆದೇಶ ನೀಡಬೇಕು’ ಎಂದು ನಿರ್ದೇಶಿಸಿದೆ.‘ಹಲವು ದಶಕಗಳಿಂದ ಭಾರತದಲ್ಲಿ ಎಚ್ಜಿವಿ ಮತ್ತು ಎಚ್ಪಿವಿ ಪೆಟ್ರೋಲ್ ಎಂಜಿನ್ ವಾಹನಗಳು ಕಾರ್ಯ ನಿರ್ವಹಿಸುತ್ತಿಲ್ಲ. ಆದರೂ ಕೆಎಸ್ಆರ್ಟಿಸಿ, ಬಿಎಂಟಿಸಿ ಹಾಗೂ ಇತರ ಸಾರಿಗೆ ನಿಗಮಗಳು ಪೆಟ್ರೋಲ್ ಎಂಜಿನ್ ಹೊಂದಿರುವ ವಾಹನಗಳ ದುರಸ್ತಿ ಅನುಭವವಿದೆ ಎಂದು ನೀಡಿರುವ ಪ್ರಮಾಣಪತ್ರಗಳನ್ನು ಒಪ್ಪಿಕೊಂಡಿರುವುದು ಅಸಮಂಜಸ ಕ್ರಮವಾಗಿದೆ. ಅಂತಹ ವಾಹನಗಳೇ ಇಲ್ಲದಿರುವ ಸಂದರ್ಭದಲ್ಲಿ ಪೆಟ್ರೋಲ್ ಎಂಜಿನ್ ಅನುಭವದ ಷರತ್ತು ಪೂರೈಸುವುದು ಅಸಾಧ್ಯವಾಗಿರುವ ಕಾರಣಕ್ಕೆ ಅಭ್ಯರ್ಥಿಗಳ ನೇಮಕಾತಿ ತಿರಸ್ಕರಿಸುವಂತಿಲ್ಲ’ ಎಂದು ನ್ಯಾಯಪೀಠ ಹೇಳಿದೆ.261008-51-11602165