ಇನ್ನೆರಡು ದಿನ ಈ ರಾಶಿಯವರ ಆರೋಗ್ಯದ ಬಗ್ಗೆ ಗಮನವಿರಲಿ
ಅಕ್ಟೋಬರ್ 8ರಿಂದ 10ರವರೆಗೆ ಹಲವು ಫಲಗಳು ದೊರೆಯಲಿವೆ. ಗ್ರಹಗಳ ಚಲನೆ ಹಾಗೂ ಅವುಗಳ ಸ್ಥಾನ ಬದಲಾವಣೆಯ ಆಧಾರದ ಮೇಲೆ ಕೆಲವು ರಾಶಿಗಳಿಗೆ ಶುಭಯೋಗವಿದೆ. ಹಾಗಾದರೆ ಯಾವ ರಾಶಿಗೆ ಏನು ಫಲ ಎಂಬ ಮಾಹಿತಿ ಇಲ್ಲಿದೆ.ಮೇಷಉತ್ತಮ ಆರೋಗ್ಯ ಲಭಿಸುತ್ತದೆ. ಪಿತ್ತದ ದೋಷದಿಂದ ಬಳಲುವಿರಿ. ಕಣ್ಣಿನ ತೊಂದರೆ ಇರುತ್ತದೆ. ಕ್ಲಿಷ್ಟಕರ ಸನ್ನಿವೇಶಗಳಲ್ಲಿಯೂ ಬುದ್ಧಿವಂತಿಕೆಯ ತೀರ್ಮಾನವನ್ನು

ಅಕ್ಟೋಬರ್ 8ರಿಂದ 10ರವರೆಗೆ ಹಲವು ಫಲಗಳು ದೊರೆಯಲಿವೆ. ಗ್ರಹಗಳ ಚಲನೆ ಹಾಗೂ ಅವುಗಳ ಸ್ಥಾನ ಬದಲಾವಣೆಯ ಆಧಾರದ ಮೇಲೆ ಕೆಲವು ರಾಶಿಗಳಿಗೆ ಶುಭಯೋಗವಿದೆ. ಹಾಗಾದರೆ ಯಾವ ರಾಶಿಗೆ ಏನು ಫಲ ಎಂಬ ಮಾಹಿತಿ ಇಲ್ಲಿದೆ.ಮೇಷಉತ್ತಮ ಆರೋಗ್ಯ ಲಭಿಸುತ್ತದೆ. ಪಿತ್ತದ ದೋಷದಿಂದ ಬಳಲುವಿರಿ. ಕಣ್ಣಿನ ತೊಂದರೆ ಇರುತ್ತದೆ. ಕ್ಲಿಷ್ಟಕರ ಸನ್ನಿವೇಶಗಳಲ್ಲಿಯೂ ಬುದ್ಧಿವಂತಿಕೆಯ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ಮಕ್ಕಳ ಜೊತೆಯಲ್ಲಿ ಮನಸ್ತಾಪ ಇರುತ್ತದೆ. ಇರುವ ಆದಾಯವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗುವಿರಿ. ನಿಮ್ಮ ತಂದೆಯವರ ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ದೊರೆಯುತ್ತದೆ.ಜ್ಯೋತಿಷ: 2026ರ ಮೊದಲ ವಾರ ಈ 3 ವಸ್ತು ಮನೆಗೆ ತಂದರೆ ಭಾರಿ ಧನಲಾಭವೃಷಭಚರ್ಮ ದೋಷವಿರುತ್ತದೆ. ಮಾಡದ ತಪ್ಪನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಕಣ್ಣಿನ ದೋಷವಿರುತ್ತದೆ. ವಿದ್ಯಾರ್ಥಿಗಳು ಸಾಧಾರಣ ಪ್ರಗತಿ ಸಾಧಿಸುತ್ತಾರೆ. ಹಣಕಾಸಿನ ತೊಂದರೆ ಇರುವುದಿಲ್ಲ. ಗಂಟಲಿಗೆ ಸಂಬಂಧಿಸಿದ ತೊಂದರೆ ಕಂಡು ಬರುತ್ತದೆ. ಉದ್ಯೋಗದಲ್ಲಿ ಅಧಿಕಾರಿಗಳ ಪ್ರಶಂಸೆ ಗಳಿಸುವಿರಿ. ನಿಮ್ಮ ಮಗಳಿಗೆ ಉದ್ಯೋಗ ಲಭಿಸುತ್ತದೆ. ಹಣಕಾಸಿನ ವ್ಯವಹಾರದಲ್ಲಿ ನಿರೀಕ್ಷಿಸಿದ ಯಶಸ್ಸು ಗಳಿಸುವಿರಿ.ಮಿಥುನಸೋದರ ಜೊತೆಯಲ್ಲಿ ಅನಾವಶ್ಯಕ ವಾದ–ವಿವಾದಗಳಿರುತ್ತವೆ. ಚಿಕ್ಕ ಮಕ್ಕಳ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ. ನೋಡಲು ಶಾಂತರಾಗಿ ಕಂಡರೂ ಕೋಪದಲ್ಲಿ ಉದ್ವೇಗದಿಂದ ನಡೆದುಕೊಳ್ಳುವಿರಿ. ಉದ್ಯೋಗದಲ್ಲಿ ಉನ್ನತ ಗೌರವ ಕೀರ್ತಿಗೆ ಪಾತ್ರರಾಗುವಿರಿ. ಅನಿರೀಕ್ಷಿತ ಧನ ಲಾಭವಿರುತ್ತದೆ. ಸೋದರಿಯ ಆರೋಗ್ಯದಲ್ಲಿ ಪ್ರಗತಿ ಕಂಡು ಬರುತ್ತದೆ. ಆತಂಕದ ಕ್ಷಣಗಳಲ್ಲಿ ತಂದೆಯವರಿಂದ ಸಹಾಯ ಸಹಕಾರ ದೊರೆಯುತ್ತದೆ.ಕಟಕಬೇರೆಯವರ ಮನಸ್ಸನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗುವಿರಿ. ಬಂಧು ಬಳಗದವರ ಒಡನಾಟ ಇರುವುದಿಲ್ಲ. ಉಷ್ಣದ ತೊಂದರೆ ನಿಮ್ಮನ್ನು ಕಾಡುತ್ತದೆ. ಹೊಸ ವಾಹನಕೊಳ್ಳುವ ಆಸೆ ಈಡೇರುತ್ತದೆ. ವಾಸ ಸ್ಥಳವನ್ನು ಬದಲಿಸುವಿರಿ. ನಿಮ್ಮ ಮಕ್ಕಳ ಜೀವನದಲ್ಲಿ ಧನಾತ್ಮಕ ಬೆಳವಣಿಗೆಗಳು ಕಂಡು ಬರಲಿವೆ. ದಿನ ಭವಿಷ್ಯ: ಈ ರಾಶಿಯ ಅವಿವಾಹಿತರಿಗೆ ಶುಭ ಫಲಗಳು ಲಭಿಸಲಿವೆ..ಸಿಂಹಉತ್ತಮ ಆದಾಯವಿರುತ್ತದೆ. ಅನಿರೀಕ್ಷಿತ ಖರ್ಚು ವೆಚ್ಚಗಳು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತವೆ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಇರುತ್ತದೆ. ಬುದ್ಧಿವಂತಿಕೆಯಿಂದ ಕಷ್ಟದ ಸನ್ನಿವೇಶದಿಂದ ಪಾರಾಗುವಿರಿ. ಕುಟುಂಬದಲ್ಲಿ ಇರುವ ಭಿನ್ನಾಭಿಪ್ರಾಯವು ದೂರವಾಗುತ್ತದೆ. ಗಣ್ಯ ವ್ಯಕ್ತಿಗಳ ಸಹಾಯ ಸಹಕಾರ ದೊರೆಯುತ್ತದೆ. ನೇರವಾದ ನಡೆ–ನುಡಿ ಇರುತ್ತದೆ. ನಿಮ್ಮ ಆತ್ಮೀಯರೊಬ್ಬರು ನಿಮ್ಮ ಬಗ್ಗೆ ತಪ್ಪು ತಿಳಿಯುತ್ತಾರೆ. ಕನ್ಯಾನಿಮ್ಮಅಭಿವೃದ್ಧಿಯನ್ನು ಕಂಡು ಅಸೂಯೆ ಪಡುವ ಜನರಿರುತ್ತಾರೆ. ಅನಾವಶ್ಯಕವಾಗಿ ತೆಗೆದುಕೊಂಡ ತೀರ್ಮಾನಗಳನ್ನು ಬದಲಿಸುವಿರಿ. ಯುವಕ–ಯುವತಿಯರಿಗೆ ಉದ್ಯೋಗ ಲಭಿಸುತ್ತದೆ. ಕಣ್ಣಿನ ದೋಷವಿರುತ್ತದೆ. ಸಾಕು ಪ್ರಾಣಿಗಳಿಂದ ತೊಂದರೆ ಆಗಬಹುದು. ನಿಮ್ಮ ತಂದೆಯವರ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಮಕ್ಕಳ ಸಹಾಯ ದೊರೆಯುತ್ತದೆ. ತುಲಾನಿಶ್ಚಯವಾಗಿದ್ದ ವಿವಾಹವು ಮುಂದೆ ಹೋಗುತ್ತದೆ. ಮಹಿಳಾ ಉದ್ಯೋಗಿಗಳು ಅನಾವಶ್ಯಕವಾದ ವಿವಾದಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬದ ಕೆಲಸಕ್ಕಾಗಿ ದೂರದ ಊರಿಗೆ ಪ್ರಯಾಣ ಬೆಳೆಸುವಿರಿ. ದಂಪತಿಗಳ ನಡುವೆ ಉತ್ತಮ ಬಾಂಧವ್ಯ ಮರುಕಳಿಸುತ್ತದೆ. ಜನ ಮೆಚ್ಚುವ ಕೆಲಸ ಕಾರ್ಯಗಳನ್ನು ಮಾಡುವಿರಿ. ಸಮಾಜದಲ್ಲಿ ವಿಶೇಷ ಗೌರವ ನಿಮಗೆ ದೊರೆಯುತ್ತದೆ. ವೃಶ್ಚಿಕಮಕ್ಕಳಿಗೆ ಸಂಬಂಧ ಪಟ್ಟ ಕೆಲಸ ಕಾರ್ಯಗಳು ಅಪೂರ್ಣಗೊಳ್ಳುತ್ತವೆ. ತಲೆಗೆ ಪೆಟ್ಟಾಗುವ ಸಾಧ್ಯತೆ ಇದೆ ಎಚ್ಚರಿಕೆ ಇರಲಿ. ಹಣಕಾಸಿನ ವಿಚಾರದಲ್ಲಿ ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಾಗದು. ಉತ್ತಮ ಆರೋಗ್ಯ ಇರುತ್ತದೆ. ನಿಮ್ಮ ಕೆಲಸ ಕಾರ್ಯಗಳಿಂದ ಒಳ್ಳೆಯ ಹೆಸರನ್ನು ಗಳಿಸುವಿರಿ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭ ದೊರೆಯುತ್ತದೆ.ದಿನ ಭವಿಷ್ಯ: ಈ ರಾಶಿಯವರ ಪ್ರಾಮಾಣಿಕತೆಗೆ ತಕ್ಕ ಫಲ ಸಿಕ್ಕೇ ಸಿಗಲಿದೆಧನಸ್ಸುತಂದೆಯ ಬಗ್ಗೆ ವಿಶೇಷ ಗೌರವವಿರುತ್ತದೆ. ನಿಮ್ಮ ತಂದೆಗೆ ಸಂಬಂಧಪಟ್ಟ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡುವಿರಿ. ದೇವತಾ ಕಾರ್ಯಗಳನ್ನು ನಿರ್ವಹಿಸುವಿರಿ. ಬಹುದಿನದಿಂದ ಕಾಡುತ್ತಿದ್ದ ಆರೋಗ್ಯದ ಸಮಸ್ಯೆಯು ದೂರವಾಗುತ್ತದೆ. ಗುರು ಹಿರಿಯರ ಸಲಹೆಯನ್ನು ಒಪ್ಪುವಿರಿ. ಹಣಕಾಸಿನ ತೊಂದರೆ ಇರುವುದಿಲ್ಲ. ಇರುವ ಹಣವನ್ನು ಸುಲಭವಾಗಿ ಖರ್ಚು ಮಾಡುವುದಿಲ್ಲ ಸುಖಜೀವನ ನಡೆಸುವಿರಿ.ಮಕರವಿದ್ಯಾರ್ಥಿಗಳು ವಿಶೇಷವಾದ ಸಾಧನೆಗೆ ಪಾತ್ರರಾಗುತ್ತಾರೆ. ಉನ್ನತ ವಿದ್ಯಾಭ್ಯಾಸಕ್ಕೆ ಅರ್ಹತೆ ಪಡೆಯುತ್ತಾರೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಮನಸ್ಸನ್ನು ಗೆಲ್ಲುತ್ತಾರೆ. ಶುಭ ಕೆಲಸ ಕಾರ್ಯಗಳಲ್ಲಿ ಆರಂಭದಲ್ಲಿ ತೊಂದರೆಗಳು ಉಂಟಾಗಲಿವೆ. ದೃಢವಾದ ಮನಸ್ಸಿನಿಂದ ಕೆಲಸ ಸಾಧಿಸಿ. ನಿಮಗೆ ತಿಳಿಯದಂತೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಶಾಂತದಂತೆ ಕಂಡರೂ ಮುಂಗೋಪದಿಂದ ಎಲ್ಲರನ್ನೂ ನಿಂದಿಸುವಿರಿ.ಸೆ.17 ರಿಂದ ಅ.17ರವರೆಗೆ ಕನ್ಯಾದಲ್ಲಿ ರವಿ ಸಂಚಾರ: ಈ ರಾಶಿಯವರಿಗೆ ಧನಲಾಭಕುಂಭಕುಟುಂಬದ ಹೆಚ್ಚಿನ ಜವಾಬ್ದಾರಿಯು ನಿಮ್ಮದಾಗುತ್ತದೆ. ಹೊಸ ವಾಹನವನ್ನು ಕೊಳ್ಳುವಿರಿ. ಅತಿಯಾದ ಜ್ವರದಿಂದ ಬಳಲುವಿರಿ. ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾಗಲಿವೆ. ಉದ್ಯೋಗದಲ್ಲಿ ಉನ್ನತ ಅಧಿಕಾರ ಲಭಿಸುತ್ತದೆ. ನಿರೀಕ್ಷೆಯಂತೆ ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಕಷ್ಟ ನಷ್ಟದ ಸಂದರ್ಭದಲ್ಲಿ ನಿಮ್ಮ ತಂದೆಯು ನಿಮಗೆ ನೆರವಾಗುತ್ತಾರೆ. ಮೀನಆರೋಗ್ಯದ ಬಗ್ಗೆ ಗಮನವಿರಲಿ. ಅನಾವಶ್ಯಕ ಖರ್ಚು–ವೆಚ್ಚಗಳು ಇರುತ್ತವೆ. ನಿಮ್ಮಿಂದ ಸಹಾಯ ಪಡೆದವರು ನಿಮ್ಮಿಂದ ದೂರವಾಗುತ್ತಾರೆ. ವಿದೇಶ ಪ್ರಯಾಣ ಮಾಡುವ ಯೋಗವಿದೆ. ಚರ್ಮದ ದೋಷವಿರುತ್ತದೆ. ಉದ್ಯೋಗವಿದ್ದರೂ ಸ್ವಂತ ವ್ಯಾಪಾರವನ್ನು ಆರಂಭಿಸುವ ಸಾಧ್ಯತೆಗಳಿವೆ. ವಿವಾಹ ನಿಷ್ಠೆಯವಾಗುತ್ತದೆ. ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಲಿದ್ದಾರೆ.