ಇಂದ್ರಿ ವಿಸ್ಕಿಯ ಹೊಸ ಆವೃತ್ತಿ ಭಾರತದಲ್ಲಿ ಬಿಡುಗಡೆ
ಬೆಂಗಳೂರು: ಪಿಕಾಡಿಲಿ ಡಿಸ್ಟಿಲರೀಸ್ ಒಡೆತನದ ‘ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿ’ಯ ‘ಇಂದ್ರಿ ದಿವಾಳಿ ಕಲೆಕ್ಟರ್ಸ್ ಎಡಿಷನ್ 2026’ ಭಾರತದಲ್ಲಿ ಬಿಡುಗಡೆಯಾಗಿದೆ. ದೀಪಾವಳಿ ವಿಶೇಷ ಆವೃತ್ತಿಯಾಗಿರುವ ಈ ವಿಸ್ಕಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಸೀಮಿತ ಪ್ರಮಾಣದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ.ಲಂಡನ್ನಲ್ಲಿ ಅಂತರರಾಷ್ಟ್ರೀಯವಾಗಿ ಅನಾವರಣಗೊಂಡಿದ್ದ ಈ ವಿಶೇಷ ‘ರೂಬಿ ಪ

ಬೆಂಗಳೂರು: ಪಿಕಾಡಿಲಿ ಡಿಸ್ಟಿಲರೀಸ್ ಒಡೆತನದ ‘ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿ’ಯ ‘ಇಂದ್ರಿ ದಿವಾಳಿ ಕಲೆಕ್ಟರ್ಸ್ ಎಡಿಷನ್ 2026’ ಭಾರತದಲ್ಲಿ ಬಿಡುಗಡೆಯಾಗಿದೆ. ದೀಪಾವಳಿ ವಿಶೇಷ ಆವೃತ್ತಿಯಾಗಿರುವ ಈ ವಿಸ್ಕಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಸೀಮಿತ ಪ್ರಮಾಣದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ.ಲಂಡನ್ನಲ್ಲಿ ಅಂತರರಾಷ್ಟ್ರೀಯವಾಗಿ ಅನಾವರಣಗೊಂಡಿದ್ದ ಈ ವಿಶೇಷ ‘ರೂಬಿ ಪೋರ್ಟ್ ಕ್ಯಾಸ್ಕ್’ ಆವೃತ್ತಿಯನ್ನು ಮಾಸ್ಟರ್ ಬ್ಲೆಂಡರ್ ಸುರಿಂದರ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ತಯಾರಿಸಲಾಗಿದೆ. ಭಾರತೀಯ ಮಾರುಕಟ್ಟೆಗೆ ಕೇವಲ 600 ಬಾಟಲಿಗಳನ್ನು ಬಿಡುಗಡೆ ಮಾಡಲಾಗಿದ್ದು, ಪ್ರತಿ ಬಾಟಲಿಗೂ ಪ್ರತ್ಯೇಕ ಸರಣಿ ಸಂಖ್ಯೆ ಇರಲಿದೆ.ಉತ್ತರ ಭಾರತದ ಆರು ಸಾಲಿನ ಬಾರ್ಲಿಯನ್ನು ಬಳಸಿ ಸಾಂಪ್ರದಾಯಿಕ ‘ಕಾಪರ್ ಪಾಟ್ ಸ್ಟಿಲ್ಸ್’ ಮೂಲಕ ವಿಸ್ಕಿಯನ್ನು ತಯಾರಿಸಲಾಗಿದೆ. ಬಳಿಕ ಪೋರ್ಚುಗಲ್ನ ವಿಶೇಷ ‘ರೂಬಿ ಪೋರ್ಟ್ ವೈನ್’ ಪೀಪಾಯಿಗಳಲ್ಲಿ ಸಂಗ್ರಹಿಸಿ ಹದಗೊಳಿಸಲಾಗಿದೆ. ಬ್ಲ್ಯಾಕ್ ಚೆರ್ರಿ, ಕಾಡು ಹಣ್ಣುಗಳು, ಹುರಿದ ಒಣ ಬೀಜಗಳು, ವೆನಿಲ್ಲಾ, ಜೇನುತುಪ್ಪ ಮತ್ತು ಅಂಜೂರದ ಹಣ್ಣಿನ ಸುವಾಸನೆ ಹಾಗೂ ರುಚಿ ಇದರ ವಿಶೇಷತೆ ಎಂದು ಸಂಸ್ಥೆ ತಿಳಿಸಿದೆ.ರಾಜಮನೆತನದ ಛಾಯೆಯ ವಿನ್ಯಾಸಬಾಟಲಿ ಮತ್ತು ಪ್ಯಾಕೇಜಿಂಗ್ ವಿನ್ಯಾಸವನ್ನು ‘ಇಂಡಿಯಾ ಸರ್ಕಸ್’ನ ವಿನ್ಯಾಸಗಾರ ಕೃಷ್ಣಾ ಮೆಹ್ತಾ ರೂಪಿಸಿದ್ದಾರೆ. ಭಾರತದ ರಾಜಮನೆತನದ ಪರಂಪರೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತೆ ಮಾರ್ವಾಡಿ ಕುದುರೆ ಹಾಗೂ ಹೂವಿನ ಚಿತ್ತಾರಗಳನ್ನು ವಿನ್ಯಾಸದಲ್ಲಿ ಬಳಸಲಾಗಿದೆ.ಬೆಂಗಳೂರು ಸೇರಿದಂತೆ ಮೂರು ನಗರಗಳಲ್ಲಿ ಲಭ್ಯ‘ಇಂದ್ರಿ ದಿವಾಳಿ ಕಲೆಕ್ಟರ್ಸ್ ಎಡಿಷನ್ 2026’ ಅಕ್ಟೋಬರ್ ಮಧ್ಯಭಾಗದಿಂದ ಭಾರತದಲ್ಲಿ ಲಭ್ಯವಾಗಲಿದೆ. 700 ಎಂಎಲ್, ಶೇ 50 ಎಬಿವಿ ಸಾಮರ್ಥ್ಯದ ಈ ಸೀಮಿತ ಆವೃತ್ತಿಯ 600 ಬಾಟಲಿಗಳು ಬೆಂಗಳೂರು, ಚಂಡೀಗಢ ಮತ್ತು ಗುರುಗ್ರಾಮದಲ್ಲಿ ದೊರೆಯಲಿವೆ.ವಿದೇಶಿ ಪ್ರಯಾಣಿಕರಿಗಾಗಿ ಶೇ 58.5 ಎಬಿವಿ ಸಾಮರ್ಥ್ಯದ ಅಂತಾರಾಷ್ಟ್ರೀಯ ಆವೃತ್ತಿಯು ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರಿನ ಆಯ್ದ ಡ್ಯೂಟಿ ಫ್ರೀ ಮಳಿಗೆಗಳಲ್ಲಿ ಹಾಗೂ ದುಬೈ ಡ್ಯೂಟಿ ಫ್ರೀನಲ್ಲಿ ಲಭ್ಯವಿರಲಿದೆ.