4 ದಿನದ ಹಿಂದೆ ಲವಲವಿಕೆಯಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪಾಟೇಕರ್
ಪಣಜಿ: ಇಂದು ನಿಧನರಾದ ಬಹುಭಾಷಾ ನಟ ನಾನಾ ಪಾಟೇಕರ್(Nana Patekar) 4 ದಿನದ ಹಿಂದೆ ಗೋವಾದಲ್ಲಿ(Goa) ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಾನಾ ಪಾಟೇಕರ್ ಅವರು ಅಕ್ಟೋಬರ್ 4ರಂದು ಗೋವಾದ ಡೋನಾ ಪೌಲಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ವಿಶ್ವನಾಥ್ ‘ನಾನಾ ಪಾಟೇಕರ್’ ಆಗಿದ್ದು ಹೇಗೆ?

ಪಣಜಿ: ಇಂದು ನಿಧನರಾದ ಬಹುಭಾಷಾ ನಟ ನಾನಾ ಪಾಟೇಕರ್(Nana Patekar) 4 ದಿನದ ಹಿಂದೆ ಗೋವಾದಲ್ಲಿ(Goa) ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಾನಾ ಪಾಟೇಕರ್ ಅವರು ಅಕ್ಟೋಬರ್ 4ರಂದು ಗೋವಾದ ಡೋನಾ ಪೌಲಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ವಿಶ್ವನಾಥ್ ‘ನಾನಾ ಪಾಟೇಕರ್’ ಆಗಿದ್ದು ಹೇಗೆ? – ಹೆಸರಿನ ಹಿಂದಿದೆ ಬಾಲ್ಯದ ಅಪರೂಪದ ಕಥೆ VIDEO | Goa: Actor Nana Patekar attended and addressed the Samraat Club International installation ceremony in Dona Paula. (Full video available on PTI Videos – https://t.co/d8jp61yd2p) https://t.co/jl8xn9vXOk — Press Trust of India (@PTI_News) October 4, 2026 ‘ಸಾಮ್ರಾಟ್ ಕ್ಲಬ್ ಇಂಟರ್ನ್ಯಾಷನಲ್’ ಪದಗ್ರಹಣ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದ್ದರು. ಆ ಕಾರ್ಯಕ್ರಮದಲ್ಲಿ ಅವರು ಬಿಳಿ ಕುರ್ತಾ ಹಾಗೂ ಬಿಳಿ ಶಾಲು (ಗಮ್ಚಾ) ಧರಿಸಿ ವೇದಿಕೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಇದನ್ನೂ ಓದಿ: ಕನ್ನಡದ ‘ಯಕ್ಷ’ದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಅಬ್ಬರಿಸಿದ್ದ ನಾನಾ ಪಾಟೇಕರ್! ನಾನಾ ಪಾಟೇಕರ್ ಅವರು ಗುರುವಾರ ಹೃದಯ ಸ್ತಂಭನದಿಂದ (Cardiac Arrest) ವಿಧಿವಶರಾಗಿದ್ದಾರೆ. ಅವರ ಹಠಾತ್ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆ ಇಡೀ ಭಾರತೀಯ ಚಿತ್ರರಂಗ ಹಾಗೂ ಅಭಿಮಾನಿ ವಲಯದಲ್ಲಿ ತೀವ್ರ ಶೋಕದ ಛಾಯೆ ಆವರಿಸಿದೆ.