ನೊಂದವರಿಗೆ ನೆರಳಾಗಿದ್ದ ಮಹಾನ್ ನಟ ನಾನಾ ಪಾಟೇಕರ್!
ಭಾರತೀಯ ಚಿತ್ರರಂಗ ಕಂಡ ಮಹಾನ್ ಪ್ರತಿಭಾವಂತ ನಟರಲ್ಲಿ ನಾನಾ ಪಾಟೇಕರ್ ಒಬ್ಬರು. ಮರಾಠಿ ರಂಗಭೂಮಿಯ ಹಿನ್ನೆಲೆಯಿಂದ ಬಂದಿದ್ದ ಅವರು, ಮರಾಠಿ, ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ನಟಿಸಿ, ಅಭಿನಯವನ್ನು ತಮ್ಮ ಉಸಿರು ಎಂಬಂತೆ ಕಾಪಾಡಿಕೊಂಡು ಬಂದಿದ್ದರು. ಸಹಜ ನಟನೆಯ ಮೂಲಕ ಇಡೀ ಭಾರತದಲ್ಲಿ ರಂಗಭೂಮಿ ಮತ್ತು ಸಿನಿಮಾ ರಸಿಕರ ಮನಗೆದ್ದಿದ್ದರು. ನಾನಾ ಪಾಟೇಕರ್ ಅವರು ನ

ಭಾರತೀಯ ಚಿತ್ರರಂಗ ಕಂಡ ಮಹಾನ್ ಪ್ರತಿಭಾವಂತ ನಟರಲ್ಲಿ ನಾನಾ ಪಾಟೇಕರ್ ಒಬ್ಬರು. ಮರಾಠಿ ರಂಗಭೂಮಿಯ ಹಿನ್ನೆಲೆಯಿಂದ ಬಂದಿದ್ದ ಅವರು, ಮರಾಠಿ, ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ನಟಿಸಿ, ಅಭಿನಯವನ್ನು ತಮ್ಮ ಉಸಿರು ಎಂಬಂತೆ ಕಾಪಾಡಿಕೊಂಡು ಬಂದಿದ್ದರು. ಸಹಜ ನಟನೆಯ ಮೂಲಕ ಇಡೀ ಭಾರತದಲ್ಲಿ ರಂಗಭೂಮಿ ಮತ್ತು ಸಿನಿಮಾ ರಸಿಕರ ಮನಗೆದ್ದಿದ್ದರು. ನಾನಾ ಪಾಟೇಕರ್ ಅವರು ನಟಿಸಿದ ಚಿತ್ರ ಅಥವಾ ನಾಟಕಗಳಲ್ಲಿ ಎಲ್ಲಿಯೂ ಅದು ಅಭಿನಯ ಕೃತಕ ಎನಿಸುತ್ತಿರಲಿಲ್ಲ.ಅವರು ಆಯಾ ಪಾತ್ರಗಳಲ್ಲಿ ಜೀವಿಸುತ್ತಿದ್ದರು. ಸಂಭಾಷಣೆಯನ್ನು ಹೇಳುವ ವೈಖರಿ, ಧ್ವನಿಯ ಏರಿಳಿತ, ಮುಖಭಾವ ಹೀಗೆ ತಮ್ಮದೇ ಸ್ವಂತಿಕೆಯನ್ನು ಕಾಪಾಡಿಕೊಂಡು ಬಂದು ಐವತ್ತು ವರ್ಷಗಳಷ್ಟು ಅಧಿಕಕಾಲ ಕಲಾರಂಗದಲ್ಲಿ ಒಬ್ಬರಾಗಿದ್ದರು. ಮೂರು ಭಾರಿ ರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಠ ನಟ ಪ್ರಶಸ್ತಿ ಪಡೆದಿದ್ದ ನಾನಾ ಪಾಟೇಕರ್, ಐದು ವರ್ಷದ ಹಿಂದೆ ಮರಾಠಿ ಭಾಷೆಯಲ್ಲಿ, ಮರಾಠಿ ರಂಗಭೂಮಿಯ ಹಿರಿಯ ಕಲಾವಿದರೊಬ್ಬರ ನೈಜ ಕಥಾಯಾಧಾರಿತ ಚಿತ್ರ‘’ ನಟ ಸಾಮ್ರಾಟ್’ ಎಂಬ ಸಿನಿಮಾದಲ್ಲಿನ ಅವರ ಅಭಿನಯವು ನಾನಾ ಪಾಟೇಕರ್ ಅವರ ವಯಸ್ಸು, ಅನುಭವ ಮತ್ತು ಪಕ್ವತೆ ಎಲ್ಲವೂ ಸಮ್ಮಿಲನಗೊಂಡಂತೆ ಉತ್ತುಂಗಕ್ಕೇರಿತ್ತು. ಅಂಕುಶ್, ಅಂಧ್ಯುದ್ಧ್, ಪ್ರತಿಘಟ್, ಪರಿಂಧಾ, ಅಬ್ ತಕ್ ಚಪ್ಪನ್, ಕ್ರಾಂತಿವೀರ್, ಕಾಮೋಶ್ ಹೀಗೆ ಅನೇಕ ಚಿತ್ರಗಳನ್ನು ಹೆಸರಿಸಬಹುದು.ನಾನಾಪಾಟೇಕರ್ ಸಾಮಾನ್ಯ ಮಧ್ಯಮ ವರ್ಗದಲ್ಲಿ ಜನಿಸಿ, ನಟನೆಯ ಮೇಲಿನ ಪ್ರೀತಿಯಿಂದ ರಂಗಭೂಮಿಗೆ ಬಂದವರು. ನಟನೆ ಕುರಿತು ಡಿಪ್ಲಮೋ ಪದವಿ ಪಡೆಯುವಾಗ, ಪುಣೆ ನಗರದಲ್ಲಿ ಕೇವಲ ಐದು ರೂಪಾಯಿ ಕೂಲಿಗಾಗಿ, ಇಡೀ ರಾತ್ರಿ, ಸೈಕಲ್ ನಲ್ಲಿ ತಿರುಗಾಡಿ ಅಲ್ಲಿನ ರಸ್ತೆಯ ಗೋಡೆಗಳಿಗೆ ಸಿನಿಮಾ ಪೋಸ್ಟರ್ ಹಚ್ಚುತ್ತಿದ್ದರು. ಸಿನಿಮಾದಲ್ಲಿ ಬದುಕು ರೂಪಿಸಿಕೊಂಡನಂತರ ಪುಣೆಯ ಸಮೀಪ ಜಮೀನು ಖರೀದಿಸಿ, ಕೃಷಿಯಲ್ಲಿ ತೃಪ್ತಿ ಕಾಣುತ್ತಿದ್ದರು. ಓರ್ವ ಬೇಸಾಯಗಾರನಾಗಿ ಕೃಷಿ ಲೋಕದ ಕಷ್ಟಗಳನ್ನು ಅರಿತುಕೊಂಡಿದ್ದ ನಾನಾ ಪಾಟೇಕರ್, ಮಹಾರಾಷ್ಟ್ರದ ವಿಧರ್ಭ ಪ್ರಾಂತ್ಯದ ರೈತರು ಬಿ.ಟಿ.ಹತ್ತಿ ಬೆಳೆದು ಬೆಳೆಯ ವೈಫಲ್ಯದಿಂದ ಸಾಲಭಾದೆ ತಾಳಲಾರದೆ, ಆತ್ಮಹತ್ಯೆಗೆ ಒಳಗಾದಾಗ, ರೈತ ವಿಧವೆಯರ ಪಾಲಿಗೆ ಸಹೋದರನಾಗಿ, ಅವರ ಮಕ್ಕಳಿಗೆ ಚಿಕ್ಕಪ್ಪನಾಗಿ ಮತ್ತು ಸೋದರಮಾವನಾಗಿ ಬದುಕಿಗೆ ಆಸರೆಯಾಗಿ ನಿಂತರು.ಪುಣೆ ನಗರದಲ್ಲಿ ನಾನಾ ಪಾಟೇಕರ್ ಸ್ಥಾಪಿಸಿದ ನಾಮ್ ಪೌಂಡೇಷನ್ ಗೆ ಕೇವಲ ಒಂದು ದಿನದಲ್ಲಿ ಸಾರ್ವಜನಿಕರಿಂದ ಏಳು ಕೋಟಿ ರೂಪಾಯಿ ಹಣ ದೇಣಿಗೆಯಾಗಿ ಹರಿದು ಬಂದಿತು. ಈ ಹಣದಲ್ಲಿ ರೈತ ಕುಟುಂಬದ ವಿಧವೆಯವರಿಗೆ ಹಸು, ಕುರಿ, ಮೇಕೆ ತೆಗೆದುಕೊಟ್ಟರು. ಚಿಕ್ಕವಯಸ್ಸಿನ ವಿಧವೆಯರಿಗೆ ಟೈಲರಿಂಗ್ ತರಬೇತಿ ಕೊಡಿಸಿ, ಹೊಲಿಗೆ ಮಿಷನ್ ಕೊಡಿಸಿ ಎಲ್ಲರೂ ನೆಮ್ಮದಿಯ ಜೀವನ ಕಟ್ಟಿಕೊಳ್ಳಲು ನೆರವಾದರು. ರೈತಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಶಿಕ್ಷಣ ವ್ಯವಸ್ಥೆ ಮಾಡುವುದರ ಜೊತೆಗೆ ವಸತಿ ಶಾಲೆಯನ್ನು ನಾಮ್ ಪೌಂಡೇಷನ್ ವತಿಯಿಂದ ಸ್ಥಾಪಿಸಿದರು. ನಾನಾ ಪಾಟೇಕರ್ ಅವರ ಇಂತಹ ಮಾಲವೀಯ ಗುಣಗಳಿಂದಾಗಿ, ಅವರ ಕುರಿತು ಇಡೀ ದೇಶಾದ್ಯಂತ ಗೌರವ ಭಾವನೆಗಳಿದ್ದವು. ಅವರ ಪ್ರತಿಯೊಮದು ಕೆಲಸಕ್ಕೂ ಉದಾರವಾಗಿ ಆರ್ಥಿಕ ನೆರವು ಸಿಗುತ್ತಿತ್ತು.ಮಹಾರಾಷ್ಟ್ರದ ರೈತರಿಗೆ ಶಾಶ್ವತ ನೆರವು ರೂಪಿಸುವ ನಿಟ್ಟಿನಲ್ಲಿ ಮಳೆಯಾಶ್ರಿತ ಪ್ರದೇಶಗಳಲ್ಲಿ ಕೆರೆ ಕಟ್ಟೆಗಳ ಹೂಳೆತ್ತಿಸಿ, ಅವುಗಳಲ್ಲಿ ಮಳೆಯ ನೀರನ್ನು ಸಂಗ್ರಹಸಿ, ಕಡಿಮೆ ಅವಧಿಯ ಬೆಳೆ ಬೆಳೆಯಲು ನೆರವಾಗಿದ್ದಾರೆ. ಅದೇ ರೀತಿ ಮರಳಿನಿಂದ ಹೂತು ಹೋಗಿದ್ದ ನದಿಗಳ ಹೂಳು, ತೆಗೆಸಿ, ಅವುಗಳ ದಡದಲ್ಲಿ ಗಿಡ, ಮರಗಳನ್ನು ನೆಟ್ಟು ಬೆಂಗಾಡಿನಂತೆ ಇದ್ದ ಅನೇಕ ಜಿಲ್ಲೆಗಳನ್ನು ಹಸಿರುಮಯವಾಗಿಸಿದ್ದಾರೆ. ಕಳೆದ ಒಂದು ದಶಕದಿಂದ ಮಹಾರಾಷ್ಟ್ರ ಸರ್ಕಾರವು, ಈ ಯೋಜನೆಯನ್ನು ನಾಮ್ ಪೌಂಡೇಷನ್ ಗೆ ವಹಿಸಿದೆ. ಅತ್ಯಂತ ಪಾರದರ್ಶಕವಾಗಿ ನಡೆಯುವ ಈ ಕಾರ್ಯಕ್ರಮಗಳಿಗೆ ಪುಣೆಯ ಶಿವಾಜಿ ನಗರದಲ್ಲಿರುವ ಕಾರ್ಯಾಲಯದಿಂದ ನೂರಾರು ಕಾರ್ಯಕರ್ತರು ಸಮರ್ಪಣಾ ಭಾವದಿಂದ ತೊಡಗಿಸಿಕೊಂಡಿದ್ದಾರೆ.ಪೌಂಡೇಷನ್ ಗೆ ಬರುವ ಪ್ರತಿ ಹಣಕಾಸಿನ ವಿವರವನನ್ನು ಪಾರದರ್ಶಕವಾಗಿ ಇಡಲಾಗಿದೆ. ನಾನಾ ಪಾಟೇಕರ್ ಉದಾರ ಮನಸ್ಸಿನಿಮದ ಆರಂಭಿಸಿದ ಈ ಕಾರ್ಯದಿಂದ ಇದೀಗ ಮಹಾರಾಷ್ಟ್ರದಲ್ಲಿ ಸಾವಿರಾರು ಬಡ ರೈತಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಇಂದು ಪುಣೆಯ ಅವರ ಫಾರಂ ಹೌಸ್ ನಲ್ಲಿ ನಡೆಯುವ ನಾನಾ ಪಾಟೇಕರ್ ಅವರ ಅಂತ್ಯ ಸಂಸ್ಕಾರಕ್ಕೆ ತಮ್ಮ ಕುಟುಂಬದ ಬಂದುವನ್ನು ಕಳೆದುಕೊಂಡೆವು ಎಂಬ ದುಖದಿಂದ ಕಣ್ಣೀರು ಇಡುತ್ತಾ, ಆಗಮಿಸುತ್ತಿರುವ ರೈತ ವಿಧವೆಯರು ಮತ್ತು ಅವರ ಮಕ್ಕಳನ್ನು ನೋಡುವಾಗ ಮನಸ್ಸಿಗೆ ಸಂಕಟವಾಗುತ್ತಿದೆ.ನಾನಾ ಪಾಟೇಕರ್ ಎಂಬ ಮಹಾನ್ ನಟ ಮತ್ತು ಹೃದಯವಂತ ಇಂದು ನಮ್ಮೊಡನೆ ಇಲ್ಲ ನಿಜ. ಆದರೆ, ಜನಮಾನಸದಲ್ಲಿ ಸದಾ ಜೀವಂತ ಇರುತ್ತಾರೆ.