ಅಕ್ಟೋಬರ್ ಮೊದಲ ವಾರ 6 ಜಿಲ್ಲೆಯಲ್ಲಿ ಮಳೆಯಿಲ್ಲ, ಬೆಂಗಳೂರು ಸಹಿತ 2 ಕಡೆ ಸಾಮಾನ್ಯ
ಬೆಂಗಳೂರು: ಕರ್ನಾಟಕದಲ್ಲಿ ಮಳೆಗಾಲದ ಅವಧಿ 4 ತಿಂಗಳಲ್ಲಿ ಹೆಚ್ಚಿನ ಭಾಗಗಳಲ್ಲಿ ಕೊರತೆಯೇ ಆಯಿತು. ಇನ್ನೇನು ಹಿಂಗಾರು ಆರಂಭವಾಗುವ ಸಮಯ. ಅಕ್ಟೋಬರ್ ಮೊದಲ ವಾರದಲ್ಲೂ ಹೆಚ್ಚಿನ ಕಡೆ ಮಳೆಯಾಗಿಲ್ಲ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮಳೆಯ ತೀವ್ರ ಕೊರತೆ ಎದುರಾಗಿದೆ. ಆರು ಜಿಲ್ಲೆಗಳಲ್ಲಂತೂ ಮಳೆಯೇ ಆಗಿಲ್ಲ.ಭಾರತೀಯ ಹವಾಮಾನ ಇಲಾಖೆಯ ವರದಿ ಆಧರಿಸಿ ಕರ್ನಾಟಕ

ಬೆಂಗಳೂರು: ಕರ್ನಾಟಕದಲ್ಲಿ ಮಳೆಗಾಲದ ಅವಧಿ 4 ತಿಂಗಳಲ್ಲಿ ಹೆಚ್ಚಿನ ಭಾಗಗಳಲ್ಲಿ ಕೊರತೆಯೇ ಆಯಿತು. ಇನ್ನೇನು ಹಿಂಗಾರು ಆರಂಭವಾಗುವ ಸಮಯ. ಅಕ್ಟೋಬರ್ ಮೊದಲ ವಾರದಲ್ಲೂ ಹೆಚ್ಚಿನ ಕಡೆ ಮಳೆಯಾಗಿಲ್ಲ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮಳೆಯ ತೀವ್ರ ಕೊರತೆ ಎದುರಾಗಿದೆ. ಆರು ಜಿಲ್ಲೆಗಳಲ್ಲಂತೂ ಮಳೆಯೇ ಆಗಿಲ್ಲ.ಭಾರತೀಯ ಹವಾಮಾನ ಇಲಾಖೆಯ ವರದಿ ಆಧರಿಸಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದಲ್ಲಿ ಲಭ್ಯ ಇರುವ ಮಾಹಿತಿ ಪ್ರಕಾರ, ಅಕ್ಟೋಬರ್ 1ರಿಂದ ಅಕ್ಟೋಬರ್ 8ರವರೆಗೆ ಎರಡು ಜಿಲ್ಲೆಗಳಲ್ಲಿ ಮಾತ್ರ ಮಳೆ ಪ್ರಮಾಣ ಸಾಮಾನ್ಯವಾಗಿದೆ. ಉಳಿದಂತೆ 10 ಜಿಲ್ಲೆಗಳಲ್ಲಿ ಕೊರತೆ ಕಂಡು ಬಂದರೆ, ಇನ್ನುಳಿದ 13 ಜಿಲ್ಲೆಗಳಲ್ಲಿ ಹೆಚ್ಚಿನ ಕೊರತೆ ಇರುವುದು ಕಂಡು ಬಂದಿದೆ. ಈ ಅವಧಿಯಲ್ಲಿ ಬೆಂಗಳೂರು ನಗರ ಹಾಗೂ ಕೋಲಾರ ಜಿಲ್ಲೆಯಲ್ಲಿ ವಾಡಿಕೆಯಷ್ಟು ಮಳೆಯಾಗಿದೆ. ಬೆಂಗಳೂರು ನಗರದಲ್ಲಿ 53 ಮಿ.ಮೀ ಹಾಗೂ ಕೋಲಾರ ಜಿಲ್ಲೆಯಲ್ಲಿ 39 ಮಿ.ಮೀ ಮಳೆ ಸುರಿದಿದೆ.ಮಂಡ್ಯದಲ್ಲಿ 10 ಮಿ.ಮೀ, ತುಮಕೂರು ಜಿಲ್ಲೆಯಲ್ಲಿ 17 ಮಿ.ಮೀ, ಚಿತ್ರದುರ್ಗ ಜಿಲ್ಲೆಯಲ್ಲಿ 6 ಮಿ.ಮೀ, ದಾವಣಗೆರೆ ಜಿಲ್ಲೆಯಲ್ಲಿ 4 ಮಿ.ಮೀ, ಶಿವಮೊಗ್ಗ ಜಿಲ್ಲೆಯಲ್ಲಿ 11 ಮಿ.ಮೀ, ಹಾವೇರಿ ಜಿಲ್ಲೆಯಲ್ಲಿ 8 ಮಿ.ಮೀ ಮಳೆಯಾಗಿದೆ.ಉತ್ತರ ಕನ್ನಡ ಜಿಲ್ಲೆಯಲ್ಲಿ 7 ಮಿ.ಮೀ, ವಿಜಯನಗರ ಜಿಲ್ಲೆಯಲ್ಲಿ 5 ಮಿ.ಮೀ, ಬಳ್ಳಾರಿ ಜಿಲ್ಲೆಯಲ್ಲಿ 4 ಮಿ.ಮೀ, ಕೊಪ್ಪಳ ಜಿಲ್ಲೆಯಲ್ಲಿ 5 ಮಿ.ಮೀ, ಗದಗ ಜಿಲ್ಲೆಯಲ್ಲಿ 4 ಮಿ.ಮೀ, ಧಾರವಾಡ ಜಿಲ್ಲೆಯಲ್ಲಿ 13 ಮಿ.ಮೀ. ಬೆಳಗಾವಿ ಜಿಲ್ಲೆಯಲ್ಲಿ 5 ಮಿ.ಮೀ ಮಳೆಯಾಗಿದ್ದು. ತೀವ್ರ ಕೊರತೆ ಪಟ್ಟಿಯಲ್ಲಿವೆ.ಉಡುಪಿ ಜಿಲ್ಲೆಯಲ್ಲಿ 42 ಮಿ.ಮೀ ಮಳೆಯಾದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 69 ಮಿ.ಮೀ, ಚಿಕ್ಕಮಗಳೂರು ಜಿಲ್ಲೆಯಲ್ಲಿ 27 ಮಿ.ಮೀ, ಹಾಸನ ಜಿಲ್ಲೆಯಲ್ಲಿ 21 ಮಿ.ಮೀ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 29 ಮಿ.ಮೀ ಮಳೆಯಾಗಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 32 ಮಿ.ಮೀ, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 29 ಮಿ.ಮೀ, ಕೊಡಗು ಜಿಲ್ಲೆಯಲ್ಲಿ 32 ಮಿ.ಮೀ, ಮೈಸೂರು ಜಿಲ್ಲೆಯಲ್ಲಿ 21 ಮಿ.ಮೀ, ಚಾಮರಾಜನಗರ ಜಿಲ್ಲೆಯಲ್ಲಿ 20 ಮಿ.ಮೀ ಮಳೆಯಾಗಿದೆ. ಈ ಎಲ್ಲಾ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.ಬೀದರ್. ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಈ ಅವಧಿಯಲ್ಲಿ ಮಳೆಯಾಗಿಲ್ಲ. ಕೊರತೆ ಪ್ರಮಾಣ ಶೇ 100ರಷ್ಟಿದೆ.ಸಿ.ಎಸ್.ಪಾಟೀಲ್, ಹವಾಮಾನ ತಜ್ಞಅಕ್ಟೋಬರ್ ತಿಂಗಳಲ್ಲಿ ಮಳೆ ಹೆಚ್ಚು ಬರುವ ಸಾಧ್ಯತೆ ಕಡಿಮೆ. ಮೊದಲ ವಾರದಲ್ಲಿ ಕೆಲವು ಭಾಗಗಳಲ್ಲಿ ಮಳೆಯಿದ್ದು, ನಂತರ ಕಡಿಮೆ ಆಗಬಹುದುಮಳೆ ಮಾಹಿತಿ