ಬಿಜೆಪಿಯನ್ನು ವಿರೋಧಿಸುವವರ ಮತಗಳನ್ನು ಅಳಿಸುವುದೇ ಎಸ್ಐಆರ್ ಉದ್ದೇಶ: ದೀಪ್ಕೆ
ಬೆಂಗಳೂರು: ಬಿಜೆಪಿಯನ್ನು ವಿರೋಧಿಸುವವರ ಮತಗಳನ್ನು ತೆಗೆದುಹಾಕುವ ಉದ್ದೇಶದಿಂದಲೇ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಸಲಾಗುತ್ತಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಆರೋಪಿಸಿದ್ದಾರೆ.ಒಗ್ಗಟ್ಟು ಪ್ರದರ್ಶಿಸಿ, ಸುದೀರ್ಘ ಆಂದೋಲನಕ್ಕೆ ಸಜ್ಜಾಗಿ: ಸಿಜೆಪಿ ಕರೆಬೆಂಗಳೂರಿನಲ್ಲಿ ವಿವಿಧ ನಾಗರಿಕ ಸಮಾಜ ಸಂಘಟನೆ
ಬೆಂಗಳೂರು: ಬಿಜೆಪಿಯನ್ನು ವಿರೋಧಿಸುವವರ ಮತಗಳನ್ನು ತೆಗೆದುಹಾಕುವ ಉದ್ದೇಶದಿಂದಲೇ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಸಲಾಗುತ್ತಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಆರೋಪಿಸಿದ್ದಾರೆ.ಒಗ್ಗಟ್ಟು ಪ್ರದರ್ಶಿಸಿ, ಸುದೀರ್ಘ ಆಂದೋಲನಕ್ಕೆ ಸಜ್ಜಾಗಿ: ಸಿಜೆಪಿ ಕರೆಬೆಂಗಳೂರಿನಲ್ಲಿ ವಿವಿಧ ನಾಗರಿಕ ಸಮಾಜ ಸಂಘಟನೆಗಳು ಆಯೋಜಿಸಿದ್ದ ‘ಜನತಾ ನ್ಯಾಯಾಲಯ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಸತ್ತಿದ್ದಾರೆ ಎಂದು ಘೋಷಿಸಲಾದವರು ಇಂದು ನಮ್ಮ ಮುಂದೆ ಜೀವಂತವಾಗಿ ನಿಂತಿದ್ದಾರೆ. ಹಾಗಾದರೆ ಸಾವು ಸಂಭವಿಸಿರುವುದು ಈ ಜನರದ್ದಲ್ಲ; ಈ ದೇಶದ ಪ್ರಜಾಪ್ರಭುತ್ವದ್ದು’ ಎಂದು ದೀಪ್ಕೆ ಹೇಳಿದರು.ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೂಚನೆಯ ಮೇರೆಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಸೇರಿದಂತೆ ಚುನಾವಣಾ ಆಯೋಗದ ಅಧಿಕಾರಿಗಳು ಜನರ ಮತಗಳನ್ನು ಅಳಿಸಿದ್ದಾರೆ. ಆರ್ಎಸ್ಎಸ್ನ ಸಿದ್ಧಾಂತವು ಎಲ್ಲರನ್ನೂ ಒಳಗೊಂಡ ಭಾರತ ಹಾಗೂ ಬಿ.ಆರ್. ಅಂಬೇಡ್ಕರ್ ಮತ್ತು ಪೆರಿಯಾರ್ ಅವರ ವಿಚಾರಗಳನ್ನು ಒಪ್ಪುವುದಿಲ್ಲ. ನಮ್ಮ ಪ್ರಜಾಪ್ರಭುತ್ವ ಮತ್ತು ದೇಶವನ್ನು ಉಳಿಸಲು ಆ ಸಿದ್ಧಾಂತದ ವಿರುದ್ಧ ಹೋರಾಡಬೇಕು ಎಂದು ಅವರು ಕರೆ ಕೊಟ್ಟರು.ಸಿಜೆಪಿ ಹೋರಾಟ: ಪ್ರತಿಭಟನಕಾರರು ದೆಹಲಿಗೆ ಬರದಂತೆ ಪೊಲೀಸರಿಂದ ಬಿಗಿ ಕ್ರಮಮಹಾತ್ಮ ಗಾಂಧೀಜಿ ಭಾರತದ ‘ಆತ್ಮ’, ಅಂಬೇಡ್ಕರ್ ದೇಶದ ‘ಬೆನ್ನೆಲುಬು’ ಹಾಗೂ ಜವಾಹರಲಾಲ್ ನೆಹರೂ ದೇಶದ ‘ಮೆದುಳು’ ಎಂದು ಬಣ್ಣಿಸಿದ ದೀಪ್ಕೆ , ಈ ಮೂವರೂ ದೇಶಕ್ಕೆ ಅಡಿಪಾಯ ಹಾಕಿದ್ದಾರೆ ಎಂದರು. ನೆಹರೂ ಅವರೊಂದಿಗೆ ಮೋದಿ ಅವರನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ, ನೆಹರೂಗಿಂತ ಹೆಚ್ಚು ಕಾಲ ಅಧಿಕಾರದಲ್ಲಿರಲು ಮೋದಿ ಬಯಸುತ್ತಿದ್ದಾರೆ ಎಂದು ಆರೋಪಿಸಿದರು.‘ಒಂದು ದೇಶ, ಒಂದು ಚುನಾವಣೆ’ ಎಂಬುದು ಕೇವಲ ಘೋಷಣೆಯಾಗಿದ್ದು, ಇದರ ಹಿಂದಿನ ನಿಜವಾದ ಉದ್ದೇಶ ‘ಒಂದು ದೇಶ, ಒಂದು ಪಕ್ಷ’. ಇದು ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ನ ಆಲೋಚನೆ ಎಂದರು.2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವಿನ ಮತಗಳ ವ್ಯತ್ಯಾಸ ಕೇವಲ ಶೇ 2ರಷ್ಟಿತ್ತು. ‘ಅಬ್ ಕಿ ಬಾರ್ 400 ಪಾರ್’ ಎಂಬ ಘೋಷಣೆ ನೀಡಿದ್ದ ಬಿಜೆಪಿ 240 ಸ್ಥಾನಗಳಷ್ಟೇ ಗೆಲುವು ಸಾಧಿಸಿತು. ಇದರ ಬಳಿಕ ಬಿಜೆಪಿಯನ್ನು ಬೆಂಬಲಿಸದವರ ಮತಗಳನ್ನು ಅಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.ಸಿಜೆಪಿ ಆಯೋಜಿಸಿದ್ದ ಪ್ರತಿಭಟನೆಗೆ ಸಂಬಂಧಿಸಿದಂತೆ 400–500 ಜನರ ವಿರುದ್ಧ ಪ್ರಕರಣದೇಶಾದ್ಯಂತ 13 ಕೋಟಿ ಮತಗಳು ಹಾಗೂ ಕರ್ನಾಟಕದಲ್ಲಿ ಸುಮಾರು ಒಂದು ಕೋಟಿ ಮತಗಳನ್ನು ಅಳಿಸಲಾಗಿದೆ. ಇದರಿಂದಾಗಿಯೇ ಗೆಲ್ಲಲು ಸಾಧ್ಯವಿರದ ರಾಜ್ಯಗಳಲ್ಲೂ ಬಿಜೆಪಿ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ಅವರು ಹೇಳಿದರು.ಮಮತಾ ಬ್ಯಾನರ್ಜಿ, ಅರವಿಂದ ಕೇಜ್ರಿವಾಲ್ ಮತ್ತು ಎಂ.ಕೆ. ಸ್ಟಾಲಿನ್ ಅವರಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲೂ ದೊಡ್ಡ ಪ್ರಮಾಣದಲ್ಲಿ ಮತಗಳನ್ನು ಅಳಿಸಲಾಗಿದೆ. ಪ್ರಾದೇಶಿಕ ಪಕ್ಷಗಳು ಮತ್ತು ನಾಯಕರನ್ನು ದುರ್ಬಲಗೊಳಿಸುವುದು ಇದರ ಉದ್ದೇಶ ಎಂದು ದೀಪ್ಕೆ ಹೇಳಿದರು.‘ಭಾರತದ ಪ್ರಜಾಪ್ರಭುತ್ವವನ್ನು ಉಳಿಸಲು ಜನರು ಬೀದಿಗಿಳಿಯಬೇಕು. ಜನರ ಮತಗಳನ್ನು ರಕ್ಷಿಸಿದರೆ ಮಾತ್ರ ದೇಶವನ್ನು ಉಳಿಸಬಹುದು’ ಎಂದು ಅವರು ಕರೆ ನೀಡಿದರು.‘ಜ್ಞಾನು ಬ್ರೋ...’ ಸಿಜೆಪಿ ಪ್ರತಿಭಟನೆಯಲ್ಲಿ ವ್ಯಂಗ್ಯ–ವಿರೋಧದ ಪ್ರದರ್ಶನ