ಮಕ್ಕಳಲ್ಲಿ ಅಪೌಷ್ಟಿಕತೆ: ಮುಖ್ಯಮಂತ್ರಿ ಡಿಕೆಶಿ ಕ್ಷೇತ್ರವಾದ ಕನಕಪುರದಲ್ಲೇ ಹೆಚ್ಚು
ರಾಮನಗರ: ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಂತಿರುವ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಸುಮಾರು 386 ಮಕ್ಕಳನ್ನು ಅಪೌಷ್ಟಿಕತೆ ಕಾಡುತ್ತಿದೆ. ಅದರಲ್ಲೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕ್ಷೇತ್ರವಾದ ಕನಕಪುರದಲ್ಲೇ ಅತಿ ಹೆಚ್ಚು 103 ಮಕ್ಕಳು ಅಪೌಷ್ಟಿಕತೆಯಿಂದಬಳಲುತ್ತಿದ್ದಾರೆ.ಜಿಲ್ಲೆಯ ಒಂದು ಭಾಗವು ಕೈಗಾರೀಕರಣದಿಂದಾಗಿ ದಿನದಿಂದ ದಿನಕ್ಕೆ ಬೆಳೆದು ರಾಜಧಾನಿಗೆ

ರಾಮನಗರ: ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಂತಿರುವ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಸುಮಾರು 386 ಮಕ್ಕಳನ್ನು ಅಪೌಷ್ಟಿಕತೆ ಕಾಡುತ್ತಿದೆ. ಅದರಲ್ಲೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕ್ಷೇತ್ರವಾದ ಕನಕಪುರದಲ್ಲೇ ಅತಿ ಹೆಚ್ಚು 103 ಮಕ್ಕಳು ಅಪೌಷ್ಟಿಕತೆಯಿಂದಬಳಲುತ್ತಿದ್ದಾರೆ.ಜಿಲ್ಲೆಯ ಒಂದು ಭಾಗವು ಕೈಗಾರೀಕರಣದಿಂದಾಗಿ ದಿನದಿಂದ ದಿನಕ್ಕೆ ಬೆಳೆದು ರಾಜಧಾನಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಮತ್ತೊಂದು ಭಾಗವು ಕೃಷಿ, ತೋಟಗಾರಿಕೆ ಹಾಗೂ ಹೈನುಗಾರಿಕೆಯಲ್ಲಿ ಉತ್ಕೃಷ್ಟವಾಗಿದೆ. ಹೀಗಿದ್ದರೂ, ಜಿಲ್ಲೆಯ ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ ಹೆಚ್ಚಿದೆ.ಹಾರೋಹಳ್ಳಿ ಕಡಿಮೆ: ‘ಜಿಲ್ಲೆಯ 5 ತಾಲ್ಲೂಕುಗಳ ಪೈಕಿ ಕನಕಪುರದಲ್ಲಿ ಅತಿ ಹೆಚ್ಚು 103 ಮಕ್ಕಳು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಹಾರೋಹಳ್ಳಿಯಲ್ಲಿ ಅತಿ ಕಡಿಮೆ 28 ಮಕ್ಕಳಿಗೆ ಪೌಷ್ಟಿಕತೆ ಕೊರತೆ ಇದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.‘ಕನಕಪುರ ತಾಲ್ಲೂಕು ಹೆಚ್ಚಿನ ಅರಣ್ಯ, ಗುಡ್ಡಗಾಡು ಹಾಗೂ ಗ್ರಾಮೀಣ ಪ್ರದೇಶ ಹೊಂದಿರುವುದರಿಂದ ಈ ಭಾಗದಲ್ಲಿ ವಾಸವಾಗಿರುವ ಬುಡಕಟ್ಟು ಸಮುದಾಯದ ಇರುಳಿಗರು ಸೇರಿದಂತೆ ಇತರ ಹಿಂದುಳಿದ ಸಮುದಾಯದ ಮಕ್ಕಳಲ್ಲಿ ಪೌಷ್ಟಿಕತೆ ಕೊರತೆ ಹೆಚ್ಚಾಗಿದೆ. ನಂತರದ ಸ್ಥಾನದಲ್ಲಿರುವ ಮಾಗಡಿಯಲ್ಲಿ 96, ರಾಮನಗರದಲ್ಲಿ 82 ಹಾಗೂ ಚನ್ನಪಟ್ಟಣ ತಾಲ್ಲೂಕಿನ 77 ಮಕ್ಕಳಲ್ಲಿ ಅಪೌಷ್ಟಿಕತೆ ಇದೆ. ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದಾದ ಅಪೌಷ್ಟಿಕತೆ ಕುರಿತು ಪೋಷಕರಲ್ಲಿ ಅರಿವಿನ ಕೊರತೆ ಇದೆ’ ಎಂದರು.ಗಂಡು ಮಕ್ಕಳಲ್ಲೇ ಹೆಚ್ಚು: ‘ಅಪೌಷ್ಟಿಕತೆಯ ಪ್ರಮಾಣ ಗಂಡು ಮಕ್ಕಳಲ್ಲೇ ಹೆಚ್ಚಾಗಿದೆ. ಒಟ್ಟು ಮಕ್ಕಳ ಪೈಕಿ 191 ಗಂಡು ಮತ್ತು 126 ಹೆಣ್ಣು ಮಕ್ಕಳಲ್ಲಿ ಸಾಧಾರಣ ಅಪೌಷ್ಟಿಕತೆ ಹಾಗೂ 38 ಗಂಡು ಮತ್ತು 31 ಹೆಣ್ಣು ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಇದೆ. ಈ ಪೈಕಿ, ಕನಕಪುರದ 1 ಹಾಗೂ ರಾಮನಗರದ ಮೂವರು ಮಕ್ಕಳನ್ನು ಪೌಷ್ಟಿಕ ಪುನರ್ವಸತಿ ಕೇಂದ್ರಕ್ಕೆ (ಎನ್ಆರ್ಸಿ) ದಾಖಲಿಸಿ 14 ದಿನಗಳವರೆಗೆ ಪೌಷ್ಟಿಕ ಆರೈಕೆ ಮಾಡಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದರು.‘ಇಲಾಖೆ ಗುರುತಿಸಿರುವ ಅಪೌಷ್ಟಿಕ ಮಕ್ಕಳಿಗೆ ಒಮೇಗಾ–3 ಕೊಬ್ಬುಭರಿತ 25 ಗ್ರಾಂನ ಒಂದು ಉಂಡೆ, ಅಂಜೂರ ಅಥವಾ ಕರ್ಜೂರ ಹಣ್ಣು, ಕ್ಯಾಲ್ಸಿಯಂ ಸಿರಪ್ ಹಾಗೂ ಆರೋಗ್ಯವರ್ಧಕ ಪೇಯ ನೀಡಲು ಜಿಲ್ಲಾ ಪಂಚಾಯಿತಿಯಿಂದ ₹5.49 ಲಕ್ಷ ಬಿಡುಗಡೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಅಸಮಾಧಾನ: ಮಕ್ಕಳಲ್ಲಿರುವ ಅಪೌಷ್ಟಿಕತೆ ಮೂರಂಕಿ ತಲುಪಿರುವುದಕ್ಕೆ ಇತ್ತೀಚೆಗೆ ನಡೆದಿದ್ದ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಹಾಗೂ ಜಿಲ್ಲಾ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅಸಮಾಧಾನ ವ್ಯಕ್ತಪಡಿಸಿದ್ದರು. ಅಪೌಷ್ಠಿಕತೆ ನಿವಾರಿಸಲು ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಅಂಗನವಾಡಿಗಳ ಮೂಲಕ ಪೌಷ್ಟಿಕ ಆಹಾರ ಒದಗಿಸಬೇಕು. ಕೇಂದ್ರ ಸರ್ಕಾರದ ಪೋಷಣ್ ಅಭಿಯಾನ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.ಡಿ. ಮಂಜುನಾಥ್, ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವುದರ ಜೊತೆಗೆ, ತೀವ್ರವಾಗಿರುವವರನ್ನು ಎನ್ಆರ್ಸಿ ಕೇಂದ್ರಕ್ಕೆ ದಾಖಲಿಸಿ ಆರೈಕೆ ಮಾಡಲಾಗುತ್ತಿದೆ. ಪೋಷಕರಿಗೆ ಜಾಗೃತಿ ಮೂಡಿಸಲಾಗುತ್ತಿದೆಅಪೌಷ್ಟಿಕತೆ ಎದುರಿಸುತ್ತಿರುವ ಒಟ್ಟು 386 ಮಕ್ಕಳ ಪೈಕಿ 69 ಮಂದಿಯಲ್ಲಿ ತೀವ್ರವಾಗಿದೆ. ಆ ಪೈಕಿ, 2 ವರ್ಷ ಮೇಲ್ಪಟ್ಟ 26 ಮಕ್ಕಳಲ್ಲಿ ಇನ್ನೂ ಹೆಚ್ಚಾಗಿದೆ. ಇದರಲ್ಲೂ ಕನಕಪುರ ಮುಂದಿದೆ. ಇಲ್ಲಿ 19 ಮಕ್ಕಳಲ್ಲಿ ತೀವ್ರವಾಗಿದೆ. ಉಳಿದಂತೆ ಚನ್ನಪಟ್ಟಣ ಮತ್ತು ಮಾಗಡಿಯಲ್ಲಿ ತಲಾ 18, ರಾಮನಗರದಲ್ಲಿ 10 ಹಾಗೂ ಹಾರೋಹಳ್ಳಿ 4 ಮಂದಿಗೆ ಈ ಸಮಸ್ಯೆ ತೀವ್ರವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದರು.69 ಮಕ್ಕಳಲ್ಲಿ ತೀವ್ರ