ಕಿಶನ್ಗಢ | ಔಡಿ ಕಾರು ಓಡಿಸಿ ಡಿಕ್ಕಿ ಹೊಡೆದ ಬಾಲಕ: ಪಾದಚಾರಿ ಸಾವು
ನವದೆಹಲಿ (ಪಿಟಿಐ): ನೈರುತ್ಯ ದೆಹಲಿಯ ಕಿಶನ್ಗಢದಲ್ಲಿ 17 ವರ್ಷದ ಬಾಲಕನೊಬ್ಬ ಸ್ನೇಹಿತನ ಹುಟ್ಟುಹಬ್ಬಕ್ಕೆಂದು ಬಾಡಿಗೆಗೆ ಪಡೆದ ಔಡಿ ಕಾರನ್ನು ಮೂರು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಪಾದಚಾರಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಗುರುವಾರ ಹೇಳಿದ್ದಾರೆ.ಅಕ್ಟೋಬರ್ 4ರ ನಸುಕಿನ ಜಾವ ಸುಮಾರು 2:30ಕ್ಕೆ ಕಿಶನ್ಗಢ ಟ್ರಾಫಿಕ್ ಸಿಗ್ನಲ್ನ ಸಿಎನ್ಪಿ ಪಂಪ್ ಬಳಿ ಈ

ನವದೆಹಲಿ (ಪಿಟಿಐ): ನೈರುತ್ಯ ದೆಹಲಿಯ ಕಿಶನ್ಗಢದಲ್ಲಿ 17 ವರ್ಷದ ಬಾಲಕನೊಬ್ಬ ಸ್ನೇಹಿತನ ಹುಟ್ಟುಹಬ್ಬಕ್ಕೆಂದು ಬಾಡಿಗೆಗೆ ಪಡೆದ ಔಡಿ ಕಾರನ್ನು ಮೂರು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಪಾದಚಾರಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಗುರುವಾರ ಹೇಳಿದ್ದಾರೆ.ಅಕ್ಟೋಬರ್ 4ರ ನಸುಕಿನ ಜಾವ ಸುಮಾರು 2:30ಕ್ಕೆ ಕಿಶನ್ಗಢ ಟ್ರಾಫಿಕ್ ಸಿಗ್ನಲ್ನ ಸಿಎನ್ಪಿ ಪಂಪ್ ಬಳಿ ಈ ಅಪಘಾತ ನಡೆದಿದೆ. ಕಾರನ್ನು ಆನ್ಲೈನ್ ಆ್ಯಪ್ ಮೂಲಕ ಒಂದು ರಾತ್ರಿಗೆ ₹16,000 ಕೊಟ್ಟು ಬಾಡಿಗೆಗೆ ಪಡೆಯಲಾಗಿತ್ತು.ಕಿಶನ್ಗಢ ನಿವಾಸಿ ಉಮಾಶಂಕರ್ (45) ಮೃತ ಪಾದಚಾರಿ. ಅಪಘಾತದಿಂದ ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.ಪೊಲೀಸರು ಬಾಲಕನನ್ನು ಬಂಧಿಸಿ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಬಾಲಾಪರಾಧಿ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಿದ್ದಾರೆ.ಪೊಲೀಸರು ಔಡಿ ಕಾರು ಸೇರಿದಂತೆ ಎಲ್ಲಾ ವಾಹನಗಳನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿದ್ದಾರೆ. ಬಾಲಕನಿಗೆ ಕಾರನ್ನು ಬಾಡಿಗೆಗೆ ನೀಡಿದ ಕಂಪನಿಯ ಮೇಲೆ ಕೂಡ ಪೊಲೀಸರು ನಿಗಾ ಇಟ್ಟಿದ್ದಾರೆ.ವಾಹನವನ್ನು ಬಾಡಿಗೆಗೆ ಪಡೆಯುವ ಸಮಯದಲ್ಲಿ ಸಲ್ಲಿಸಲಾದ ಬುಕಿಂಗ್, ವಯಸ್ಸಿನ ಪರಿಶೀಲನೆ ಪ್ರಕ್ರಿಯೆ, ಚಾಲನಾ ಪರವಾನಗಿ ಮತ್ತು ಇತರ ದಾಖಲೆಗಳ ವಿವರಗಳನ್ನು ಕೋರುತ್ತಿದ್ದಾರೆ. ಯಾವುದೇ ಲೋಪ ಕಂಡುಬಂದರೆ, ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.