ಹಿರಿಯ ನಟ ನಾನಾ ಪಾಟೇಕರ್ ನಿಧನ – ಗೋವಾ ಪೊಲೀಸರಿಂದ ಅಸ್ವಾಭಾವಿಕ ಸಾವು ಕೇಸ್ ದಾಖಲು
ಪಣಜಿ: ಹೃದಯ ಸ್ತಂಭನದಿಂದ ಹಿರಿಯ ನಟ ನಾನಾ ಪಾಟೇಕರ್ (Nana Patekar) ಅವರು ನಿಧನರಾದ ಬಳಿಕ ಗೋವಾ ಪೊಲೀಸರು (Goa Police) ಅಸಹಜ ಸಾವು (UDR) ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುರುವಾರ (ಅ.8) ನಟ ನಾನಾ ಪಾಟೇಕರ್ (76) ಅವರು ಗೋವಾದ ದೋನಾ ಪೌಲಾದ ಓಷನ್ ಪಾರ್ಕ್ನಲ್ಲಿರುವ ನಿವಾಸದಿಂದ ಬಾಂಬೋಲಿಮ್ನ ಮಣಿಪಾಲ್ ಆಸ್ಪತ್ರೆಗೆ ಕರೆತಂದಾಗ ಮೃತಪಟ್ಟ ಸ್ಥಿತಿಯಲ್ಲಿ ಪತ

ಪಣಜಿ: ಹೃದಯ ಸ್ತಂಭನದಿಂದ ಹಿರಿಯ ನಟ ನಾನಾ ಪಾಟೇಕರ್ (Nana Patekar) ಅವರು ನಿಧನರಾದ ಬಳಿಕ ಗೋವಾ ಪೊಲೀಸರು (Goa Police) ಅಸಹಜ ಸಾವು (UDR) ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುರುವಾರ (ಅ.8) ನಟ ನಾನಾ ಪಾಟೇಕರ್ (76) ಅವರು ಗೋವಾದ ದೋನಾ ಪೌಲಾದ ಓಷನ್ ಪಾರ್ಕ್ನಲ್ಲಿರುವ ನಿವಾಸದಿಂದ ಬಾಂಬೋಲಿಮ್ನ ಮಣಿಪಾಲ್ ಆಸ್ಪತ್ರೆಗೆ ಕರೆತಂದಾಗ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹೀಗಾಗಿ ಇದೀಗ ಗೋವಾ ಪೊಲೀಸರು ಬಿಎನ್ಎಸ್ 194ರ ಅಡಿಯಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಪಿಎಸ್ಐ ನಿತಿನ್ ನಾಯಕ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಸರ್ಕಾರಿ ಗೌರವದೊಂದಿಗೆ ನಾನಾ ಪಾಟೇಕರ್ ಅಂತ್ಯಕ್ರಿಯೆ: ಮಹಾರಾಷ್ಟ್ರ ಸಚಿವ ವೈದ್ಯರ ಮಾಹಿತಿ ಪ್ರಕಾರ, ನಾನಾ ಪಾಟೇಕರ್ ಅವರಿಗೆ ಮೊದಲಿನಿಂದಲೇ ಹೃದಯ ಸಂಬಂಧಿ ಕಾಯಿಲೆ ಇದ್ದು, ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಹೀಗಾಗಿ ಅವರ ಸಾವಿಗೆ ಹೃದಯಾಘಾತವೇ ಕಾರಣವೇ ಎಂದು ಶಂಕಿಸಲಾಗಿದೆ. ಆದರೂ ಕೂಡ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ. ಗುರುವಾರ ಸಂಜೆ ಪುಣೆಯ ದೊಂಜೆ ಗ್ರಾಮದಲ್ಲಿ ನಾನಾ ಪಾಟೇಕರ್ ಅವರ ಅಂತ್ಯಕ್ರಿಯೆಯು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ.ಇದನ್ನೂ ಓದಿ: ಸಕಲ ಸರ್ಕಾರಿ ಗೌರವಗಳೊಂದಿಗೆ ನಾನಾ ಪಾಟೇಕರ್ ಅಂತ್ಯಕ್ರಿಯೆ – ಪುಣೆಯ ಸ್ವಗ್ರಾಮದಲ್ಲಿ ಅಂತಿಮ ವಿಧಿವಿಧಾನ