ಪಿತೃಪಕ್ಷದ ಅಂತಿಮಘಟ್ಟ ಮಹಾಲಯ ಅಮಾವಾಸ್ಯೆ: ಈ ದಿನ ಯಾರೆಲ್ಲಾ ತರ್ಪಣ ಕೊಡಬಹುದು?
ಅಕ್ಟೋಬರ್ 10ರ ಶನಿವಾರದಂದು ಮಹಾಲಯ ಅಮಾವಾಸ್ಯೆಯನ್ನು ಆಚರಿಸುತ್ತೇವೆ. ಇದು ಪಿತೃಪಕ್ಷದ ಕೊನೆಯ ದಿನವಾಗಿದೆ. ಇದನ್ನು ಪಿತೃತರ್ಪಣೆಯ ಮಹಾಕಾಲ ಎಂತಲೂ ಕರೆಯಲಾಗುತ್ತದೆ. ಇದಕ್ಕೂ ಒಂದು ದಿನ ಮೊದಲು ಘಾತ ಚತುರ್ದಶಿಯನ್ನು ಆಚರಿಸಲಾಗುತ್ತದೆ. ಹಾಗಾದರೆ, ಈ ದಿನದ ಆಚರಣೆಯ ಮಹತ್ವ ಹಾಗೂ ವಿಶೇಷತೆಗಳೇನು ಎಂಬ ಮಾಹಿತಿ ಇಲ್ಲಿದೆ.ಘಾತ ಚತುರ್ದಶಿಪಿತೃಪಕ್ಷದ 14ನೇ ದಿನದಂದು ‘ಘಾತ ಚ

ಅಕ್ಟೋಬರ್ 10ರ ಶನಿವಾರದಂದು ಮಹಾಲಯ ಅಮಾವಾಸ್ಯೆಯನ್ನು ಆಚರಿಸುತ್ತೇವೆ. ಇದು ಪಿತೃಪಕ್ಷದ ಕೊನೆಯ ದಿನವಾಗಿದೆ. ಇದನ್ನು ಪಿತೃತರ್ಪಣೆಯ ಮಹಾಕಾಲ ಎಂತಲೂ ಕರೆಯಲಾಗುತ್ತದೆ. ಇದಕ್ಕೂ ಒಂದು ದಿನ ಮೊದಲು ಘಾತ ಚತುರ್ದಶಿಯನ್ನು ಆಚರಿಸಲಾಗುತ್ತದೆ. ಹಾಗಾದರೆ, ಈ ದಿನದ ಆಚರಣೆಯ ಮಹತ್ವ ಹಾಗೂ ವಿಶೇಷತೆಗಳೇನು ಎಂಬ ಮಾಹಿತಿ ಇಲ್ಲಿದೆ.ಘಾತ ಚತುರ್ದಶಿಪಿತೃಪಕ್ಷದ 14ನೇ ದಿನದಂದು ‘ಘಾತ ಚತುರ್ದಶಿಯನ್ನು ಆಚರಿಸುತ್ತೇವೆ. ಈ ವರ್ಷ ಘಾತ ಚತುರ್ದಶಿಯು ದಿನಾಂಕ 9ರಂದು ಬಂದಿದೆ. ಈ ದಿನವನ್ನು ಅಕಸ್ಮಿಕ ಮರಣ ಅಂದರೆ ವಾಹನ ಅಥವಾ ಯಾವುದೇ ರೀತಿಯ ಅಪಘಾತಗಳು, ಅಗ್ನಿ ಅವಘಡಗಳು ಮುಂತಾದ ಅಸ್ವಾಭಾವಿಕ ರೀತಿಯಲ್ಲಿ ಪ್ರಾಣತ್ಯಾಗ ಮಾಡಿದವರಿಗೆ ಶ್ರಾದ್ಧವನ್ನು ಆಚರಿಸಲಾಗುತ್ತದೆ. ಇದರಿಂದಾಗಿ ಪೂರ್ವಜರೊಂದಿಗಿನ ಬಾಂಧವ್ಯವು ಬಲಗೊಳ್ಳುತ್ತದೆ. ಅವರ ಆತ್ಮಗಳಿಗೆ ಶಾಂತಿಯು ದೊರೆಯುತ್ತದೆ ಎಂಬ ನಂಬಿಕೆ ಇದೆ.ಈ ದಿನದ ಆಚರಣೆಯಿಂದ ವಂಶಕ್ಕಿರುವ ಪ್ರೇತಶಾಪವು ದೂರವಾಗುತ್ತದೆ. ಇಂದು ನದಿ ಅಥವಾ ಸಮುದ್ರ ಸ್ನಾನ ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ. ಗಯಾದಂತಹ ಪುಣ್ಯಕ್ಷೇತ್ರಗಳಲ್ಲಿ ಪಿಂಡ ಪ್ರದಾನ ಮಾಡುವುದು ಹೆಚ್ಚು ಶ್ರೇಯಸ್ಕರ. ಸಾಮಾನ್ಯವಾಗಿ ಪಿತೃಪಕ್ಷವನ್ನು ಆಚರಿಸುವ ಪ್ರತಿಯೊಬ್ಬರೂ ಈ ದಿನದಂದು ಅವಶ್ಯಕತೆ ಇದ್ದವರಿಗೆ ಹಾಲು ಹಾಗೂ ಫಲಗಳನ್ನು ದಾನವಾಗಿ ನೀಡಬಹುದಾಗಿದೆ. ಮಹಾಲಯ ಅಮಾವಾಸ್ಯೆ: ಪಿತೃಗಳಿಗೆ ಸ್ವಾಗತಮಹಾಲಯ ಅಮಾವಾಸ್ಯೆಪಿತೃಪಕ್ಷದ ಅಂತಿಮಘಟ್ಟವೇ ಮಹಾಲಯ ಅಮಾವಾಸ್ಯೆ. ಅಕ್ಟೋಬರ್ 10 ಶನಿವಾರದಂದು ಈ ದಿನವನ್ನು ಆಚರಿಸಲಾಗುತ್ತದೆ. ಇದನ್ನು ಸರ್ವಪಿತೃ ಅಮಾವಾಸ್ಯೆ ಎಂದು ಕರೆಯಾಗುತ್ತದೆ. ಯಾವುದೇ ತಿಥಿಯ ದಿನ ಅಸುನೀಗಿದ್ದರೂ ಈದಿನ ಶ್ರಾದ್ಧವನ್ನು ಆಚರಿಸಬಹುದು. ಆದ್ದರಿಂದ ಈ ದಿನವು ವಿಶೇಷ ಮಹತ್ವವನ್ನು ಪಡೆಯುತ್ತದೆ.ಜಾತಿಬೇಧವಿಲ್ಲದೆ ಪ್ರತಿಯೊಬ್ಬ ಹಿಂದೂವೂ ಇಂದಿನ ಆಚರಣೆಯಲ್ಲಿ ಪಾಲ್ಗೊಳ್ಳಬಹುದು. ಸಾಮಾನ್ಯವಾಗಿ ದ್ವಾದಶ ಪಿತೃಗಳಿಗೆ ಮಾತ್ರ ತರ್ಪಣವನ್ನು ನೀಡಲಾಗುತ್ತದೆ. ಆದರೆ ಈ ದಿನದಂದು ಕೇವಲ ವಂಶಕ್ಕೆ ಸಂಬಂಧಿಸಿದವರಲ್ಲದೆ ಆತ್ಮೀಯರು ಮತ್ತು ಪ್ರೀತಿ ಪಾತ್ರರಿಗೆ ತರ್ಪಣವನ್ನು ನೀಡಬಹುದು. ಕೆಲವರು ಅಸುನೀಗಿದ ಪ್ರಾಣಿಗಳಿಗೂ ತರ್ಪಣ ನೀಡುತ್ತಾರೆ.ಎಲ್ಲೆಡೆ ಮಹಾಲಯ ಅಮಾವಾಸ್ಯೆ ಆಚರಣೆತರ್ಪಣ ನೀಡುವ ಪದ್ಧತಿ ಇಲ್ಲದವರು ಹಾಲು, ತರಕಾರಿ ಮೊದಲುಗೊಂಡು ದಿನನಿತ್ಯದ ಅಡುಗೆಗೆ ಬೇಕಾದ ಪದಾರ್ಥಗಳನ್ನು ದಾನ ಮಾಡುತ್ತಾರೆ. ಪ್ರತಿವರ್ಷ ಬರುವ ಶ್ರಾದ್ಧವನ್ನು ಮಾಡಲು ವಿಫಲರಾದವರು ವಂಶದ ಹಿರಿಯರ ಅವಕೃಪೆಗೆ ಒಳಗಾಗುತ್ತಾರೆ. ಹಾಗೆ ವಂಶದ ಏಳಿಗೆಯೂ ಅಸಾಧ್ಯವಾಗುತ್ತದೆ. ಪೂಜೆ, ಪುನಸ್ಕಾರ, ಹವನ–ಹೋಮಗಳು ಕೇವಲ ಲೆಕ್ಕಕಷ್ಟೇ ಸೀಮಿತವಾಗುತ್ತದೆ. ಅಂತಹವರು ಈ ದಿನದಂದು ಬಿಟ್ಟುಹೋದ ಶ್ರಾದ್ಧ ಕರ್ಮವನ್ನು ಮಾಡಬಹುದಾಗಿದೆ. ವಯೋವೃದ್ದರು ಅಥವಾ ಅನಾರೋಗ್ಯದಿಂದ ಬಳಲುತ್ತಿರುವವರು ಸ್ವಯಂ ಪಾಕವನ್ನು ನೀಡಬಹುದಾಗಿದೆ. ಇದರಿಂದ ವಂಶಕ್ಕೆ ತಗುಲಿದ ಲೋಪ ದೋಷಗಳು ದೂರವಾಗುತ್ತವೆ. ಕೆಲವೆಡೆ ಕೇವಲ ಕಾಗೆಗಳಿಗೆ ಮಾತ್ರವಲ್ಲದೆ, ಬೇರೆ ಪಕ್ಷಿಗಳಿಗೂ ಅನ್ನ ಅಥವಾ ಇನ್ನಿತರ ಭಕ್ಷ್ಯಗಳನ್ನು ನೀಡಲಾಗುತ್ತದೆ.ಪಿತೃತರ್ಪಣೆಯ ಮಹಾಕಾಲ: ಇಂದು ಮಹಾಲಯ ಅಮಾವಾಸ್ಯೆಮತ್ತೊಂದು ಮುಖ್ಯವಾದ ವಿಚಾರವೆಂದರೆ, ಶ್ರಾದ್ಧ ವಿಧಿಗಳನ್ನು ಆಚರಿಸುವವರು ಕೇವಲ ಮಧ್ಯಾಹ್ನದ ವೇಳೆಯಲ್ಲಿ ಮಾತ್ರ ಭೋಜನ ಸೇವಿಸಬಹುದು. ಸೂರ್ಯಾಸ್ತವಾದ ನಂತರ ಫಲಹಾರವನ್ನೂ ಸೇವಿಸಬಾರದು. ಕೆಲವರು ನೀರಿಗೆ ಒಂದು ತೊಟ್ಟು ಹಾಲು ಅಥವಾ ಮಜ್ಜಿಗೆಯನ್ನು ಬೆರೆಸಿ ಕುಡಿಯುತ್ತಾರೆ. ಆದರೆ ಕೇವಲ ದಾನ ನೀಡಿದವರು ಉಪವಾಸ ಮಾಡುವ ಅಗತ್ಯವಿಲ್ಲ. ರಾತ್ರಿಯ ವೇಳೆಯಲ್ಲಿ ಫಲಾಹಾರ ಸೇವಿಸಬಹುದುದಾಗಿದೆ. ಕೆಲವು ಪ್ರಾಂತ್ಯಗಳಲ್ಲಿ ಮಾತ್ರ ಹೆಣ್ಣುಮಕ್ಕಳು ಮತ್ತು ಅಸುನೀಗಿದವರ ಪತ್ನಿಯೂ ಸಹ ಈ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ. ಈ ದಿನ ಹೊಸ ಬಟ್ಟೆಗಳನ್ನು ಕೊಳ್ಳುವುದಾಗಲಿ ಅಥವಾ ಧರಿಸುವುದಾಗಲಿ ನಿರ್ಬಂಧಿತವಾಗಿದೆ.