ಮೈಸೂರು ದಸರಾ 2026: ಚಿನ್ನದ ಅಂಬಾರಿ ಹೊರಲು ಧನಂಜಯನ ಆಯ್ಕೆ ಬಹುತೇಕ ಖಚಿತ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ (Mysuru Dasara 2026) ಚಿನ್ನದ ಅಂಬಾರಿ ಹೊರುವ ಆನೆ ಯಾರು ಅನ್ನೋ ಕುತೂಹಲಕ್ಕೆ ಈಗ ಬಹುತೇಕ ಉತ್ತರ ಸಿಕ್ಕಂತಾಗಿದೆ. ಅಂಬಾರಿ ಹೊರುವ ಆನೆಗಳ ರೇಸ್ನಲ್ಲಿದ್ದ ಮಹೇಂದ್ರನಿಗೆ ತಾಲೀಮಿನಲ್ಲಿ ಹಿನ್ನಡೆಯಾಗಿದ್ದು, ಧನಂಜಯನ ಆಯ್ಕೆ ಬಹುತೇಕ ಖಚಿತವಾಗಿದೆ. ಅಭಿಮನ್ಯು ನಿವೃತ್ತಿ ಬಳಿಕ ಚಿನ್ನದ ಅಂಬಾರಿಯನ್ನು ಹೊರುವ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ (Mysuru Dasara 2026) ಚಿನ್ನದ ಅಂಬಾರಿ ಹೊರುವ ಆನೆ ಯಾರು ಅನ್ನೋ ಕುತೂಹಲಕ್ಕೆ ಈಗ ಬಹುತೇಕ ಉತ್ತರ ಸಿಕ್ಕಂತಾಗಿದೆ. ಅಂಬಾರಿ ಹೊರುವ ಆನೆಗಳ ರೇಸ್ನಲ್ಲಿದ್ದ ಮಹೇಂದ್ರನಿಗೆ ತಾಲೀಮಿನಲ್ಲಿ ಹಿನ್ನಡೆಯಾಗಿದ್ದು, ಧನಂಜಯನ ಆಯ್ಕೆ ಬಹುತೇಕ ಖಚಿತವಾಗಿದೆ. ಅಭಿಮನ್ಯು ನಿವೃತ್ತಿ ಬಳಿಕ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿ ಯಾರ ಹೆಗಲಿಗೆ ಬೀಳಲಿದೆ ಎಂಬ ಚರ್ಚೆ ನಡೆಯುತ್ತಿತ್ತು. ಇದೀಗ ಧನಂಜಯನ ಹೆಸರು ಮುಂಚೂಣಿಗೆ ಬಂದಿದ್ದು, ದಸರಾ ಗಜಪಡೆಯ ಹೊಸ ಕ್ಯಾಪ್ಟನ್ ಆಗುವ ನಿರೀಕ್ಷೆ ಹೆಚ್ಚಾಗಿದೆ. ಚಿನ್ನದ ಅಂಬಾರಿ ಹೊರುವ ಆನೆಗಳ ಪೈಕಿ ಧನಂಜಯ ದೈತ್ಯಗಾತ್ರದ ಆನೆ. ಇತ್ತೀಚಿನ ತೂಕ ಪರೀಕ್ಷೆಯಲ್ಲಿ ಧನಂಜಯ ಬರೋಬ್ಬರಿ 5,530 ಕೆ.ಜಿ. ತೂಕ ಹೊಂದಿದ್ದಾನೆ. ಅಂದರೆ ಸುಮಾರು 5.5 ಟನ್ ತೂಕ ಅಂಬಾರಿ ಹೊರುವ ಆನೆಯನ್ನು ಆಯ್ಕೆ ಮಾಡುವಾಗ ಅದರ ದೈಹಿಕ ಸಾಮರ್ಥ್ಯ, ತಾಲೀಮಿನ ಪ್ರಗತಿ ಮತ್ತು ನಡಿಗೆಯನ್ನು ಗಮನಿಸಲಾಗುತ್ತದೆ. ಈ ಎಲ್ಲ ಅಂಶಗಳ ಆಧಾರದಲ್ಲಿ ಧನಂಜಯನ ಆಯ್ಕೆಗೆ ಹೆಚ್ಚಿನ ಒತ್ತು ಸಿಗುತ್ತಿದೆ. ಇದನ್ನೂ ಓದಿ: ಬೆಂಗಳೂರಿನ ಬಸವನಗರ ಮುಖ್ಯರಸ್ತೆ 20 ದಿನ ಬಂದ್; ಸಂಚಾರ ನಿರ್ಬಂಧ ಈ ಬಾರಿಯ ದಸರಾ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿಯ ಭಾರ ಹೊತ್ತು ನಾಡದೇವಿ ಚಾಮುಂಡೇಶ್ವರಿಯನ್ನು ಹೊತ್ತು ಸಾಗುವ ಭಾಗ್ಯ ಧನಂಜಯನಿಗೆ ಒಲಿಯುತ್ತಾ ಎಂಬ ಕುತೂಹಲ ಮೂಡಿದೆ. ಧನಂಜಯನ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದ್ದರೂ, ಅರಣ್ಯ ಇಲಾಖೆಯ ಅಧಿಕೃತ ಘೋಷಣೆಯ ಬಳಿಕವಷ್ಟೇ ಈ ವಿಚಾರಕ್ಕೆ ಸ್ಪಷ್ಟನೆ ಸಿಗಲಿದೆ.ಇದನ್ನೂ ಓದಿ: ಸರೋವರಕ್ಕೆ ಅಪ್ಪಳಿಸಿದ ಹೆಲಿಕಾಪ್ಟರ್ – ಇಬ್ಬರು ನಾಪತ್ತೆ, ಐವರ ರಕ್ಷಣೆ