ಸೇನೆಯ ಜತೆ ನಂಟು
ಮುಂಬೈ: ಬೆಳಗಾವಿಯ ‘ಜೂನಿಯರ್ ಲೀಡರ್ಸ್ ವಿಂಗ್’ (ಜೆಎಲ್ಡಬ್ಲ್ಯು) ಮತ್ತು ನಾನಾ ಪಾಟೇಕರ್ ನಡುವೆ ವಿಶೇಷವಾದ ನಂಟು ಇದೆ. ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟಲ್ ಸೆಂಟರ್ನ (ಎಂಎಲ್ಐಆರ್ಸಿ) ಪಕ್ಕದಲ್ಲಿರುವ ಜೆಎಲ್ಡಬ್ಲ್ಯು, ಭಾರತೀಯ ಸೇನೆಯ ಕಮಾಂಡೊಗಳಿಗೆ ತರಬೇತಿ ನೀಡುವ ಕೇಂದ್ರವಾಗಿ ಪ್ರಸಿದ್ಧಿ ಪಡೆದಿದೆ.1991ರ ಜನಪ್ರಿಯ ‘ಆ್ಯಕ್ಷನ್ ಡ್ರಾಮಾ’ ಸಿನಿಮಾ ‘ಪ್ರಹಾ

ಮುಂಬೈ: ಬೆಳಗಾವಿಯ ‘ಜೂನಿಯರ್ ಲೀಡರ್ಸ್ ವಿಂಗ್’ (ಜೆಎಲ್ಡಬ್ಲ್ಯು) ಮತ್ತು ನಾನಾ ಪಾಟೇಕರ್ ನಡುವೆ ವಿಶೇಷವಾದ ನಂಟು ಇದೆ. ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟಲ್ ಸೆಂಟರ್ನ (ಎಂಎಲ್ಐಆರ್ಸಿ) ಪಕ್ಕದಲ್ಲಿರುವ ಜೆಎಲ್ಡಬ್ಲ್ಯು, ಭಾರತೀಯ ಸೇನೆಯ ಕಮಾಂಡೊಗಳಿಗೆ ತರಬೇತಿ ನೀಡುವ ಕೇಂದ್ರವಾಗಿ ಪ್ರಸಿದ್ಧಿ ಪಡೆದಿದೆ.1991ರ ಜನಪ್ರಿಯ ‘ಆ್ಯಕ್ಷನ್ ಡ್ರಾಮಾ’ ಸಿನಿಮಾ ‘ಪ್ರಹಾರ್: ದಿ ಫೈನಲ್ ಅಟ್ಯಾಕ್’ ನಿರ್ದೇಶಿಸುವ ಮುನ್ನ, ನಾನಾ ಅವರು ಜೆಎಲ್ಡಬ್ಲ್ಯುನಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಹಾಗೂ ಯೋಧರೊಂದಿಗೆ ಹಲವು ದಿನ ತರಬೇತಿ ಪಡೆದಿದ್ದರು.ಈ ಚಿತ್ರದಲ್ಲಿ ಅವರು ಜೆಎಲ್ಡಬ್ಲ್ಯುನ ಶಿಸ್ತಿನ ಅಧಿಕಾರಿ ಹಾಗೂ ತರಬೇತುದಾರರಾದ ಮೇಜರ್ ಚೌಹಾಣ್ ಅವರ ಪಾತ್ರವನ್ನು ನಿರ್ವಹಿಸಿದ್ದರು. ‘ಪ್ರಹಾರ್’ ಚಿತ್ರದ ತಾರಾಗಣದಲ್ಲಿ ಮಾಧುರಿ ದೀಕ್ಷಿತ್, ಡಿಂಪಲ್ ಕಪಾಡಿಯಾ, ಮಕರಂದ್ ದೇಶಪಾಂಡೆ, ಗೌತಮ್ ಜೋಗ್ಲೇಕರ್ ಮುಂತಾದವರು ಇದ್ದರು.ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಮತ್ತು ವಿದೇಶಾಂಗ ವ್ಯವಹಾರಗಳ ಮಾಜಿ ರಾಜ್ಯ ಸಚಿವರಾದ ಜನರಲ್ ವಿ.ಕೆ. ಸಿಂಗ್ (ನಿವೃತ್ತ) ಅವರು, ಈ ಚಿತ್ರದ ನಿರ್ಮಾಣದ ಸಮಯದಲ್ಲಿ ಜೆಎಲ್ಡಬ್ಲ್ಯುನಲ್ಲಿ ನಿಯೋಜನೆಗೊಂಡಿದ್ದರು. ಮಾತ್ರವಲ್ಲ, ಸಿನಿಮಾದಲ್ಲಿ ಒಂದು ಸಣ್ಣ ಪಾತ್ರವನ್ನೂ ನಿರ್ವಹಿಸಿದ್ದರು. ನಾನಾ ಪಾಟೇಕರ್ ಅವರ ವೃತ್ತಪರತೆಯನ್ನು ಸಿಂಗ್ ಅವರು ನೆನಪಿಸಿಕೊಂಡರು.‘ಪಾಟೇಕರ್ ಅವರ ನಿಧನದ ಸುದ್ದಿ ತೀವ್ರ ದುಃಖ ಉಂಟುಮಾಡಿದೆ. ‘ಪ್ರಹಾರ್’ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ನಾನು ಅವರನ್ನು ಹತ್ತಿರದಿಂದ ಗಮನಿಸಿದ್ದೇನೆ. ಅವರು ಒಬ್ಬ ಅದ್ಭುತ ನಟ ಮಾತ್ರ ಆಗಿರಲಿಲ್ಲ. ಪ್ರಭಾವಶಾಲಿ ವ್ಯಕ್ತಿತ್ವವನ್ನು ಹೊಂದಿದ್ದರು. ತಮಗೆ ನೀಡಲಾದ ಪಾತ್ರಕ್ಕೆ ಹೊಂದಿಕೊಳ್ಳಲು ಅಪಾರ ಶ್ರಮ ವಹಿಸುತ್ತಿದ್ದರು. ಅವರ ಬದ್ಧತೆ, ಕಠಿಣ ಪರಿಶ್ರಮ ಮತ್ತು ನೇರ–ನಿಷ್ಠುರ ಕಾರ್ಯವೈಖರಿಯು ಅವರು ನಿರ್ವಹಿಸಿದ ಪಾತ್ರಗಳಿಗೆ ಜೀವ ತುಂಬಿಕೊಡುತ್ತಿತ್ತು. ಭಾರತೀಯ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಮತ್ತು ಅವರು ಬಿಟ್ಟುಹೋಗಿರುವ ನೆನಪುಗಳು ಚಿರಸ್ಥಾಯಿಯಾಗಿ ಉಳಿಯಲಿವೆ’ ಎಂದು ಜನರಲ್ ಸಿಂಗ್ ಸ್ಮರಿಸಿದರು.ಸಶಸ್ತ್ರ ಪಡೆಗಳೊಂದಿಗೆ ವಿಶೇಷ ಬಾಂಧವ್ಯವನ್ನು ಹೊಂದಿದ್ದ ನಾನಾ ಪಾಟೇಕರ್ ಅವರು 1999ರ ಕಾರ್ಗಿಲ್ ಸಂಘರ್ಷದ ಸಮಯದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು.‘ಕಾರ್ಗಿಲ್ ಸಂಘರ್ಷದ ಸಮಯದಲ್ಲಿ ನಾನು ಭಾರತೀಯ ಸೇನೆಗೆ ಸೇವೆ ಸಲ್ಲಿಸಲು ಬಯಸಿದೆ. ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ನಾಗರಿಕರಿಗೆ ಅದಕ್ಕೆ ಅವಕಾಶವಿಲ್ಲ ಎಂದು ಅವರು ಹೇಳಿದರು. ಆದಾಗ್ಯೂ, ರಕ್ಷಣಾ ಸಚಿವರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ನನ್ನಲ್ಲಿ ತಿಳಿಸಿದರು. ನನಗೆ ಚೆನ್ನಾಗಿ ಪರಿಚಯವಿದ್ದ ಜಾರ್ಜ್ ಫರ್ನಾಂಡಿಸ್ (ಅಂದಿನ ರಕ್ಷಣಾ ಸಚಿವ) ಅವರನ್ನು ಸಂಪರ್ಕಿಸಿದಾಗ, ಅವರು ನನಗೆ ಅವಕಾಶ ನೀಡಿದರು. ಸೇನೆಗೆ ಸೇವೆ ಸಲ್ಲಿಸಲು ಹೋದಾಗ 76 ಕೆ.ಜಿ. ಇದ್ದ ನಾನು ವಾಪಸ್ ಬರುವಾಗ 56 ಕೆ.ಜಿ. ಆಗಿದ್ದೆ. ಸೇನೆಯ ‘ಕ್ವಿಕ್ ರಿಯಾಕ್ಷನ್ ಟೀಮ್’ನೊಂದಿಗೆ ಕಾರ್ಯನಿರ್ವಹಿಸಿದೆ’ ಎಂದು ಅವರು ಈಚೆಗೆ ಹೇಳಿದ್ದರು. ಆದರೆ ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ್ದರು.ಕಾರ್ಗಿಲ್ ಯುದ್ಧದ ಸಮಯದಲ್ಲಿ 60 ದಿನ ಸೈನಿಕರೊಂದಿಗೆ ಇದ್ದ ಅವರು ದ್ರಾಸ್, ಲೇಹ್, ಕುಪ್ವಾರಾ, ಬಾರಾಮುಲ್ಲಾ ಹಾಗೂ ಸೋಪೋರ್ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದರು. ನಾನಾ ಅವರು ಹಲವಾರು ಚಲನಚಿತ್ರಗಳಲ್ಲಿ ಸೇನಾಧಿಕಾರಿಯ ಪಾತ್ರವನ್ನು ನಿರ್ವಹಿಸಿದ್ದಾರೆ.