ಎಚ್ಚರವಾಗಿರಿ, ಮನೆಯೊಳಗೇ ಇರಿ..: ಹೌತಿ ದಾಳಿಗಳ ಹಿನ್ನೆಲೆ ಸೌದಿಯಲ್ಲಿರುವ ಭಾರತೀಯರಿಗೆ ಸಲಹೆ
ರಿಯಾದ್: ಇರಾನ್ನ (Iran) ಬೆಂಬಲವಿರುವ ಯೆಮೆನ್ ಮೂಲದ ಹೌತಿ ಗುಂಪು (Houthi) ಸೌದಿ ಅರೇಬಿಯಾದ (Saudi Arabia) ವಿಮಾನ ನಿಲ್ದಾಣಗಳ ಮೇಲೆ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯರು (Indians) ಜಾಗರೂಕರಾಗಿರುವಂತೆ ಹಾಗೂ ಮನೆಯೊಳಗೇ ಇರುವಂತೆ ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿದೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸೌದಿ ಅರೇಬಿಯಾದಲ್

ರಿಯಾದ್: ಇರಾನ್ನ (Iran) ಬೆಂಬಲವಿರುವ ಯೆಮೆನ್ ಮೂಲದ ಹೌತಿ ಗುಂಪು (Houthi) ಸೌದಿ ಅರೇಬಿಯಾದ (Saudi Arabia) ವಿಮಾನ ನಿಲ್ದಾಣಗಳ ಮೇಲೆ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯರು (Indians) ಜಾಗರೂಕರಾಗಿರುವಂತೆ ಹಾಗೂ ಮನೆಯೊಳಗೇ ಇರುವಂತೆ ಭಾರತೀಯ ರಾಯಭಾರ ಕಚೇರಿ ಸೂಚನೆ ನೀಡಿದೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸೌದಿ ಅರೇಬಿಯಾದಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಜಾಗರೂಕರಾಗಿರಿ. ಮನೆಯೊಳಗೇ ಇರುವಂತೆ ಮತ್ತು ಸ್ಥಳೀಯ ಅಧಿಕಾರಿಗಳು ಅಧಿಕೃತ ಮಾರ್ಗಗಳ ಮೂಲಕ ನೀಡುವ ಸೂಚನೆಗಳನ್ನು ಪಾಲಿಸುವಂತೆ ರಿಯಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಲಹೆ ನೀಡಿದೆ. ಅಲ್ಲದೆ, ನಡೆಯುತ್ತಿರುವ ಘಟನೆಗಳಿಗೆ ಸಂಬಂಧಿಸಿದ ಯಾವುದೇ ವೀಡಿಯೊಗಳು ಅಥವಾ ಸುದ್ದಿಗಳನ್ನು ಹಂಚಿಕೊಳ್ಳಬೇಡಿ. ಇತರರ ವೀಡಿಯೋ ಹಂಚಿಕೊಳ್ಳದಂತೆ ಭಾರತೀಯ ಪ್ರಜೆಗಳಿಗೆ ಸೂಚಿಸಲಾಗಿದೆ ಎಂದು ಸಲಹಾ ಪತ್ರದಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ – ವಿಮಾನ ಹಾರಾಟ ಸ್ಥಗಿತ ರಿಯಾದ್ನಲ್ಲಿರುವ ರಾಯಭಾರ ಕಚೇರಿ, ಜೆಡ್ಡಾದಲ್ಲಿರುವ ಕಾನ್ಸುಲೇಟ್ ಹಾಗೂ VFS ಸಂಸ್ಥೆಯ ಮೂಲಕ ಒದಗಿಸಲಾಗುವ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಅಗತ್ಯವಿದ್ದಾಗಲೆಲ್ಲಾ ಇವು ಮಾಹಿತಿ ಹಾಗೂ ಸಲಹೆ-ಸೂಚನೆಗಳನ್ನು ನೀಡಲಿವೆ ಎಂದು ತಿಳಿಸಿದೆ. ಅಲ್ಲದೆ, ಪ್ರವಾಸಿ ಭಾರತೀಯ ಸಹಾಯಕ ಕೇಂದ್ರ’ದ (PBSK) 24×7 ಸಹಾಯವಾಣಿಯು ಸ್ಥಳೀಯ ಟೋಲ್-ಫ್ರೀ ಸಂಖ್ಯೆ 8002471234 ಮೂಲಕ ಲಭ್ಯವಿರುತ್ತದೆ ಎಂದೂ ಹೇಳಿದೆ. ಭದ್ರತಾ ಪರಿಸ್ಥಿತಿಯನ್ನು ಕಾರಣವಾಗಿ ನೀಡಿ ಏರ್ ಇಂಡಿಯಾ ಹಾಗೂ ಕಡಿಮೆ ದರದ ವಿಮಾನಯಾನ ಸಂಸ್ಥೆಗಳಾದ ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್, ರಿಯಾದ್ಗೆ ತಮ್ಮ ವಿಮಾನಗಳ ಹಾರಾಟವನ್ನು ಅಕ್ಟೋಬರ್ 10ರವರೆಗೆ ರದ್ದುಗೊಳಿಸಿವೆ. ಇದರಿಂದ ಬಾಧಿತರಾದ ಪ್ರಯಾಣಿಕರಿಗೆ ಪೂರ್ಣ ಹಣವನ್ನು ಮರುಪಾವತಿಸಲಾಗುವುದು ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ. ಇದನ್ನೂ ಓದಿ: ರಷ್ಯಾ ಕರಾವಳಿಯಲ್ಲಿ ಉಕ್ರೇನ್ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್, 23 ಭಾರತೀಯ ಸಿಬ್ಬಂದಿ ಪಾರು ಅಮೆರಿಕಕ್ಕೆ ಸೌದಿ ಅರೇಬಿಯಾ ನೀಡುತ್ತಿರುವ ಬೆಂಬಲದ ಹಿನ್ನೆಲೆಯಲ್ಲಿ, ಇರಾನ್ ಬೆಂಬಲಿತ ಹೌತಿಗಳು ಇತ್ತೀಚಿನ ದಿನಗಳಲ್ಲಿ ಸೌದಿಯ ವಿಮಾನ ನಿಲ್ದಾಣಗಳು, ಸೇನಾ ನೆಲೆಗಳು ಮತ್ತು ತೈಲ ಸ್ಥಾವರಗಳ ಮೇಲೆ ದಾಳಿ ನಡೆಸಿರುವುದಾಗಿ ತಿಳಿಸಿದ್ದಾರೆ.