ಉಪಚುನಾವಣೆ ಮತ ಎಣಿಕೆ: ತಮಿಳುನಾಡಿನಲ್ಲಿ ಟಿವಿಕೆಗೆ ಮುನ್ನಡೆ
ಮೂರು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತದ ಪ್ರದೇಶದ ಒಟ್ಟು ಆರು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಇಂದು (ಶುಕ್ರವಾರ, ಅಕ್ಟೋಬರ್ 9) ಪ್ರಕಟವಾಗಲಿದೆ. ಪಶ್ಚಿಮ ಬಂಗಾಳದ ನಂದಿಗ್ರಾಮ, ರೆಜಿನಗರ್, ತಮಿಳುನಾಡಿನ ಮದುರಾಂತಕಮ್, ಧಾರಾಪುರಮ್, ಪುದುಚೇರಿಯ ತಟ್ಟಂಚವಾಡಿ ವಿಧಾನಸಭಾ ಕ್ಷೇತ್ರಳಿಗೆ ಮತ್ತು ಅಸ್ಸಾಂನ ನಾಗೋನ್ ಲೋಕಸಭಾ ಕ್ಷೇತ್ರಕ್ಕೆ ಇದೇ 6ರಂದು ಮತದಾನ ನಡ

ಮೂರು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತದ ಪ್ರದೇಶದ ಒಟ್ಟು ಆರು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಇಂದು (ಶುಕ್ರವಾರ, ಅಕ್ಟೋಬರ್ 9) ಪ್ರಕಟವಾಗಲಿದೆ. ಪಶ್ಚಿಮ ಬಂಗಾಳದ ನಂದಿಗ್ರಾಮ, ರೆಜಿನಗರ್, ತಮಿಳುನಾಡಿನ ಮದುರಾಂತಕಮ್, ಧಾರಾಪುರಮ್, ಪುದುಚೇರಿಯ ತಟ್ಟಂಚವಾಡಿ ವಿಧಾನಸಭಾ ಕ್ಷೇತ್ರಳಿಗೆ ಮತ್ತು ಅಸ್ಸಾಂನ ನಾಗೋನ್ ಲೋಕಸಭಾ ಕ್ಷೇತ್ರಕ್ಕೆ ಇದೇ 6ರಂದು ಮತದಾನ ನಡೆದಿತ್ತು.ಎರಡೂ ಕಡೆ ಟಿವಿಕೆಗೆ ಮುನ್ನಡೆಉಪಚುನಾವಣೆ ನಡೆದಿರುವ ಮದುರಾಂತಕಮ್, ಧಾರಾಪುರಮ್ ಕ್ಷೇತ್ರಗಳಲ್ಲಿ ಆಡಳಿತಾರೂಢ ಟಿವಿಕೆ ಮುನ್ನಡೆ ಸಾಧಿಸಿದೆ.ಮದುರಾಂತಕಮ್ ಕ್ಷೇತ್ರದಲ್ಲಿ ಮರಗತಮ್ ಕುಮಾರವೇಲ್ ಅವರು ಡಿಎಂಕೆಯ ಐ. ಪರಂದಾಮನ್ ಎದುರು 8,790 ಮತಗಳಿಂದ ಮುಂದಿದ್ದಾರೆ.ಧಾರಾಪುರಮ್ನಲ್ಲಿ ಪಿ. ಸತ್ಯಭಾಮ ಅವರು ಡಿಎಂಕೆ ಅಭ್ಯರ್ಥಿ ಸುಕನ್ಯಾ ಎ.ಎಸ್. ಅವರಿಂದ ಎಂಟು ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಟಿವಿಕೆಯ ಈ ಇಬ್ಬರೂ ಅಭ್ಯರ್ಥಿಗಳು ಏಪ್ರಿಲ್ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆಯಿಂದ ಕಣಕ್ಕಿಳಿದು ಗೆದ್ದಿದ್ದರು.ವಿಜಯ್ ಪಕ್ಷಕ್ಕೆ ಮೊದಲ ಪರೀಕ್ಷೆತಮಿಳುನಾಡಿನ ಮದುರಾಂತಕಮ್, ಧಾರಾಪುರಮ್ ಕ್ಷೇತ್ರಗಳಲ್ಲಿ ಎಐಎಡಿಎಂಕೆಯಿಂದ ಗೆದ್ದಿದ್ದ ಕೆ. ಮರಗತಮ್ ಕುಮಾರವೇಲ್ ಹಾಗೂ ಪಿ. ಸತ್ಯಭಾಮ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಟಿವಿಕೆಗೆ ಸೇರಿದ್ದಾರೆ.ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಅಧಿಕಾರಕ್ಕೇರಿದ ನಂತರ ನಡೆಯುತ್ತಿರುವ ಮೊದಲ ಉಪ ಚುನಾವಣೆ ಇದಾಗಿದ್ದು, ಗೆಲ್ಲುವ ಸವಾಲು ಸರ್ಕಾರದ ಮುಂದಿದೆ.ಪಶ್ಚಿಮ ಬಂಗಾಳದಲ್ಲಿ ಸುವೇಂದು vs ಮಮತಾಪಶ್ಚಿಮ ಬಂಗಾಳ ವಿಧಾನಸಭೆಗೆ ಇದೇ ವರ್ಷ ನಡೆದ ಚುನಾವಣೆ ವೇಳೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ನಂದಿಗ್ರಾಮ ಹಾಗೂ ಭವಾನಿಪುರ ಕ್ಷೇತ್ರಗಳಲ್ಲಿ ಕಣಕ್ಕಿಳಿದು, ಎರಡೂ ಕಡೆ ಗೆದ್ದಿದ್ದರು. ನಂತರ ಭವಾನಿಪುರ ಕ್ಷೇತ್ರವನ್ನು ಉಳಿಸಿಕೊಂಡು ನಂದಿಗ್ರಾಮದ ಸದಸ್ಯತ್ವಕ್ಕೆ ಅವರು ರಾಜೀನಾಮೆ ನೀಡಿದ್ದರು.ಅದೇ ರೀತಿ ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದ ಆಮ್ ಜನತಾ ಉನ್ನಾಯನ್ ಪಕ್ಷದ ಹುಮಾಯೂನ್ ಕಬೀರ್ ಅವರು ನಾವ್ಡಾವನ್ನು ಉಳಿಸಿಕೊಂಡು, ರೆಜಿನಗರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.ನಂದಿಗ್ರಾಮದಲ್ಲಿ ಗೆಲ್ಲುವುದು ಮುಖ್ಯಮಂತ್ರಿ ಸುವೇಂದು ಹಾಗೂ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪ್ರತಿಷ್ಠೆಯ ವಿಚಾರವಾಗಿದೆ.