ಗ್ರೀನ್ ಕಾರ್ಡ್ ನಿರ್ಬಂಧದ ನಡುವೆಯೂ 15 ಸಾವಿರ ನೇಮಕಕ್ಕೆ ಟಿಸಿಎಸ್ ಸಜ್ಜು
ನವದೆಹಲಿ: ಗ್ರೀನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದಕ್ಕೆ ಸರ್ಕಾರ ನಿರ್ಬಂಧ ವಿಧಿಸಿದ್ದರೂ, ಮುಂದಿನ ಐದು ವರ್ಷಗಳಲ್ಲಿ ಅಮೆರಿಕದಲ್ಲಿ ಹೆಚ್ಚುವರಿಯಾಗಿ 15 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶುಕ್ರವಾರ ತಿಳಿಸಿದೆ.ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಕಂಟಕ: ಭಾರತೀಯ ನೌಕರರಿಗೆ ಸಂಕಷ್ಟ!ಅಮೆರಿಕದ ಈ ಕ್ರಮವು ತನ

ನವದೆಹಲಿ: ಗ್ರೀನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದಕ್ಕೆ ಸರ್ಕಾರ ನಿರ್ಬಂಧ ವಿಧಿಸಿದ್ದರೂ, ಮುಂದಿನ ಐದು ವರ್ಷಗಳಲ್ಲಿ ಅಮೆರಿಕದಲ್ಲಿ ಹೆಚ್ಚುವರಿಯಾಗಿ 15 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶುಕ್ರವಾರ ತಿಳಿಸಿದೆ.ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಕಂಟಕ: ಭಾರತೀಯ ನೌಕರರಿಗೆ ಸಂಕಷ್ಟ!ಅಮೆರಿಕದ ಈ ಕ್ರಮವು ತನ್ನ ಉದ್ಯೋಗಿಗಳ ನೇಮಕ ಕಾರ್ಯತಂತ್ರ ಅಥವಾ ಗ್ರಾಹಕರೊಂದಿಗಿನ ವ್ಯವಹಾರಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಭಾರತದ ಅತಿದೊಡ್ಡ ಐಟಿ ಸೇವಾ ಸಂಸ್ಥೆ ಹೇಳಿದೆ. ಸ್ಥಳೀಯ ಪ್ರತಿಭಾವಂತರ ನೇಮಕಾತಿಗೆ ಆದ್ಯತೆ ನೀಡುತ್ತಿರುವ ಟಿಸಿಎಸ್, ಅಮೆರಿಕದಾದ್ಯಂತ 31 ಕಚೇರಿಗಳು ಮತ್ತು ಸೇವಾ ಕೇಂದ್ರಗಳಲ್ಲಿ ಉದ್ಯೋಗಿಗಳನ್ನು ಹೊಂದಿದೆ. ಸ್ಥಳೀಯ ನೇಮಕಾತಿಗೆ ತನ್ನ ಬಲವಾದ ಕ್ಯಾಂಪಸ್ ನೇಮಕಾತಿ ವ್ಯವಸ್ಥೆಯೂ ಬೆಂಬಲ ನೀಡುತ್ತಿದೆ ಎಂದು ಕಂಪನಿ ತಿಳಿಸಿದೆ. ಅಮೆರಿಕದ ಕಾರ್ಮಿಕ ಇಲಾಖೆಯ ಎಲ್ಲ ನಿರ್ದೇಶನಗಳನ್ನು ಪಾಲಿಸುವುದಾಗಿಯೂ ಹೇಳಿದೆ.ಟಿಸಿಎಸ್, ಇನ್ಫೊಸಿಸ್, ವಿಪ್ರೊ, ಕಾಗ್ನಿಜೆಂಟ್ ಮತ್ತು ಮೈಕ್ರೋಸಾಫ್ಟ್ ಸೇರಿದಂತೆ ಎಂಟು ತಂತ್ರಜ್ಞಾನ ಕಂಪನಿಗಳನ್ನು ಅಮೆರಿಕ ಸರ್ಕಾರ ಗುರುವಾರ ಗ್ರೀನ್ ಕಾರ್ಡ್ಗೆ ಸಂಬಂಧಿಸಿದ ಪಿಇಆರ್ಎಂ ಕಾರ್ಯಕ್ರಮದಿಂದ ಅಮಾನತುಗೊಳಿಸಿದೆ. ಈ ಕಂಪನಿಗಳ ನೇಮಕಾತಿ ಪದ್ಧತಿಯಿಂದ ಅಮೆರಿಕದ ಉದ್ಯೋಗಿಗಳಿಗೆ ಉದ್ಯೋಗಾವಕಾಶಗಳು ಕಡಿಮೆಯಾಗಿವೆ ಎಂಬುದು ಅಲ್ಲಿನ ಸರ್ಕಾರದ ಆರೋಪ.ಗ್ರೀನ್ ಕಾರ್ಡ್|ಜೆ.ಡಿ.ವ್ಯಾನ್ಸ್ ಹೇಳಿಕೆ ಅನಗತ್ಯ,ಆಧಾರರಹಿತ: ಭಾರತ ಪ್ರತಿಕ್ರಿಯೆಇದರಿಂದಾಗಿ ಕಂಪನಿಗಳಿಗೆ ಹೊಸ ಶಾಶ್ವತ ಕಾರ್ಮಿಕ ಪ್ರಮಾಣೀಕರಣ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ. ಈಗಾಗಲೇ ಸಲ್ಲಿಕೆಯಾಗಿರುವ ಬಾಕಿ ಅರ್ಜಿಗಳ ಪ್ರಕ್ರಿಯೆಯನ್ನೂ ಅಮೆರಿಕದ ಕಾರ್ಮಿಕ ಇಲಾಖೆ ಸ್ಥಗಿತಗೊಳಿಸಿದೆ. ಕಾಗ್ನಿಜೆಂಟ್, ಇನ್ಫೊಸಿಸ್, ಟಾಟಾ, ವಿಪ್ರೊ, ಎಚ್ಸಿಎಲ್ ಮತ್ತು ಕ್ಯಾಪ್ಜೆಮಿನಿ ಸೇರಿದಂತೆ ಪ್ರಮುಖ ಐಟಿ ಹೊರಗುತ್ತಿಗೆ ಸಂಸ್ಥೆಗಳನ್ನು ಪಿಇಆರ್ಎಂ ಕಾರ್ಯಕ್ರಮದಿಂದ ಅಮಾನತುಗೊಳಿಸಲಾಗಿದೆ. ಮೈಕ್ರೋಸಾಫ್ಟ್ ಮತ್ತು ಅಡೋಬ್ ಮೇಲೂ ಕ್ರಮ ಕೈಗೊಳ್ಳಲಾಗಿದೆ. ಗ್ರೀನ್ ಕಾರ್ಡ್, ಪೌರತ್ವ ಅರ್ಜಿಗಳಿಗೆ ಕಾಗದ ರಹಿತ ಸ್ಪರ್ಶ: ಏನಿದು ಹೊಸ ನಿಯಮ?