₹3.50 ಕೋಟಿ ವೆಚ್ಚದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿಗೆ ಚಾಲನೆ
ಬೆಟ್ಟದಪುರ: ಗ್ರಾಮಾಂತರ ಭಾಗದಲ್ಲಿ ಸುಮಾರು ₹3.50 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಸಿ.ಸಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ. ವೆಂಕಟೇಶ್ ಗುರುವಾರ ಭೂಮಿಪೂಜೆ ನೆರವೇರಿಸಿದರು.ಅತ್ತಿಗೋಡು, ನಾಗನಹಳ್ಳಿ, ದೊಡ್ಡೇಗೌಡನ ಕೊಪ್ಪಲು, ಬೆಟ್ಟದತುಂಗ, ಮೇಗಳಕೊಪ್ಪಲು, ಕುಡುಕೂರು, ಗಂಗೆಗೌಡನಕೊಪ್ಪಲು ಹಾಗೂ ನಂದಿಪುರ ಬೋರೆ ಗ್ರಾಮಗಳಲ್ಲಿ ಕಾಮಗಾ

ಬೆಟ್ಟದಪುರ: ಗ್ರಾಮಾಂತರ ಭಾಗದಲ್ಲಿ ಸುಮಾರು ₹3.50 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಸಿ.ಸಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ. ವೆಂಕಟೇಶ್ ಗುರುವಾರ ಭೂಮಿಪೂಜೆ ನೆರವೇರಿಸಿದರು.ಅತ್ತಿಗೋಡು, ನಾಗನಹಳ್ಳಿ, ದೊಡ್ಡೇಗೌಡನ ಕೊಪ್ಪಲು, ಬೆಟ್ಟದತುಂಗ, ಮೇಗಳಕೊಪ್ಪಲು, ಕುಡುಕೂರು, ಗಂಗೆಗೌಡನಕೊಪ್ಪಲು ಹಾಗೂ ನಂದಿಪುರ ಬೋರೆ ಗ್ರಾಮಗಳಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.ಗ್ರಾಮಸ್ಥರು ರಸ್ತೆ ಅಭಿವೃದ್ಧಿ, ದೇವಾಲಯ ನಿರ್ಮಾಣ, ವಿದ್ಯುತ್ ಸಮಸ್ಯೆ, ಕುಡಿಯುವ ನೀರಿನ ಸಮರ್ಪಕ ಸರಬರಾಜು, ಪಶು ವೈದ್ಯಾಧಿಕಾರಿಗಳನ್ನು ಸಮರ್ಪಕವಾಗಿ, ಹಳ್ಳಿಗಳಲ್ಲಿ ಸೇವೆ ಸಲ್ಲಿಸುವಂತೆ ಮನವಿ ಸಲ್ಲಿಸಿದರು. ಬೆಟ್ಟದತುಂಗ ಹಾಗೂ ಮೇಗಳಕೊಪ್ಪಲು ಗ್ರಾಮಸ್ಥರು ವಸತಿ ಸೌಲಭ್ಯ ಕಲ್ಪಿಸುವಂತೆ ಶಾಸಕರಿಗೆ ಮನವಿ ಮಾಡಿದರು.ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ತಾವು ನಿರಂತರವಾಗಿ ಶ್ರಮಿಸುತ್ತಿದ್ದು, ಕ್ಷೇತ್ರದಲ್ಲಿ ಹಲವು ಶಾಶ್ವತ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಜನರು ಕ್ಷೇತ್ರಕ್ಕೆ ಶಾಶ್ವತ ಅಭಿವೃದ್ಧಿ ನೀಡುವವರ ಪರವಾಗಿ ನಿಲ್ಲಬೇಕು ಎಂದು ಶಾಸಕ ಕೆ.ವೆಂಕಟೇಶ್ ಮನವಿ ಮಾಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ. ಟಿ.ಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ಪುಟ್ಟರಾಜು, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಲೋಕೇಶ್, ಚಿಕ್ಕೇಗೌಡ, ಪ್ರಕಾಶ್, ಕೃಷ್ಣೆಗೌಡ, ಭೋಪಾಲಯ್ಯ, ಮಹದೇವ್, ವಿಜಯ್ ರಾಜೇ ಅರಸ್, ಶೇಖರ್, ನಂದೀಶ್, ಶಶಿಧರ್, ಸುನೀಲ್ ಕುಮಾರ್, ಚೇತನ್ ಇದ್ದರು.261009-38-1633995801