ಮಾರುವೇಷದ ಕಾರ್ಯಾಚರಣೆ ಕಾರ್ಖಾನೆ ಇರುವುದು ಕಾಂಗ್ರೆಸ್ನಲ್ಲೇ: ರಘು
ಮೈಸೂರು: ‘ಮಾರುವೇಷದ ಕಾರ್ಯಾಚರಣೆ (ಸ್ಟಿಂಗ್ ಆಪರೇಷನ್) ಕಾರ್ಖಾನೆ ಇರುವುದೇ ಕಾಂಗ್ರೆಸ್ನಲ್ಲಿ’ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಆರ್. ರಘು (ಕೌಟಿಲ್ಯ) ದೂರಿದರು.ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂಥದ್ದೆಲ್ಲಾ ಇರುವುದು ಕಾಂಗ್ರೆಸ್ನಲ್ಲೇ. ಬಣಗಳಿರುವುದೂ ಅಲ್ಲೇ. ಕೆಪಿಸಿಸಿ ಅಧ್ಯಕ್ಷರು–ಸರ್ಕಾರದ ಸಂಬಂಧ ಹೇಗಿದೆ ಎಂಬುದನ್ನು ಆ ಪಕ
ಮೈಸೂರು: ‘ಮಾರುವೇಷದ ಕಾರ್ಯಾಚರಣೆ (ಸ್ಟಿಂಗ್ ಆಪರೇಷನ್) ಕಾರ್ಖಾನೆ ಇರುವುದೇ ಕಾಂಗ್ರೆಸ್ನಲ್ಲಿ’ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಆರ್. ರಘು (ಕೌಟಿಲ್ಯ) ದೂರಿದರು.ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂಥದ್ದೆಲ್ಲಾ ಇರುವುದು ಕಾಂಗ್ರೆಸ್ನಲ್ಲೇ. ಬಣಗಳಿರುವುದೂ ಅಲ್ಲೇ. ಕೆಪಿಸಿಸಿ ಅಧ್ಯಕ್ಷರು–ಸರ್ಕಾರದ ಸಂಬಂಧ ಹೇಗಿದೆ ಎಂಬುದನ್ನು ಆ ಪಕ್ಷದವರೇ ಹೇಳುತ್ತಿದ್ದಾರೆ’ ಎಂದು ಟೀಕಿಸಿದರು.‘ಸರ್ಕಾರ–ಪಕ್ಷದ ನಡುವೆ ಸಮನ್ವಯ ಇಲ್ಲ. ಎರಡೂ ಬೇರೆ ದಿಕ್ಕಿನಲ್ಲಿ ಸಾಗುತ್ತಿವೆ. ಇಡೀ ಸರ್ಕಾರ ಮತ್ತು ಸಚಿವ ಸಂಪುಟವು ಮಾರುವೇಷದ ಕಾರ್ಯಾಚರಣೆಗೆ ಒಳಗಾಗುವ ಮಟ್ಟದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಮುಖ್ಯಮಂತ್ರಿಯೇ ಹೇಳಿದ್ದಾರೆ. ಹುಷಾರಾಗಿರಿ, ನೋಡಿಕೊಂಡು ಮಾಡಿ ಎಂದು ಸಚಿವರಿಗೆ ಅವರು ಎಚ್ಚರಿಕೆ ನೀಡಿದ್ದಾರೆ. ಸರಿಯಾಗಿ ಇರುವವರು ಮಾರುವೇಷದ ಕಾರ್ಯಾಚರಣೆಗೇಕೆ ಹೆದರುತ್ತಾರೆ? ಭಯವೇಕೆ?’ ಎಂದು ಕೇಳಿದರು.‘ಸಚಿವರ್ಯಾರೂ ಪ್ರಾಮಾಣಿಕವಾಗಿಲ್ಲ, ಎಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ, ಯಾವ್ಯಾವುದೋ ಮಾರ್ಗ ಹಿಡಿದಿದ್ದಾರೆ, ಮಾರುವೇಷದ ಕಾರ್ಯಾಚರಣೆಗೆ ಒಳಗಾಗುವಂತಹ ಕೃತ್ಯದಲ್ಲಿ ತೊಡಗಿದ್ದಾರೆಂದು ಮುಖ್ಯಮಂತ್ರಿಯವರೇ ಪ್ರಮಾಣೀಕರಿಸಿದ್ದಾರೆ (ಸರ್ಟಿಫೈ ಮಾಡಿದ್ದಾರೆ)’ ಎಂದು ಟೀಕಿಸಿದರು.