ಮೈಸೂರು ರಂಗಾಯಣದಲ್ಲಿ ‘ನವರಾತ್ರಿ ರಂಗೋತ್ಸವ’ ಅ.11ರಿಂದ
ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಇಲ್ಲಿನ ರಂಗಾಯಣದಲ್ಲಿ ಅ.11ರಿಂದ 19ರವರೆಗೆ ‘ರಂಗಭೀಷ್ಮ ಬಿ.ವಿ. ಕಾರಂತ ಕಾಲೇಜು ನವರಾತ್ರಿ ರಂಗೋತ್ಸವ’ ಆಯೋಜಿಸಲಾಗಿದೆ.11ರಂದು ಸಂಜೆ 6ಕ್ಕೆ ವನರಂಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಉದ್ಘಾಟಿಸುವರು. ಇಲಾಖೆಯ ಕಾರ್ಯದರ್ಶಿ ಎನ್.ಮಂಜುಶ್ರೀ ‘ರಂಗಾಯಣದ ನಾಟಕಗಳ ಛಾಯಾಚಿತ್ರಗಳ ಪ್ರದರ್ಶನ’ ಅನಾವರಣಗೊಳಿಸುವರು.60 ವ

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಇಲ್ಲಿನ ರಂಗಾಯಣದಲ್ಲಿ ಅ.11ರಿಂದ 19ರವರೆಗೆ ‘ರಂಗಭೀಷ್ಮ ಬಿ.ವಿ. ಕಾರಂತ ಕಾಲೇಜು ನವರಾತ್ರಿ ರಂಗೋತ್ಸವ’ ಆಯೋಜಿಸಲಾಗಿದೆ.11ರಂದು ಸಂಜೆ 6ಕ್ಕೆ ವನರಂಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಉದ್ಘಾಟಿಸುವರು. ಇಲಾಖೆಯ ಕಾರ್ಯದರ್ಶಿ ಎನ್.ಮಂಜುಶ್ರೀ ‘ರಂಗಾಯಣದ ನಾಟಕಗಳ ಛಾಯಾಚಿತ್ರಗಳ ಪ್ರದರ್ಶನ’ ಅನಾವರಣಗೊಳಿಸುವರು.60 ವರ್ಷಗಳ ರಂಗಸೇವೆಗಾಗಿ ‘ಸಮತೆಂತೋ’ ರಂಗತಂಡಕ್ಕೆ ‘ನವರಾತ್ರಿ ರಂಗಗೌರವ’ ಸಮರ್ಪಿಸಲಾಗುವುದು. ಶಾಸಕ ಕೆ.ಹರೀಶ್ಗೌಡ ಅಧ್ಯಕ್ಷತೆ ವಹಿಸುವರು. ರಂಗನಟಿ ರಾಮೇಶ್ವರಿ ವರ್ಮ, ರಂಗತಜ್ಞ ಎಚ್.ಎಸ್. ಉಮೇಶ್ ಹಾಗೂ ರಂಗ ಸಂಘಟಕರಾದ ರತ್ನಾ ವಿಶ್ವನಾಥ ಮಿರ್ಲೆ ಅವರನ್ನು ಗೌರವಿಸಲಾಗುವುದು.ನಿತ್ಯ ಸಂಜೆ 5ರಿಂದ 6ರವರೆಗೆ ರಾಷ್ಟ್ರೀಯ ಜಾನಪದ ಕಲಾಪ್ರಾಕಾರಗಳ ಪ್ರದರ್ಶನವಿರಲಿದೆ. ಕಾಲೇಜುಗಳ ರಂಗಪ್ರತಿಭೆಗಳಿಗೆ ವೇದಿಕೆ ಒದಗಿಸಲಾಗುತ್ತಿದೆ ಎಂದು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ತಿಳಿಸಿದರು.ರಂಗೋತ್ಸವದಲ್ಲಿ ಏನೇನು? (ನಿತ್ಯ ಸಂಜೆ 6.30ಕ್ಕೆ, ರಂಗಾಯಣದ ಭೂಮಿಗೀತ)ದಿನಾಂಕ; ನಾಟಕ; ರಚನೆ; ನಿರ್ದೇಶನ; ತಂಡಅ.11; ಅಲಿಬಾಬಾ ಮತ್ತು ನಲವತ್ತು ಜನ ಕಳ್ಳರು; ಚಂದ್ರಶೇಖರ ಕಂಬಾರ; ರಂಗನಾಥ ವಿ.; ಮೈಸೂರಿನ ಹಾರ್ಡ್ವಿಕ್ ಪಿಯು ಕಾಲೇಜುಅ.12; ಮೂಕನ ಮಕ್ಕಳು; ವೈದೇಹಿ; ಬಿ.ವಿ.ಕಾರಂತ (ಮರುನಿರ್ವಹಣೆ–ಗಿರೀಶ್ ಎಚ್.ಎಂ;ಹುಣಸೂರಿನ ಟ್ಯಾಲೆಂಟ್ ಎಜುಕೇಷನ್ ಟ್ರಸ್ಟ್ಅ.13; ಮಾಲ್ಗುಡಿ ಕಥಾ ಕಾವ್ಯ; ಸಿದ್ದೇಶ್ ಎಂ.ಆರ್.; ಪ್ರವೀಣ್ ಬೆಳ್ಳಿ; ಮೈಸೂರಿನ ಎಂಎಂ ಕೆಎಸ್ಡಿಎಂ ಮಹಿಳಾ ಕಾಲೇಜುಅ.14; ಶೇಕ್ಸ್ಪಿಯರ್ ಮನೆಗೆ ಬಂದ; ನಟರಾಜ್ ಹುಳಿಯಾರ್; ವಿನೋದ ಸಿ. ಮೈಸೂರು; ಮೈಸೂರಿನ ಮಹಾಜನ ಪದವಿ ಕಾಲೇಜುಅ.15; ಜಾತ್ರೆ; ದ.ರಾ.ಬೇಂದ್ರೆ; ಯಶಸ್ವಿನಿ ಎಂ., ಆಕರ್ಷ್ಕುಮಾರ್ ಡಿ.ಎಲ್. (ರಂಗಪಠ್ಯ, ವಿನ್ಯಾಸ ಪ್ರಸಾದ್ ಕುಂದೂರು); ಮೈಸೂರಿನ ನಿರಂತರ ಸಹಜರಂಗಅ.16; ಭೀಮಾಯಣ;ಶ್ರೀಪಾದ ಭಟ್ (ರಂಗಪಠ್ಯ); ಸುಭಾಷ್ ಎ.ಎಸ್.; ಹುಣಸೂರಿನ ಜ್ಞಾನಧಾರ ಪ್ರಥಮ ದರ್ಜೆ ಕಾಲೇಜುಅ.17; ಕೀಚಕ ವಧೆ; ಕಾರ್ತಿಕ್ ಭಟ್; ಪುನೀತ್ ಕರ್ತ; ಬೆಂಗಳೂರಿನ ಸೇಂಟ್ ಕ್ಲಾರೆಟ್ ಕಾಲೇಜುಅ.18; ಮಂಟೇಸ್ವಾಮಿ ಕಥಾಪ್ರಸಂಗ; ಎಚ್.ಎಸ್. ಶಿವಪ್ರಕಾಶ್; ಉಮಾಶ್ರೀ ಜಿ.ಕೂಡ್ಲಿಗಿ; ಮಂಡ್ಯ ಜಿಲ್ಲೆ ಮಳವಳ್ಳಿಯ ತಳಗವಾದಿ ಸರ್ಕಾರಿ ಪಿಯು ಕಾಲೇಜುಅ.19;ಶೂದ್ರ ತಪಸ್ವಿ; ಕುವೆಂಪು; ದಿನೇಶ್ ಚಮ್ಮಾಳಿಗೆ; ಮೈಸೂರಿನ ನಾಲ್ವಡಿ ಸೋಷಿಯಲ್ ಕಲ್ಚರಲ್ ಮತ್ತು ಎಜುಕೇಷನ್ ಟ್ರಸ್ಟ್