ಮಡಿಕೇರಿ ದಸರಾ ಉತ್ಸವದ ಮೆರವಣಿಗೆ ವೇಳೆ ಡಿ.ಜೆ ಬಳಸಲು ಅನುಮತಿ: ಅರ್ಜಿ ವಿಲೇವಾರಿ
ಬೆಂಗಳೂರು: ‘ಮಡಿಕೇರಿ ದಸರಾ ಉತ್ಸವದ ಸ್ತಬ್ಧಚಿತ್ರಗಳ ಮೆರವಣಿಗೆ ವೇಳೆ ಡಿ.ಜೆ (ಡಿಸ್ಕ್ ಜಾಕಿ) ಧ್ವನಿವರ್ಧಕ ಬಳಸಲು ಅನುಮತಿ ನೀಡುವಂತೆ ಕೋರಿ ದಸರಾ ದಂಶಮಂಟಪ ಸಮಿತಿ ಸಲ್ಲಿಸಿರುವ ಮನವಿಯನ್ನು ಪರಿಗಣಿಸಿ ಇದೇ 15ರೊಳಗೆ ಕಾನೂನು ಪ್ರಕಾರ ನಿರ್ಧಾರ ಕೈಗೊಳ್ಳಬೇಕು’ ಎಂದು ಹೈಕೋರ್ಟ್, ಕೊಡಗು ಜಿಲ್ಲಾಧಿಕಾರಿಗೆ ನಿರ್ದೇಶಿಸಿದೆ.ಈ ಕುರಿತಂತೆ ‘ದಸರಾ ದಶಮಂಟಪ ಸಮಿತಿ’ ಅಧ್ಯಕ

ಬೆಂಗಳೂರು: ‘ಮಡಿಕೇರಿ ದಸರಾ ಉತ್ಸವದ ಸ್ತಬ್ಧಚಿತ್ರಗಳ ಮೆರವಣಿಗೆ ವೇಳೆ ಡಿ.ಜೆ (ಡಿಸ್ಕ್ ಜಾಕಿ) ಧ್ವನಿವರ್ಧಕ ಬಳಸಲು ಅನುಮತಿ ನೀಡುವಂತೆ ಕೋರಿ ದಸರಾ ದಂಶಮಂಟಪ ಸಮಿತಿ ಸಲ್ಲಿಸಿರುವ ಮನವಿಯನ್ನು ಪರಿಗಣಿಸಿ ಇದೇ 15ರೊಳಗೆ ಕಾನೂನು ಪ್ರಕಾರ ನಿರ್ಧಾರ ಕೈಗೊಳ್ಳಬೇಕು’ ಎಂದು ಹೈಕೋರ್ಟ್, ಕೊಡಗು ಜಿಲ್ಲಾಧಿಕಾರಿಗೆ ನಿರ್ದೇಶಿಸಿದೆ.ಈ ಕುರಿತಂತೆ ‘ದಸರಾ ದಶಮಂಟಪ ಸಮಿತಿ’ ಅಧ್ಯಕ್ಷ ಪಂಡೀರಾ ಟಿ.ಪೂಣಚ್ಚ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಲೇವಾರಿ ಮಾಡಿದೆ.‘ಅರ್ಜಿದಾರರ ಮನವಿ ಪರಿಗಣಿಸಬಾರದು ಕೆಲವರು ಈ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಹಾಗಾಗಿ, ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿರುವವರು ತಮ್ಮ ಅಹವಾಲನ್ನು ಇದೇ 12ರೊಳಗೆ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು. ಈ ಎಲ್ಲಾ ಆಕ್ಷೇಪಣೆಗಳ ಜೊತೆ ಅರ್ಜಿದಾರರ ಮನವಿಯನ್ನು ಪರಿಗಣಿಸಿ ಇದೇ 15ರೊಳಗೆ ಕಾನೂನು ಪ್ರಕಾರ ನಿರ್ಧರಿಸಬೇಕು’ ಎಂದು ನ್ಯಾಯಪೀಠ ಜಿಲ್ಲಾಧಿಕಾರಿಗೆ ನಿರ್ದೇಶಿಸಿದೆ.ಆಕ್ಷೇಪ ಏನು?: ‘ಮಡಿಕೇರಿ ಪಟ್ಟಣದಲ್ಲಿ ಕಳೆದ 40 ವರ್ಷಗಳಿಂದ ದಸರಾ ಮಹೋತ್ಸವದ ವೇಳೆ ಸ್ತಬ್ಧಚಿತ್ರ ಮೆರವಣಿಗೆ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಇದೇ 21 ಮತ್ತು 22ರಂದು ದಸರಾ ಮಹೋತ್ಸವ ಆಚರಿಸಲಾಗುತ್ತಿದೆ. ಮಹೋತ್ಸವ ನಿರ್ವಹಣೆಗಾಗಿ ಕರವಲೆ ಭಗವತಿ ಮಹಿಷ ಮರ್ದಿನಿ ಹಾಗೂ ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ ದೇವಸ್ಥಾನ ಸೇರಿದಂತೆ ಸ್ಥಳೀಯ 10 ದೇವಸ್ಥಾನಗಳ ಸಮಿತಿಯನ್ನು ‘ದಸರಾ ದಶಮಂಟಪ ಸಮಿತಿ’ ಒಕ್ಕೂಟದ ಅಡಿಯಲ್ಲಿ ರಚಿಸಿಕೊಳ್ಳಲಾಗಿದೆ. ಪ್ರತಿಯೊಂದು ದೇವಸ್ಥಾನದ ಪರಿಕಲ್ಪನೆಯಲ್ಲಿ ಸ್ತಬ್ಧಚಿತ್ರವನ್ನು ಮೆರವಣಿಗೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಉತ್ಸವದಲ್ಲಿ ಡಿ.ಜೆ ಧನ್ವಿವರ್ಧಕ ಬಳಕೆಗೆ ಅನುಮತಿ ಕೋರಿ ಮನವಿ ಸಲ್ಲಿಸಿದ್ದೆವು. ಆದರೆ, 15 ದಿನ ಕಳೆದರೂ ಸರ್ಕಾರದಿಂದ ಈವರೆಗೆ ಅನುಮತಿ ದೊರೆತಿಲ್ಲ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.