ಜ್ಞಾನೇಶ್ ಗೇಟ್ ಸುಳಿಯಲ್ಲಿರುವ ಮೋದಿ, US ವೀಸಾ ನೀತಿ ಬಗ್ಗೆ ಮಾತನಾಡಲ್ಲ: ರಾಹುಲ್
ನವದೆಹಲಿ: ಅಮೆರಿಕದ ವೀಸಾ ನೀತಿಯಿಂದಾಗಿ ದೇಶದ ಐಟಿ ಉದ್ಯೋಗಿಗಳಿಗೆ ತೊಂದರೆಯಾಗುತ್ತಿದೆ. ಅಮೆರಿಕಕ್ಕೆ ಸೂಕ್ತ ಉತ್ತರ ನೀಡಲು ಹಲವು ಮಾರ್ಗಗಳಿವೆಯಾದರೂ, ‘ಜ್ಞಾನೇಶ್ ಗೇಟ್’ ಸುಳಿಯಲ್ಲಿ ಸಿಲುಕಿರುವ ಪ್ರಧಾನಿ ನರೇಂದ್ರ ಮೋದಿ, ಆ ವಿಚಾರವಾಗಿ (ವೀಸಾ ನೀತಿಗೆ) ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ.ಕಾಂಗ್ರೆಸ್ ಪ್ರಧಾನ ಕಾರ್ಯದರ್

ನವದೆಹಲಿ: ಅಮೆರಿಕದ ವೀಸಾ ನೀತಿಯಿಂದಾಗಿ ದೇಶದ ಐಟಿ ಉದ್ಯೋಗಿಗಳಿಗೆ ತೊಂದರೆಯಾಗುತ್ತಿದೆ. ಅಮೆರಿಕಕ್ಕೆ ಸೂಕ್ತ ಉತ್ತರ ನೀಡಲು ಹಲವು ಮಾರ್ಗಗಳಿವೆಯಾದರೂ, ‘ಜ್ಞಾನೇಶ್ ಗೇಟ್’ ಸುಳಿಯಲ್ಲಿ ಸಿಲುಕಿರುವ ಪ್ರಧಾನಿ ನರೇಂದ್ರ ಮೋದಿ, ಆ ವಿಚಾರವಾಗಿ (ವೀಸಾ ನೀತಿಗೆ) ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ.ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ‘ಬೆದರಿಕೆ ಒಡ್ಡುತ್ತಿರುವವರನ್ನು ಸಮಾಧಾನ ಮಾಡುತ್ತಾ ಹೋಗುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಎನ್ನುವುದು ಅಮೆರಿಕ ಸರ್ಕಾರವು ಭಾರತೀಯ ಐಟಿ ಉದ್ಯೋಗಿಗಳನ್ನು ಗುರಿಯಾಗಿಸಿ ನಿನ್ನೆ ಕೈಗೊಂಡಿರುವ ಕ್ರಮದಿಂದ ಮತ್ತೊಮ್ಮೆ ಸಾಬೀತಾಗಿದೆ’ ಎಂದಿದ್ದಾರೆ.ಅಮೆರಿಕದ ಕಂಪನಿಗಳಿಗೆ ನೇರವಾಗಿ ಲಾಭವಾಗುವಂತೆ ಯುಪಿಐ ವಹಿವಾಟಿನ ಮೇಲೆ ಎಂಡಿಆರ್ ಶುಲ್ಕ ವಿಧಿಸಿ, ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮೆಚ್ಚಿಸುವ ಪ್ರಯತ್ನವನ್ನು ಮೋದಿ ಸರ್ಕಾರ ಇತ್ತೀಚೆಗೆ ಮಾಡಿದೆ. ಅದರ ಬೆನ್ನಲ್ಲೇ, ಅಮೆರಿಕದಿಂದ ಈ ಕ್ರಮ ಬಂದಿದೆ ಎಂದು ರಮೇಶ್ ಟೀಕಿಸಿದ್ದಾರೆ.‘ಸಂಸತ್ತು ಈಗಾಗಲೇ ಅನುಮೋದಿಸಿರುವ ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆ–2023 ರೀತಿಯ ಹಲವು ಕಾನೂನುಗಳ ಅಡಿಯಲ್ಲಿ ಸೂಕ್ತ ಉತ್ತರ ನೀಡುವ ಹಲವು ಅವಕಾಶಗಳು ಭಾರತದ ಬಳಿ ಇವೆ. ಆದರೆ, ಜ್ಞಾನೇಶ್ ಗೇಟ್ ವಿಚಾರದಲ್ಲಿ ಸಿಲುಕಿರುವ, ಸಂಪೂರ್ಣ ರಾಜಿ ಮಾಡಿಕೊಂಡಿರುವ ಪ್ರಧಾನಿ ಮೋದಿ ಹಾಗೆಲ್ಲ ಮಾಡಲು ಹೋಗುವುದಿಲ್ಲ’ ಎಂದು ಹೇಳಿದ್ದಾರೆ.ಗ್ರೀನ್ ಕಾರ್ಡ್: ಇನ್ಫೊಸಿಸ್, ವಿಪ್ರೊ ಸೇರಿ 8 ಕಂಪನಿ ಅಮಾನತುಗೊಳಿಸಿದ ಅಮೆರಿಕ‘ದೇಶದಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐರ್) ವೇಳೆ ಭಾರಿ ಅಕ್ರಮಗಳು ನಡೆದಿವೆ. ಚುನಾವಣಾ ಆಯೋಗವು ಕೇಂದ್ರ ಬಿಜೆಪಿ ಸರ್ಕಾರದ ಪರ ಕೆಲಸ ಮಾಡುತ್ತಿದೆ’ ಎಂದು ಆರೋಪಿಸುತ್ತಿರುವ ವಿರೋಧ ಪಕ್ಷಗಳು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಲೆದಂಡಕ್ಕೆ ಒತ್ತಾಯಿಸುತ್ತಿವೆ. ಇದನ್ನೇ ‘ಜ್ಞಾನೇಶ್ ಗೇಟ್’ ಎಂದಿದೆ ಕಾಂಗ್ರೆಸ್.ಐಟಿ ಕಂಪನಿಗಳ ವಿರುದ್ಧ ಅಮೆರಿಕ ಕ್ರಮತಮ್ಮ ದೇಶದ ಜನರಿಗೆ ಉದ್ಯೋಗಾವಕಾಶಗಳು ಸಿಗುತ್ತಿಲ್ಲ ಎಂದು ಹೇಳಿರುವ ಅಮೆರಿಕವು ಮೈಕ್ರೋಸಾಫ್ಟ್, ಟಾಟಾ, ಇನ್ಫೊಸಿಸ್, ವಿಪ್ರೋ ಸೇರಿದಂತೆ 8 ಐಟಿ ಕಂಪನಿಗಳನ್ನು ವಿದೇಶಿ ನೌಕರರಿಗಾಗಿ ಗ್ರೀನ್ ಕಾರ್ಡ್ಗೆ ಅರ್ಜಿ ಸಲ್ಲಿಸುವ ಕಾರ್ಯಕ್ರಮದಿಂದ ಗುರುವಾರ ಹೊರಗಿಟ್ಟಿದೆ.ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ಕಾರ್ಮಿಕ ಕಾರ್ಯದರ್ಶಿ ಕೀತ್ ಸಾಂಡರ್ಲಿಂಗ್ ಮತ್ತು ಅಟಾರ್ನಿ ಜನರಲ್ ಟಾಡ್ ಬ್ಲಾಂಚೆ ಅವರು ಅಮೆರಿಕದ ವಂಚನೆ ತಡೆ ಕಾರ್ಯಪಡೆಯ ಅಡಿಯಲ್ಲಿ ಈ ಕ್ರಮವನ್ನು ಘೋಷಿಸಿದ್ದಾರೆ.ವಿಶ್ವದ ಅತಿದೊಡ್ಡ ಐಟಿ ಹೊರಗುತ್ತಿಗೆ ಸಂಸ್ಥೆಗಳಾದ ಕಾಗ್ನಿಜಂಟ್, ಇನ್ಫೊಸಿಸ್, ಟಾಟಾ, ವಿಪ್ರೋ, ಎಚ್ಸಿಎಲ್ ಮತ್ತು ಕ್ಯಾಪ್ಜೆಮಿನಿಗಳನ್ನು ‘ಶಾಶ್ವತ ಕಾರ್ಮಿಕ ಪ್ರಮಾಣೀಕರಣ ಕಾರ್ಯಕ್ರಮ’ದಿಂದ ಅಮಾನತುಗೊಳಿಸುತ್ತಿದ್ದೇನೆ ಎಂದು ವ್ಯಾನ್ಸ್ ಘೋಷಿಸಿದ್ದಾರೆ.‘ಮೈಕ್ರೋಸಾಫ್ಟ್ ಮತ್ತು ಅಡೋಬ್ ವಿರುದ್ಧ ತನಿಖೆ ಪ್ರಗತಿಯಲ್ಲಿರುವ ಕಾರಣ, ಆ ಕಂಪನಿಗಳನ್ನೂ ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ತೆಗೆದುಹಾಕುತ್ತಿದ್ದೇವೆ’ ಎಂದಿರುವ ಅವರು, ‘ದುರದೃಷ್ಟವಶಾತ್ ಅಮೆರಿಕದಲ್ಲಿ ಈ ವ್ಯವಸ್ಥೆಯನ್ನು ಮೈಕ್ರೋಸಾಫ್ಟ್ಗಿಂತ ಹೆಚ್ಚು ದುರುಪಯೋಗಪಡಿಸಿಕೊಂಡ ಮತ್ತೊಂದು ಕಂಪನಿ ಇಲ್ಲ’ ಎಂದು ಹೇಳಿದ್ದಾರೆ‘ಮೈಕ್ರೋಸಾಫ್ಟ್ 2025ರಲ್ಲಿ 6,000 ಅಮೆರಿಕನ್ ನೌಕರರನ್ನು ಕೆಲಸದಿಂದ ವಜಾ ಮಾಡಿತ್ತು. ಆದರೆ ಅದೇ ಕಂಪನಿಯು ವಿದೇಶಿ ನೌಕರರಿಗಾಗಿ 6,000ಕ್ಕೂ ಹೆಚ್ಚು H-1B ವೀಸಾಗಳಿಗೆ ಅನುಮೋದನೆ ಪಡೆದಿದೆ. ಜೊತೆಗೆ, ಶಾಶ್ವತ ಕಾರ್ಮಿಕ ಪ್ರಮಾಣೀಕರಣಕ್ಕಾಗಿ 3,682 ಅರ್ಜಿಗಳನ್ನು ಸಲ್ಲಿಸಿದೆ. ಅದರಲ್ಲಿ ಸುಮಾರು ಒಂದು ಸಾವಿರದಷ್ಟು ಅರ್ಜಿಗಳು ಕೆಲಸದಿಂದ ವಜಾಗೊಂಡ ಅಮೆರಿಕನ್ನರ ಹುದ್ದೆಗಳಿಗೇ ಆಗಿವೆ’ ಎಂದು ಟೀಕಿಸಿದ್ದಾರೆ.ಪ್ರತಿವರ್ಷ ಅನುಮೋದನೆಯಾಗುವ H-1B ವೀಸಾ ಅರ್ಜಿಗಳಲ್ಲಿ ಶೇ 70ರಷ್ಟು ಭಾರತೀಯರದ್ದೇ ಆಗಿರುತ್ತವೆ.