ಸ್ಯಾಮ್ಸನ್ ಅರ್ಧಶತಕ; ಅಯ್ಯರ್, ತಿಲಕ್ ಸ್ಪೋಟಕ ಆಟ: ವಿಂಡೀಸ್ಗೆ 250 ರನ್ ಗುರಿ
ರಾಂಚಿ: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ–20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 20 ಓವರ್ಗಳ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿದೆ. ರಾಂಚಿಯ ಜೆಎಸ್ಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವಿಂಡೀಸ್ ತಂಡವು, ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತ್ತು. ಭಾರತ ಪರ ಅಭಿಷೇಕ್ ಶರ್ಮಾ

ರಾಂಚಿ: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ–20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 20 ಓವರ್ಗಳ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿದೆ. ರಾಂಚಿಯ ಜೆಎಸ್ಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವಿಂಡೀಸ್ ತಂಡವು, ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತ್ತು. ಭಾರತ ಪರ ಅಭಿಷೇಕ್ ಶರ್ಮಾ(20 ರನ್; 12 ಎಸೆತ) ಮತ್ತು ಸಂಜು ಸ್ಯಾಮ್ಸನ್ (82 ರನ್; 41 ಎಸೆತ) ಸ್ಪೋಟಕ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ 4 ಓವರ್ಗಳಲ್ಲಿ 42 ರನ್ ಗಳಿಸಿದರು. ಇಶಾನ್ ಕಿಶನ್ (43 ರನ್: 22 ಎಸೆತ) ಕೂಡ ಉತ್ತಮ ಆಟವಾಡಿದರು. ಶಿವಂ ದುಬೆ 10 ಎಸೆತಗಳಲ್ಲಿ 7 ರನ್ ಗಳಿಸುವ ಮೂಲಕ ವೈಫಲ್ಯ ಅನುಭವಿಸಿದರು. ನಾಯಕ ಶ್ರೇಯಸ್ ಅಯ್ಯರ್ (40 ರನ್: 18 ಎಸೆತ) ಮತ್ತು ತಿಲಕ್ ವರ್ಮಾ(ಅಜೇಯ 44 ರನ್: 18 ಎಸೆತ) 32 ಎಸೆತಗಳಲ್ಲಿ 83 ರನ್ ಜೊತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 240 ರನ್ ಗಡಿದಾಟಿಸಿದರು.ವೆಸ್ಟ್ ಇಂಡೀಸ್ ಪರ ರಾಸ್ಟನ್ ಚೇಸ್ 3 ವಿಕೆಟ್ ಹಾಗೂ ಶಮರ್ ಸ್ಪ್ರಿಂಗರ್ 2 ವಿಕೆಟ್ ಕಬಳಿಸಿದರು. ಭಾರತವು ಸರಣಿಯಲ್ಲಿ 1–0 ಮುನ್ನಡೆಯಲ್ಲಿದೆ. ವಿಂಡೀಸ್ ತಂಡವು ಈ ಪಂದ್ಯ ಗೆಲ್ಲಲು 250 ರನ್ ಗಳಿಸಬೇಕಿದೆ.