ಉಪಚುನಾವಣೆ: ತಮಿಳುನಾಡಿನಲ್ಲಿ ಗೆಲುವಿನತ್ತ ಟಿವಿಕೆ, ಪುದುಚೇರಿಯಲ್ಲಿ NDAಗೆ ಜಯ
ಚೆನ್ನೈ/ಪುದುಚೇರಿ: ತಮಿಳುನಾಡಿನ ಮಧುರಾಂತಕಂ ಹಾಗೂ ಧರಾಪುರಂ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭ್ಯರ್ಥಿಗಳು ಗೆಲುವಿನತ್ತ ದಾಪುಗಾಲು ಇಟ್ಟಿದ್ದಾರೆ. ಮತ್ತೊಂದೆಡೆ, ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಥಟ್ಟಂಚಾವಡಿ ಉಪಚುನಾವಣೆಯಲ್ಲಿ ಆಡಳಿತಾರೂಢ ಎನ್ಡಿಎ ಮೈತ್ರಿಕೂಟದ

ಚೆನ್ನೈ/ಪುದುಚೇರಿ: ತಮಿಳುನಾಡಿನ ಮಧುರಾಂತಕಂ ಹಾಗೂ ಧರಾಪುರಂ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭ್ಯರ್ಥಿಗಳು ಗೆಲುವಿನತ್ತ ದಾಪುಗಾಲು ಇಟ್ಟಿದ್ದಾರೆ. ಮತ್ತೊಂದೆಡೆ, ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಥಟ್ಟಂಚಾವಡಿ ಉಪಚುನಾವಣೆಯಲ್ಲಿ ಆಡಳಿತಾರೂಢ ಎನ್ಡಿಎ ಮೈತ್ರಿಕೂಟದ ಎಐಎನ್ಆರ್ಸಿ ಅಭ್ಯರ್ಥಿ ಅಶೋಕ್ ಆನಂದ್ 8,000ಕ್ಕೂ ಅಧಿಕ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ತಮಿಳುನಾಡು ಉಪಚುನಾವಣೆ: ಮಧುರಾಂತಕಂ ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ಮರಗತಮ್ ಕುಮಾರವೇಲ್ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡಿದ್ದು, 12ನೇ ಸುತ್ತಿನ ಮುಕ್ತಾಯಕ್ಕೆ ಡಿಎಂಕೆ ಅಭ್ಯರ್ಥಿ ಐ. ಪರಂತಾಮನ್ ಅವರಿಗಿಂತ 13,000ಕ್ಕೂ ಅಧಿಕ ಮತಗಳ ಮುನ್ನಡೆ ಪಡೆದಿದ್ದಾರೆ. ಎಐಎಡಿಎಂಕೆ ಅಭ್ಯರ್ಥಿ ಎಸ್. ಕಣಿತಾ ಸಂಪತ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.ಧರಾಪುರಂ ಕ್ಷೇತ್ರದಲ್ಲಿ ಆರಂಭಿಕ ಸುತ್ತುಗಳಲ್ಲಿ ಎಐಎಡಿಎಂಕೆ ಹಾಗೂ ಟಿವಿಕೆ ನಡುವೆ ತೀವ್ರ ಹಣಾಹಣಿ ಕಂಡುಬಂದರೂ, ನಂತರದ ಸುತ್ತುಗಳಲ್ಲಿ ಟಿವಿಕೆ ಅಭ್ಯರ್ಥಿ ಪಿ. ಸತ್ಯಭಾಮ ಸ್ಪಷ್ಟ ಮುನ್ನಡೆ ಸಾಧಿಸಿದರು. 20ನೇ ಸುತ್ತಿನ ಅಂತ್ಯಕ್ಕೆ ಅವರು 10,003 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಡಿಎಂಕೆ ಅಭ್ಯರ್ಥಿ ಎಸ್. ಸುಗನ್ಯಾ ಎರಡನೇ ಸ್ಥಾನದಲ್ಲಿದ್ದರೆ, ಎಐಎಡಿಎಂಕೆ ಮೂರನೇ ಸ್ಥಾನದಲ್ಲಿದೆ.ಮಿತ್ರಪಕ್ಷಗಳ ಬಲದೊಂದಿಗೆ ಸರ್ಕಾರ ನಡೆಸುತ್ತಿರುವ ವಿಜಯ್ಗೆ ಈ ಎರಡೂ ಕ್ಷೇತ್ರಗಳ ಗೆಲುವು ರಾಜಕೀಯವಾಗಿ ಭಾರಿ ಆನೆಬಲ ತಂದುಕೊಡಲಿದೆ. ಪಕ್ಷಾಂತರ ಮತ್ತು ಆಪರೇಷನ್ ಕಮಲ ಮಾದರಿಯ ಆರೋಪಗಳನ್ನು ವಿಪಕ್ಷಗಳು ಮಾಡಿದರೂ ಮತದಾರರು ಆಡಳಿತಾರೂಢ ಟಿವಿಕೆ ಪರ ಒಲವು ತೋರಿಸಿರುವುದು ಸಾಬೀತಾಗಿದೆ.234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 118 ಸ್ಥಾನಗಳ ಅಗತ್ಯವಿದೆ. ಶಾಸಕರ ರಾಜೀನಾಮೆಗಳ ಬಳಿಕ ಸದ್ಯ ಸದನದ ಬಲ 227ಕ್ಕೆ ಇಳಿದಿದೆ.ಪ್ರಸ್ತುತ ಟಿವಿಕೆ 107 (ಸ್ಪೀಕರ್ ಸೇರಿ), ಡಿಎಂಕೆ 59, ಎಐಎಡಿಎಂಕೆ 41, ಕಾಂಗ್ರೆಸ್ 5, ಪಿಎಂಕೆ 4, ಸಿಪಿಐ 2, ಸಿಪಿಐ(ಎಂ) 2, ವಿಸಿಕೆ 2, ಐಯುಎಂಎಲ್ 2 ಹಾಗೂ ಬಿಜೆಪಿ, ಡಿಎಂಡಿಕೆ, ಎಎಂಎಂಕೆಗೆ ತಲಾ 1 ಸ್ಥಾನಗಳಿವೆ.ಕಾಂಗ್ರೆಸ್ ಸೇರಿದಂತೆ ಮಿತ್ರಪಕ್ಷಗಳ ಬೆಂಬಲ ಹಾಗೂ ಎಡಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಟಿವಿಕೆ ಸರ್ಕಾರ ನಡೆಸುತ್ತಿದೆ. ಈ ಎರಡು ಸ್ಥಾನಗಳ ಗೆಲುವಿನಿಂದ ಪಕ್ಷದ ಬಲ 109ಕ್ಕೆ ಏರಿಕೆಯಾಗಲಿದೆ.LIVE ಉಪಚುನಾವಣೆ ಫಲಿತಾಂಶ: ತ.ನಾಡಿನಲ್ಲಿ ಗೆಲುವಿನತ್ತ ಟಿವಿಕೆ, ವಿಜಯ್ಗೆ ಆನೆ ಬಲಪಶ್ಚಿಮ ಬಂಗಾಳ ಉಪಚುನಾವಣೆ: ನಂದಿಗ್ರಾಮದಲ್ಲಿ ಬಿಜೆಪಿಗೆ ಭಾರಿ ಮುನ್ನಡೆ