ಸಾಂಪ್ರದಾಯಿಕ ಬೋಗಿ ಬದಲಿಗೆ ಎಲ್ಎಚ್ಬಿ ಅಳವಡಿಕೆ: ನೈರುತ್ಯ ರೈಲ್ವೆ
ಮೈಸೂರು: ನೈರುತ್ಯ ರೈಲ್ವೆಯು ಕೆಲವು ರೈಲುಗಳ ಹಳೆಯ ಸಾಂಪ್ರದಾಯಿಕ ರೇಕ್ಗಳನ್ನು (ಬೋಗಿ) ತೆಗೆದು, ಅವುಗಳ ಬದಲಿಗೆ ಹೆಚ್ಚು ಸುರಕ್ಷಿತ ಹಾಗೂ ಆಧುನಿಕ ಲಿಂಕೆ ಹಾಫ್ಮನ್ ಬುಷ್ (ಎಲ್ಎಚ್ಬಿ) ಬೋಗಿಗಳನ್ನು ಅಳವಡಿಸಲು ನಿರ್ಧರಿಸಿದೆ ಎಂದು ಮೈಸೂರು ವಿಭಾಗ ತಿಳಿಸಿದೆ.ಮೈಸೂರು–ತಾಳಗುಪ್ಪ ಎಕ್ಸ್ಪ್ರೆಸ್ (ರೈಲು ಸಂ. 16227/16228): ಮೈಸೂರಿನಿಂದ ಅ.20ರಿಂದ ಹಾಗೂ ತಾಳಗುಪ್
ಮೈಸೂರು: ನೈರುತ್ಯ ರೈಲ್ವೆಯು ಕೆಲವು ರೈಲುಗಳ ಹಳೆಯ ಸಾಂಪ್ರದಾಯಿಕ ರೇಕ್ಗಳನ್ನು (ಬೋಗಿ) ತೆಗೆದು, ಅವುಗಳ ಬದಲಿಗೆ ಹೆಚ್ಚು ಸುರಕ್ಷಿತ ಹಾಗೂ ಆಧುನಿಕ ಲಿಂಕೆ ಹಾಫ್ಮನ್ ಬುಷ್ (ಎಲ್ಎಚ್ಬಿ) ಬೋಗಿಗಳನ್ನು ಅಳವಡಿಸಲು ನಿರ್ಧರಿಸಿದೆ ಎಂದು ಮೈಸೂರು ವಿಭಾಗ ತಿಳಿಸಿದೆ.ಮೈಸೂರು–ತಾಳಗುಪ್ಪ ಎಕ್ಸ್ಪ್ರೆಸ್ (ರೈಲು ಸಂ. 16227/16228): ಮೈಸೂರಿನಿಂದ ಅ.20ರಿಂದ ಹಾಗೂ ತಾಳಗುಪ್ಪದಿಂದ ಅ.21ರಿಂದ, ತಾಳಗುಪ್ಪ–ಶಿವಮೊಗ್ಗ ಟೌನ್–ತಾಳಗುಪ್ಪ (ರೈಲು ಸಂ. 56217/56218): ಎರಡೂ ಕಡೆಗಳಿಂದ ಅ.21ರಿಂದ, ನಂಜನಗೂಡು ಟೌನ್–ಮೈಸೂರು–ನಂಜನಗೂಡು ಟೌನ್ (ರೈಲು ಸಂ. 56205/56206): ಎರಡೂ ಕಡೆಗಳಿಂದ ಅ.22ರಿಂದ, ಚಾಮರಾಜನಗರ–ಮೈಸೂರು (ರೈಲು ಸಂ. 56203/56204): ಮೈಸೂರಿನಿಂದ ಅ.22ರಿಂದ ಹಾಗೂ ಚಾಮರಾಜನಗರದಿಂದ ಅ.24ರಿಂದ, ಚಾಮರಾಜನಗರ–ತಿರುಪತಿ (ರೈಲು ಸಂ. 16219/16220): ಚಾಮರಾಜನಗರದಿಂದ ಅ.22ರಿಂದ ಮತ್ತು ತಿರುಪತಿಯಿಂದ ಅ.23ರಿಂದ, ಎಂಜಿಆರ್ ಚೆನ್ನೈ ಸೆಂಟ್ರಲ್–ತಿರುಪತಿ–ಎಂಜಿಆರ್ ಚೆನ್ನೈ ಸೆಂಟ್ರಲ್ (ರೈಲು ಸಂ. 16203/16204): ಎರಡೂ ಕಡೆಗಳಿಂದ ಅ.23ರಿಂದ ಎಲ್ಎಚ್ಬಿ ಬೋಗಿಗಳೊಂದಿಗೆ ಸಂಚರಿಸಲಿದೆ. ಈ ರೈಲುಗಳು ಒಟ್ಟು 21 ಬೋಗಿಗಳನ್ನು ಹೊಂದಿದ್ದು, ಅವುಗಳಲ್ಲಿ 1 ಎಸಿ ಫಸ್ಟ್ ಕ್ಲಾಸ್, 1 ಎಸಿ 2-ಟೈರ್, 2 ಎಸಿ 3-ಟೈರ್, 10 ಸ್ಲೀಪರ್, 5 ಜನರಲ್ ಸೆಕೆಂಡ್ ಕ್ಲಾಸ್ ಹಾಗೂ 2 ಸೆಕೆಂಡ್ ಕ್ಲಾಸ್-ಕಮ್-ಬ್ರೇಕ್ ವ್ಯಾನ್ ಸೇರಿದ್ದವು.ಈಗ ಹೊಸ ವ್ಯವಸ್ಥೆಯಡಿ ಈ ರೈಲುಗಳು ಒಟ್ಟು 19 ಎಲ್ಎಚ್’ಬಿ ಬೋಗಿಗಳನ್ನು ಹೊಂದಿರಲಿವೆ. ಇದರಲ್ಲಿ 1 ಎಸಿ ಫಸ್ಟ್ ಕ್ಲಾಸ್, 1 ಎಸಿ 2-ಟೈರ್, 3 ಎಸಿ 3-ಟೈರ್, 7 ಸ್ಲೀಪರ್, 5 ಜನರಲ್ ಸೆಕೆಂಡ್ ಕ್ಲಾಸ್, 1 ಅಂಗವಿಕಲ ಸ್ನೇಹಿ ಬೋಗಿ ಹೊಂದಿರುವ ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್ ವ್ಯಾನ್ ಹಾಗೂ 1 ಲಗೇಜ್ ಮತ್ತು ಬ್ರೇಕ್ ವ್ಯಾನ್-ಕಮ್-ಜನರೇಟರ್ ಕಾರ್ ಹೊಂದಿರಲಿವೆ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗದ ಪ್ರಕಟಣೆ ತಿಳಿಸಿದೆ.