ಗುಂಡ್ಲುಪೇಟೆಯಲ್ಲಿ ಬಿರುಗಾಳಿ ಮಳೆಗೆ ಬೆಳೆ ಹಾನಿ: ರೈತರ ಜಮೀನುಗಳಲ್ಲಿ ಸಮೀಕ್ಷೆ
ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ದಿನಗಳ ಹಿಂದೆ ಬಿರುಗಾಳಿ ಮಳೆಯಿಂದ ಹಾನಿಗೊಳಗಾಗಿದ್ದ ರೈತರ ಜಮೀನುಗಳಲ್ಲಿ ತೋಟಗಾರಿಕೆ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ನಡೆಸಿದರು.ಚಿಕ್ಕತುಪ್ಪೂರು, ಕಿಲಗೆರೆ, ಇಂಗಲವಾಡಿ, ಚೆನ್ನಂಹಚಿಯ್ಯನಹುಂಡಿ, ಬಲಚವಾಡಿ, ಲಕ್ಕೂರು, ಶ್ಯಾನಡ್ರಹಳ್ಳಿ, ಮೂಡಗೂರು, ಕೂತುನೂರು, ದೊಡ್ಡತುಪ್ಪುರು, ಮಣಗಳ್ಳಿ, ಹೊಂಗಳ್ಳಿ, ಆಲತ್ತೂರ

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ದಿನಗಳ ಹಿಂದೆ ಬಿರುಗಾಳಿ ಮಳೆಯಿಂದ ಹಾನಿಗೊಳಗಾಗಿದ್ದ ರೈತರ ಜಮೀನುಗಳಲ್ಲಿ ತೋಟಗಾರಿಕೆ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ನಡೆಸಿದರು.ಚಿಕ್ಕತುಪ್ಪೂರು, ಕಿಲಗೆರೆ, ಇಂಗಲವಾಡಿ, ಚೆನ್ನಂಹಚಿಯ್ಯನಹುಂಡಿ, ಬಲಚವಾಡಿ, ಲಕ್ಕೂರು, ಶ್ಯಾನಡ್ರಹಳ್ಳಿ, ಮೂಡಗೂರು, ಕೂತುನೂರು, ದೊಡ್ಡತುಪ್ಪುರು, ಮಣಗಳ್ಳಿ, ಹೊಂಗಳ್ಳಿ, ಆಲತ್ತೂರು, ಬೆಟ್ಟಹಳ್ಳಿ, ಬೆಂಡಗಳ್ಳಿ, ಕೆಲಸೂರುಪುರ ಮುಂತಾದ ಗ್ರಾಮಗಳಲ್ಲಿ ಬಿರುಗಾಳಿ ಮಳೆಗೆ ಬಾಳೆ ತೋಟ ಹಾನಿಯಾಗಿತ್ತು. ಸಂಕಷ್ಟಕ್ಕೆ ಒಳಗಾಗಿರುವ ರೈತರ ಜಮೀನುಗಳಿಗೆ ಅಧಿಕಾರಿಗಳು ಮಾಹಿತಿ ಪಡೆದರು. ರೈತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಭಾಸ್ಕರ್ , ಸಹಾಯಕ ತೋಟಗಾರಿಕಾ ಅಧಿಕಾರಿ ಹಾಗೂ ಕುಮಾರ್ , ಕಂದಾಯ ಇಲಾಖೆ ಅಧಿಕಾರಿಗಳ ಭಾಗವಹಿಸಿದ್ದರು.261009-37-1994346915
Read the complete story at Prajavani