ನೋಯ್ಡಾ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಹೆಸರು: ಯುಪಿ ಸಂಪುಟ ಅನುಮೋದನೆ
ಲಖನೌ: ಜೆವಾರ್ನಲ್ಲಿರುವ ನೋಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 'ನರೇಂದ್ರ ಮೋದಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ನೋಯ್ಡಾ–ಜೆವಾರ್' ಎಂದು ಮರುನಾಮಕರಣ ಮಾಡಲು ಉತ್ತರ ಪ್ರದೇಶ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಪ್ರಕಟಿಸಿದ್ದಾರೆ. ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯಕ್

ಲಖನೌ: ಜೆವಾರ್ನಲ್ಲಿರುವ ನೋಯ್ಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 'ನರೇಂದ್ರ ಮೋದಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ನೋಯ್ಡಾ–ಜೆವಾರ್' ಎಂದು ಮರುನಾಮಕರಣ ಮಾಡಲು ಉತ್ತರ ಪ್ರದೇಶ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಪ್ರಕಟಿಸಿದ್ದಾರೆ. ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯಕ್ಕೆ ಬೃಹತ್ ಕೊಡುಗೆಯಾಗಿ ವಿಮಾನ ನಿಲ್ದಾಣವನ್ನು ಕಲ್ಪಿಸಿಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಚಿವ ಸಂಪುಟವು ಧನ್ಯವಾದ ಅರ್ಪಿಸಿದೆ. ಜತೆಗೆ, ಈ ನಿಲ್ದಾಣಕ್ಕೆ ಮೋದಿ ಅವರ ಹೆಸರಿಡುವ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಿದೆ’ ಎಂದರು.‘ಈ ವಿಮಾನ ನಿಲ್ದಾಣವು ಉತ್ತರ ಪ್ರದೇಶದ ಅತಿ ದೊಡ್ಡ ವಿಮಾನ ನಿಲ್ದಾಣ ಹಾಗೂ ದೇಶದ ಪ್ರಮುಖ ವಾಯುಯಾನ ಕೇಂದ್ರವಾಗಿ ಹೊರಹೊಮ್ಮಲಿದೆ. 2047ರ ವೇಳೆಗೆ ವಿಕಸಿತ ಭಾರತ ಮತ್ತು ಅಭಿವೃದ್ಧಿ ಹೊಂದಿದ ಉತ್ತರ ಪ್ರದೇಶ ನಿರ್ಮಿಸುವ ಪ್ರಧಾನಿಯವರ ದೂರದೃಷ್ಟಿಗೆ ಬದ್ಧವಾಗಿ ಕೆಲಸ ಮಾಡಲು ಸಚಿವ ಸಂಪುಟ ನಿರ್ಣಯಿಸಿದೆ’ ಎಂದು ಅವರು ಹೇಳಿದರು.नोएडा इंटरनेशनल एयरपोर्ट का नाम 'नरेन्द्र मोदी इंटरनेशनल एयरपोर्ट'... pic.twitter.com/EPejVecayd— Yogi Adityanath (@myogiadityanath) October 9, 2026 ಇದೇ ಸಂದರ್ಭದದಲ್ಲಿ ಮುಖ್ಯಮಂತ್ರಿ, ಪ್ರಧಾನಿಯಾಗಿ 25 ವರ್ಷ ಪೂರ್ಣಗೊಳಿಸಿದ ಪ್ರಧಾನಿ ಮೋದಿಯವರನ್ನು ಅಭಿನಂದಿಸಿ ಸಂಪುಟ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು ಎಂದೂ ಅವರು ತಿಳಿಸಿದ್ದಾರೆ. ‘2014ರಿಂದ ವಾರಾಣಸಿಯ ಸಂಸದರಾಗಿ ಪ್ರಧಾನಿ ಮೋದಿ ರಾಜ್ಯವನ್ನು ಪ್ರತಿನಿಧಿಸುತ್ತಿರುವುದು ನಮಗೆ ಹೆಮ್ಮೆಯ ವಿಚಾರ’ ಎಂದು ಅವರು ಹೇಳಿದ್ದಾರೆ. ಗ್ರೀನ್ಫೀಲ್ಡ್ ಯೋಜನೆಯಡಿ ಉತ್ತರ ಪ್ರದೇಶ ಸರ್ಕಾರ ಹಾಗೂ ಜೂರಿಚ್ ಏರ್ಪೋರ್ಟ್ ಇಂಟರ್ನ್ಯಾಷನಲ್ ಎಜಿ ನಡುವಿನ ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ನಿರ್ಮಾಣವಾಗಿರುವ ಈ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ 2021ರ ನವೆಂಬರ್ 25ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. 2026ರ ಮಾರ್ಚ್ 28ರಂದು ಮೊದಲ ಹಂತದ ಕಾಮಗಾರಿ ಉದ್ಘಾಟನೆಗೊಂಡಿದ್ದು, ಜೂನ್ 15ರಿಂದ ವಾಣಿಜ್ಯ ವಿಮಾನಗಳ ಸಂಚಾರ ಆರಂಭವಾಗಿದೆ.उत्तर प्रदेश मंत्रिपरिषद ने आज आदरणीय प्रधानमंत्री श्री @narendramodi जी की Head of the Government के रूप में 25 वर्षों की अविराम यात्रा पर महत्वपूर्ण प्रस्ताव पारित किया है।मंत्रिपरिषद प्रधानमंत्री जी का हार्दिक अभिनंदन करती है... pic.twitter.com/ChxRclJrTt— Yogi Adityanath (@myogiadityanath) October 9, 2026 ಜ್ಞಾನೇಶ್ ಗೇಟ್ ಸುಳಿಯಲ್ಲಿರುವ ಮೋದಿ, US ನೀತಿ ಬಗ್ಗೆ ಮಾತನಾಡಲ್ಲ: ಕಾಂಗ್ರೆಸ್ VIDEO | ಯುವಜನತೆಗೆ ಗಟ್ಸ್ ಇದೆ; ಮೋದಿ ವಿರುದ್ಧ ನಿಲ್ತೀವಿ ಎಂದ ಪ್ರತಿಭಟನಕಾರರು