ಪ್ರದೀಪ್ ಈಶ್ವರ್ ಹೇಳಿಕೆ: ಚಿಂತಾಮಣಿ ನಗರಸಭೆ ಮಾಜಿ ಸದಸ್ಯರ ಲೇವಡಿ
ಚಿಂತಾಮಣಿ: ‘ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಕಾರ್ಯಕರ್ತರು ಚಿಕ್ಕಬಳ್ಳಾಪುರ ಶಾಸಕರ ಹೇಳಿಕೆಗಳನ್ನು ಉಪೇಕ್ಷಿಸುವುದು ಅನಿವಾರ್ಯ’ ಎಂದು ನಗರಸಭೆಯ ಮಾಜಿ ಸದಸ್ಯರಾದ ಎಸ್.ಸುಬ್ರಮಣ್ಯಂ ಮತ್ತು ಟಿ.ಶ್ರೀನಿವಾಸ್ ಲೇವಡಿ ಮಾಡಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಐಸಿಸಿ ಅಧ್ಯಕ್ಷ ಖರ್ಗೆ ಅವರು ಸ್ವತಃ ಔಷಧಿ ತಯಾರಿಸಿ ಶಾಸಕರ ತಲೆಗೆ ಹಚ್ಚುವವರೆಗೂ ಪ್

ಚಿಂತಾಮಣಿ: ‘ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಕಾರ್ಯಕರ್ತರು ಚಿಕ್ಕಬಳ್ಳಾಪುರ ಶಾಸಕರ ಹೇಳಿಕೆಗಳನ್ನು ಉಪೇಕ್ಷಿಸುವುದು ಅನಿವಾರ್ಯ’ ಎಂದು ನಗರಸಭೆಯ ಮಾಜಿ ಸದಸ್ಯರಾದ ಎಸ್.ಸುಬ್ರಮಣ್ಯಂ ಮತ್ತು ಟಿ.ಶ್ರೀನಿವಾಸ್ ಲೇವಡಿ ಮಾಡಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಐಸಿಸಿ ಅಧ್ಯಕ್ಷ ಖರ್ಗೆ ಅವರು ಸ್ವತಃ ಔಷಧಿ ತಯಾರಿಸಿ ಶಾಸಕರ ತಲೆಗೆ ಹಚ್ಚುವವರೆಗೂ ಪ್ರದೀಪ್ ಈಶ್ವರ್ ಅವರ ನಿಯಂತ್ರಣವಿಲ್ಲದ ವಾಚಾಳಿತನ ಮುಂದುವರೆಯಲಿದೆ’ ಟೀಕಿಸಿದರು.‘ಸದಾ ಸಂವಿಧಾನದ ಪ್ರತಿಯನ್ನು ಕೈಯಲ್ಲಿಡು ಓಡಾಡುವ ಶಾಸಕರಿಗೆ ಪ್ರಜಾಪ್ರಭುತ್ವ ಮತ್ತು ರಾಜಕೀಯ ಪಕ್ಷಗಳಲ್ಲಿ ಭಾಗವಹಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ ಎಂಬ ಪ್ರಾಥಮಿಕ ಜ್ಞಾನ ಇಲ್ಲದಿರುವುದು ವಿಷಾದನೀಯ. ಆಡುವ ಮಾತಿಗೂ ಮೆದುಳಿಗೂ ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಾರೆ’ ಎಂದು ಕುಟುಕಿದರು.‘ಶಾಸಕರು ಹತೋಟಿ ಮೀರಿದ ಮಾತುಗಳಿಂದ ಇಡೀ ಜಿಲ್ಲೆಯ ಮರ್ಯಾದೆ ಕಳೆಯುತ್ತಿದ್ದಾರೆ. ಈ ಹಿಂದೆ ಸರ್.ಎಂ.ವಿ ಅವರ ಜಿಲ್ಲೆಗೆ ಸೇರಿದವರೆಂದು ಅಭಿಮಾನಿಸುತ್ತಿದ್ದದರು. ಈಗ ನಟ್ಟು ಬೋಲ್ಟ್ ಇಲ್ಲದ ಊರಿನವರು ಎಂದು ಅಪಹಾಸ್ಯ ಮಾಡುತ್ತಾರೆ’ ಎಂದರು.261009-16-1397650578