75 ವರ್ಷಗಳ ಹಿಂದೆ: ಪೂರ್ವ ಪಾಕಿಸ್ತಾನದಿಂದ ಹೆಚ್ಚು ಮಂದಿ ಹಿಂದೂಗಳ ನಿರ್ಗಮನ
ಪೂರ್ವ ಪಾಕಿಸ್ತಾನದಿಂದ ಹೆಚ್ಚು ಮಂದಿ ಹಿಂದೂಗಳ ನಿರ್ಗಮನನವದೆಹಲಿ, ಅ. 8– ಕಳೆದ ಮೂರು ತಿಂಗಳಲ್ಲಿ ಪೂರ್ವ ಬಂಗಾಳದಿಂದ ಹೆಚ್ಚು ಸಂಖ್ಯೆಯಲ್ಲಿ ಮುಸ್ಲಿಮೇತರರು ಭಾರತಕ್ಕೆ ವಲಸೆ ಬಂದಿರುವುದರ ಬಗ್ಗೆ ಉಭಯ ಸರ್ಕಾರಗಳ ಅಲ್ಪಸಂಖ್ಯಾತ ಸಚಿವರುಗಳಿಂದ ಕೂಡಲೇ ಜಂಟಿ ವೈಯಕ್ತಿಕ ವಿಚಾರಣೆ ನಡೆಸಬೇಕೆಂದು ಭಾರತ ಸರ್ಕಾರವು ಪಾಕಿಸ್ತಾನ ಸರ್ಕಾರಕ್ಕೆ ಸೂಚನೆಯಿತ್ತಿದೆ.ಸೆಪ್ಟೆಂಬರ್ 28

ಪೂರ್ವ ಪಾಕಿಸ್ತಾನದಿಂದ ಹೆಚ್ಚು ಮಂದಿ ಹಿಂದೂಗಳ ನಿರ್ಗಮನನವದೆಹಲಿ, ಅ. 8– ಕಳೆದ ಮೂರು ತಿಂಗಳಲ್ಲಿ ಪೂರ್ವ ಬಂಗಾಳದಿಂದ ಹೆಚ್ಚು ಸಂಖ್ಯೆಯಲ್ಲಿ ಮುಸ್ಲಿಮೇತರರು ಭಾರತಕ್ಕೆ ವಲಸೆ ಬಂದಿರುವುದರ ಬಗ್ಗೆ ಉಭಯ ಸರ್ಕಾರಗಳ ಅಲ್ಪಸಂಖ್ಯಾತ ಸಚಿವರುಗಳಿಂದ ಕೂಡಲೇ ಜಂಟಿ ವೈಯಕ್ತಿಕ ವಿಚಾರಣೆ ನಡೆಸಬೇಕೆಂದು ಭಾರತ ಸರ್ಕಾರವು ಪಾಕಿಸ್ತಾನ ಸರ್ಕಾರಕ್ಕೆ ಸೂಚನೆಯಿತ್ತಿದೆ.ಸೆಪ್ಟೆಂಬರ್ 28ರಂದು ಪಾಕಿಸ್ತಾನ ಸರ್ಕಾರಕ್ಕೆ ಕಳುಹಿಸಿದ ಪತ್ರದಲ್ಲಿ ಈ ಸಲಹೆಯಿತ್ತು. ಇದಕ್ಕೆ ಇನ್ನೂ ಉತ್ತರ ಬಂದಿಲ್ಲ.ಉಭಯ ಸಚಿವರು ಮೊದಲು ಕಲ್ಕತ್ತದಲ್ಲಿ ಸೇರಿ ಇಬ್ಬರೂ ಈ ಅಂಶದ ಬಗ್ಗೆ ತೃಪ್ತಿಪಟ್ಟುಕೊಂಡು, ಅನಂತರ ಈ ವಲಸೆಗಾರರು ಬರುತ್ತಿರುವ ಪೂರ್ವ ಬಂಗಾಳ ಜಿಲ್ಲೆಯಲ್ಲಿ ಒಟ್ಟಿಗೆ ಪ್ರವಾಸ ಕೈಗೊಂಡು, ಈ ನಿರ್ಗಮನದ ಕಾರಣ ಹುಡುಕಬೇಕೆಂದು ಈ ಪತ್ರ ಸೂಚಿಸುತ್ತದೆ.
Read the complete story at Prajavani