ವಿಜಯಪುರದಲ್ಲಿ ಎಸ್ಐಆರ್ ಪ್ರಕ್ರಿಯೆ ದೋಷಪೂರಿತ ಎಂದ ಬಿಜೆಪಿ ಮುಖಂಡ
ವಿಜಯಪುರ: ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಎಸ್ಐಆರ್ ಪ್ರಕ್ರಿಯೆ ದೋಷಪೂರಿತವಾಗಿವೆ. ಅನೇಕ ಗೊಂದಲಗಳು ಉಳಿದುಕೊಂಡಿವೆ. ಎಸ್ಐಆರ್ ಸಮರ್ಪಕವಾಗಿ ನಡೆಯುವ ಅಗತ್ಯವಿದೆ ಎಂದು ಬಿಜೆಪಿ ಮುಖಂಡ ಶಂಕರ ಹೂಗಾರ ಹೇಳಿದರು.ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಐಆರ್ ಕರಡು ಮತದಾರರ ಪಟ್ಟಿಯಲ್ಲಿ ಇರುವ ಅನೇಕ ಮತದಾರರ ಭಾವಚಿತ್ರಗಳು ಸ್ಪಷ್

ವಿಜಯಪುರ: ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಎಸ್ಐಆರ್ ಪ್ರಕ್ರಿಯೆ ದೋಷಪೂರಿತವಾಗಿವೆ. ಅನೇಕ ಗೊಂದಲಗಳು ಉಳಿದುಕೊಂಡಿವೆ. ಎಸ್ಐಆರ್ ಸಮರ್ಪಕವಾಗಿ ನಡೆಯುವ ಅಗತ್ಯವಿದೆ ಎಂದು ಬಿಜೆಪಿ ಮುಖಂಡ ಶಂಕರ ಹೂಗಾರ ಹೇಳಿದರು.ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಐಆರ್ ಕರಡು ಮತದಾರರ ಪಟ್ಟಿಯಲ್ಲಿ ಇರುವ ಅನೇಕ ಮತದಾರರ ಭಾವಚಿತ್ರಗಳು ಸ್ಪಷ್ಟವಾಗಿ ಕಾಣಿಸುತ್ತಿಲ್ಲ, ಡಬಲ್ ವೋಟರ್ ಇರುವುದು, ಮೃತ ಪಟ್ಟವರ ಹೆಸರು ಉಳಿದುಕೊಂಡಿವೆ ಎಂದು ಆರೋಪಿಸಿದರು.ಶಾಸಕ ಯತ್ನಾಳ ಅವರು ಈ ಕುರಿತು ಜಿಲ್ಲಾಧಿಕಾರಿಗೆ ಸಮಗ್ರ ಮಾಹಿತಿ ನೀಡಿದ್ದು, ಸಂಶಯ ಇರುವ ಮತದಾರರ ಬಗ್ಗೆ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ. ಆದರೆ, ಇಆರ್ಒ ಅವರು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.ಮರಣ ಉತಾರ ದೊಡ್ಡ ಅಕ್ರಮ: ನಗರದಲ್ಲಿ ನಕಲಿ ಮರಣ ಉತಾರ ಪಡೆಯುತ್ತಿರುವ ದೊಡ್ಡ ದಂದೆ ನಡೆದಿದೆ. ಜೀವಂತ ಇರುವವರೇ ತಮ್ಮ ಹೆಸರಿನಲ್ಲಿ ಮರಣ ಉತಾರವನ್ನು ಪಡೆದು ನಕಲಿ ವೋಟರ್ ಐಟಿ, ನಕಲಿ ಆಧಾರ್ ಕಾರ್ಡ್ ಸೇರಿದಂತೆ ಇತರ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ ಎಂದು ಆರೋಪಿಸಿದರು.ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಮಾತನಾಡಿ, ವಿಜಯಪುರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಶೇಖ್ ಅವರ ತಂದೆ ತೀರಿಕೊಂಡು ಒಂದು ವರ್ಷವಾಗಿದೆ. ಆದರೂ ಕರಡು ಮತದಾರರ ಪಟ್ಟಿಯಲ್ಲಿ ಅವರ ಹೆಸರು ಉಳಿದುಕೊಂಡಿದೆ. ಇರ್ಫಾನ್ ಶೇಖ್ ಕಾಂಗ್ರೆಸ್ನ ಬಿಎಲ್ಎ 2 ಆಗಿದ್ದರು. ಅಲ್ಲದೇ, ಅವರ ಓಣಿಯವರೇ ಆದ ರಜಿಯಾ ಬೇಗಂ ಅವರು ಬಿಎಲ್ಒ ಆಗಿದ್ದರು. ಇಬ್ಬರು ಸೇರಿ ಮತದಾರರ ಪಟ್ಟಿಯಲ್ಲಿ ಸತ್ತವರ ಹೆಸರನ್ನು ಉಳಿಸಿ, ಅಕ್ರಮ ಎಸಗಿದ್ದಾರೆ. ಈ ಪ್ರಕರಣದ ಕುರಿತು ತನಿಖೆಯಾಗಬೇಕು ಎಂದು ಆಗ್ರಹಿಸಿದರು.ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ಚಂದ್ರಶೇಖರ ಚೌಧರಿ ಮಾತನಾಡಿ, ಸತ್ತವರನ್ನು ಮತದಾರರ ಪಟ್ಟಿಯಲ್ಲಿ ಉಳಿಯುವಂತೆ ಅಕ್ರಮ ಎಸಗಿರುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಶೇಖ್ ವಿರುದ್ಧ ಎಫ್ಐಆರ್ ದಾಖಲಿಸುತ್ತೇವೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.ಪಾಲಿಕೆ ಸದಸ್ಯ ಗಿರೀಶ ಪಾಟೀಲ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಇರುವ ಲೋಪದೋಷಗಳನ್ನು ಕಾನೂನು ಚೌಕಟ್ಟಿನಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ. ಆದರೆ, ಕಾಂಗ್ರೆಸ್ನವರು ಭಯಭೀತಿ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಎಸ್ಐಆರ್ ಕುರಿತು ಮಾತನಾಡುವ ಬದಲು ಅನ್ಯ ವಿಷಯ ಕುರಿತು ಮಾತನಾಡಿ, ದಿಕ್ಕು ತಪ್ಪಿಸುವ ಹುನ್ನಾರ ನಡೆಸಿದ್ದಾರೆ ಎಂದರು.ನಕಲಿ ಮರಣ ಪ್ರಮಾಣ ಪತ್ರವನ್ನು ಕಾಂಗ್ರೆಸ್ನವರೇ ಸೃಷ್ಟಿಸಿ, ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದು, ಈ ಗಂಭೀರ ವಿಷಯದ ಕುರಿತು ಎನ್ಐಎ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯಲಾಗುವುದುಶಂಕರ ಹೂಗಾರ, ಬಿಜೆಪಿ ಮುಖಂಡ261009-26-479540382