ಗಂಗಾವತಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ
ಗಂಗಾವತಿ: ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಅಂಗವಾಗಿ ಗುರುವಾರ ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರು ಗಂಗಾವತಿ ವಿಧಾನಸಭಾ ಕ್ಷೇತ್ರದ ಎಲ್ಲ ಶಿಕ್ಷಣ ಸಂಸ್ಥೆ, ಕಾಲೇಜುಗಳಿಗೆ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.ನಂತರ ಅವರು ಮಾತನಾಡಿ, ‘ಅ.23ರಂದು ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಜರುಗಲಿದ್ದು, ಬಿಜೆಪಿ

ಗಂಗಾವತಿ: ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಅಂಗವಾಗಿ ಗುರುವಾರ ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರು ಗಂಗಾವತಿ ವಿಧಾನಸಭಾ ಕ್ಷೇತ್ರದ ಎಲ್ಲ ಶಿಕ್ಷಣ ಸಂಸ್ಥೆ, ಕಾಲೇಜುಗಳಿಗೆ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.ನಂತರ ಅವರು ಮಾತನಾಡಿ, ‘ಅ.23ರಂದು ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಜರುಗಲಿದ್ದು, ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಶಶೀಲ್ ಜಿ.ನಮೋಶಿ ಸ್ಪರ್ಧಿಸುತ್ತಿದ್ದಾರೆ. ಎಲ್ಲ ಶಿಕ್ಷಕರು, ಮತದಾರರು ಮೊದಲ ಪ್ರಾಶಸ್ತ್ಯವಾಗಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಬೇಕು’ ಎಂದು ಕೋರಿದರು.‘ನಿಮ್ಮ ಮತವು ಮತ್ತೊಮ್ಮೆ ಬಲವಾದ ಶೈಕ್ಷಣಿಕ ಪರಿಸರ ನಿರ್ಮಿಸಲು, ಶಿಕ್ಷಕರ ಅಭ್ಯುದಯಕ್ಕಾಗಿ ಸೇವೆ ಸಲ್ಲಿಸುವ ಅವಕಾಶ ನೀಡಬೇಕು’ ಎಂದು ಎಲ್ಲರಲ್ಲಿ ಮನವಿ ಮಾಡಿದರು.ನಂತರ ಸರ್ಕಾರಿ ಜೂನಿಯರ್ ಮತ್ತು ಸರ್ಕಾರಿ ಎಂಎನ್ಎಂ ಪಿ.ಯು, ತೆಗ್ಗಿನಮಠ ಸಂಸ್ಥೆ ಮಹಾವಿದ್ಯಾಲಯ, ಕೆಸರ ಹಟ್ಟಿ ಸರ್ಕಾರಿ ಪಿ.ಯು ಕಾಲೇಜಿಗೆ ತೆರಳಿ, ಶಿಕ್ಷಕರನ್ನ ಭೇಟಿ ನೀಡಿ, ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿ, ಮೊದಲ ಪ್ರಾಶಸ್ತ್ಯದ ಮತ ನೀಡುವಂತೆ ಮನವಿ ಮಾಡಿದರು.ಟಿಎಪಿಎಂಎಸ್ ಸೊಸೈಟಿ ಅಧ್ಯಕ್ಷ ಚೆನ್ನಪ್ಪ ಮಳಗಿ, ಜಿ.ಶ್ರೀಧರ, ಶಿವಾನಂದ ಮೇಟಿ, ಶಿವುಕುಮಾರ ಅರಿಕೇರಿ, ಕಾಸಿನಾಥ ಚಿತ್ರಗಾರ, ಶ್ರೀನಿವಾಸ ದೂಳ, ಹನುಮಂತಪ್ಪ ಉಪ್ಪಾರ, ವಿಶ್ವನಾಥ, ಮಲ್ಲಿಕಾರ್ಜುನ ಬೆಂಚ್ಮಟ್ಟಿ, ಅರ್ಜುನ ರಾಯ್ಕರ, ಹನು ಶಿಲ್ಪಿ, ಮದನ್ ಸೇರಿ ಕಾರ್ಯಕರ್ತರು ಉಪಸ್ಥಿತರಿದ್ದರು.261009-35-1821423894