ಕರ್ನಾಟಕ ಮೆರಿಟೈಮ್ ಬೋರ್ಡ್ ನೌಕರರಿಗೆ ಮೂರು ತಿಂಗಳಿನಿಂದ ವೇತನವಿಲ್ಲ
ಕಾರವಾರ: ಕರ್ನಾಟಕ ಮೆರಿಟೈಮ್ ಬೋರ್ಡ್ ಅಧೀನದಲ್ಲಿನ ನೂರಾರು ಅಧಿಕಾರಿ, ಸಿಬ್ಬಂದಿ ಮೂರು ತಿಂಗಳಿನಿಂದ ವೇತನ ಪಡೆಯದೆ ಕೆಲಸ ಮಾಡುವ ಸ್ಥಿತಿ ಎದುರಾಗಿದೆ.ಬೋರ್ಡ್ನ ನಿರ್ದೇಶಕರ ಕಚೇರಿ ಕಾರವಾರದಲ್ಲೇ ಇದ್ದು, ಈ ಕಚೇರಿ, ವಾಣಿಜ್ಯ ಬಂದರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಬೋರ್ಡ್ ವ್ಯಾಪ್ತಿಗೆ ಒಳಪಡುವ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಜುಲೈನ

ಕಾರವಾರ: ಕರ್ನಾಟಕ ಮೆರಿಟೈಮ್ ಬೋರ್ಡ್ ಅಧೀನದಲ್ಲಿನ ನೂರಾರು ಅಧಿಕಾರಿ, ಸಿಬ್ಬಂದಿ ಮೂರು ತಿಂಗಳಿನಿಂದ ವೇತನ ಪಡೆಯದೆ ಕೆಲಸ ಮಾಡುವ ಸ್ಥಿತಿ ಎದುರಾಗಿದೆ.ಬೋರ್ಡ್ನ ನಿರ್ದೇಶಕರ ಕಚೇರಿ ಕಾರವಾರದಲ್ಲೇ ಇದ್ದು, ಈ ಕಚೇರಿ, ವಾಣಿಜ್ಯ ಬಂದರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಬೋರ್ಡ್ ವ್ಯಾಪ್ತಿಗೆ ಒಳಪಡುವ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಜುಲೈನಿಂದ ವೇತನ ಬಿಡುಗಡೆ ಆಗಿಲ್ಲ.‘ಮೆರಿಟೈಮ್ ಬೋರ್ಡ್ನಲ್ಲಿ ನೌಕರರಿಗೆ ವೇತನ ಪಾವತಿ ಆಗದೆ ತೊಂದರೆಯಾಗಿರುವುದು ಗಮನಕ್ಕೆ ಬಂದಿದೆ. ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಮಸ್ಯೆ ಪರಿಹರಿಸಲಾಗುವುದು’ ಎಂದು ಈಚೆಗೆ ಕಾರವಾರದಲ್ಲಿ ಬಂದಿದ್ದ ಬಂದರು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಕೆ.ಎಸ್.ಬಸವಂತಪ್ಪ ಮಾಧ್ಯಮದವರ ಎದುರು ಭರವಸೆ ನೀಡಿದ್ದರು. ಸಚಿವರು ಬಂದು ಹೋಗಿ ತಿಂಗಳು ಸಮೀಪಿಸಿದರೂ ಸಮಸ್ಯೆ ಪರಿಹಾರವಾಗಿಲ್ಲ ಎಂಬುದು ಸಿಬ್ಬಂದಿಯ ದೂರು.‘ಮೆರಿಟೈಮ್ ಬೋರ್ಡ್ ವ್ಯಾಪ್ತಿಯಲ್ಲಿ 100ಕ್ಕೂ ಹೆಚ್ಚು ಕಾಯಂ ಅಧಿಕಾರಿ, ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೂರಾರು ಮಂದಿ ಇದ್ದಾರೆ. ಯಾರೊಬ್ಬರಿಗೂ ಮೂರು ತಿಂಗಳಿನಿಂದ ವೇತನ ಸಿಕ್ಕಿಲ್ಲ. ಜೀವನಾಧಾರಕ್ಕೆ ಸಣ್ಣ ನೌಕರರು ಕೈಗಡ ಸಾಲ ಪಡೆಯುವ ಸ್ಥಿತಿ ಉಂಟಾಗಿದೆ’ ಎಂದು ನೌಕರರೊಬ್ಬರು ದೂರಿದರು.‘ಬಂದರು ನಿರ್ದೇಶಕರ ಕಚೇರಿ ಸೇರಿದಂತೆ ವಿವಿಧೆಡೆ ಕೆಲಸ ಮಾಡುತ್ತಿರುವ ಅಧಿಕಾರಿ, ಸಿಬ್ಬಂದಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗೆ ಸೇರಿದವರು. ಮೆರಿಟೈಮ್ ಬೋರ್ಡ್ಗೆ ಸೇರಿದವರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಇಲಾಖೆಯ ಅಧೀನದಲ್ಲಿರುವವರು ಬೋರ್ಡ್ ವ್ಯಾಪ್ತಿಗೆ ಸೇರುವಂತೆ ಒತ್ತಡ ಹೇರಲಾಗುತ್ತಿದೆ. ಹಲವು ಒತ್ತಡಗಳ ಕಾರಣದಿಂದ ಮೂವರು ಅಧಿಕಾರಿಗಳು ಸ್ವಯಂ ಸೇವಾ ನಿವೃತ್ತಿ ಪಡೆದುಕೊಂಡಿದ್ದಾರೆ’ ಎಂದೂ ಹೆಸರು ಹೇಳಲಿಚ್ಛಿಸದ ಸಿಬ್ಬಂದಿ ದೂರಿದರು.ಹುದ್ದೆ ಇಲ್ಲಿ, ಕೆಲಸ ಬೇರೆಡೆ‘ಕರ್ನಾಟಕ ಮೆರಿಟೈಮ್ ಬೋರ್ಡ್ನ ನಿರ್ದೇಶಕರ ಕಚೇರಿ ಕಾರವಾರದಲ್ಲೇ ಇದ್ದು, ಇಲ್ಲಿ ಇರುವ ಹಲವು ಹುದ್ದೆಗಳ ಹಿರಿಯ ಅಧಿಕಾರಿಗಳ ಪೈಕಿ ಕೆಲವರು ಕೇಂದ್ರ ಸ್ಥಾನ ಬಿಟ್ಟು ಹೊರಗೆ ಇರುವುದೇ ಹೆಚ್ಚುತ್ತಿದೆ. ಇದು ಸಹಜವಾಗಿ ಆಡಳಿತಾತ್ಮಕ ನಿರ್ಧಾರಗಳಿಗೆ ಅಡ್ಡಿಯಾಗುತ್ತಿದೆ’ ಎಂಬ ಆರೋಪ ಎದುರಾಗಿದೆ.‘ಮೆರಿಟೈಮ್ ಬೋರ್ಡ್ಗೆ ಕಾಯಂ ನಿರ್ದೇಶಕ ಹುದ್ದೆ ಇರಲಿಲ್ಲ. ಬೇರೆ ಹುದ್ದೆಯಲ್ಲಿದ್ದವರಿಗೆ ಪ್ರಭಾರ ವಹಿಸಲಾಗುತ್ತಿತ್ತು. ಈಚೆಗಷ್ಟೇ ಕಾಯಂ ನಿರ್ದೇಶಕರ ನೇಮಕ ನಡೆದಿದೆ. ಬಂದರು ನಿರ್ವಹಣೆಯ ತಾಂತ್ರಿಕ ಸಂಗತಿಗಳ ಪರಿಣತಿ ಹೊಂದಿರುವ ಅಧಿಕಾರಿಗೆ ಹುದ್ದೆ ವಹಿಸಲಾಗಿದೆ. ಮೆರಿಟೈಮ್ ಬೋರ್ಡ್ಗೆ ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ನೇಮಿಸುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಎಚ್.ಸಿ.ಬಾಲಚಂದ್ರ, ಸಿಇಒ ಕರ್ನಾಟಕ ಮೆರಿಟೈಮ್ ಬೋರ್ಡ್ವೇತನ ಅನುದಾನ ಬಿಡುಗಡೆಗೆ ಆರ್ಥಿಕ ಇಲಾಖೆ ಅನುಮೋದನೆಗೆ ಕಾಯಲಾಗಿತ್ತು. ಅನುಮೋದನೆ ಸಿಕ್ಕಿದ್ದು, ಶೀಘ್ರದಲ್ಲಿ ವೇತನ ಪಾವತಿಸಲಾಗುವುದು261009-20-1324929354