ದೂರದ ಸಂಬಂಧಿ ಅಂತ ಸಹಾಯ ಮಾಡಿದ್ದೇನೆ ಅಷ್ಟೇ: ಇಡಿ ಮುಂದೆ ಶಿವಶಂಕರಪ್ಪ ತಪ್ಪೊಪ್ಪಿಗೆ
* 50 ಲಕ್ಷ ಕೇಳಿದ್ದೆ, ಕೊನೆಗೆ 20 ಲಕ್ಷಕ್ಕೆ ಒಪ್ಪಿಕೊಂಡಿದ್ದೆ ಎಂದ ಶಿವಶಂಕರಪ್ಪ * ನನಗೂ ಈ ಅವ್ಯವಹಾರಕ್ಕೂ ಯಾವುದೇ ಸಂಬಂಧ ಇಲ್ಲ ಅಂತಿದ್ದಾರೆ ಸದಸ್ಯೆ ಗೀತಾ ಬೆಂಗಳೂರು: ಕೆಪಿಎಸ್ಸಿ ನೇಮಕಾತಿ ಹಗರಣ (KPSC Scam) ಪ್ರಕರಣ ಆರೋಪಿಗಳ ವಿಚಾರಣೆಯನ್ನು ಇಡಿ ತೀವ್ರಗೊಳಪಡಿಸಿದೆ. ಇಡಿ ಅಧಿಕಾರಿಗಳ ಮುಂದೆ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ (Shivasha

* 50 ಲಕ್ಷ ಕೇಳಿದ್ದೆ, ಕೊನೆಗೆ 20 ಲಕ್ಷಕ್ಕೆ ಒಪ್ಪಿಕೊಂಡಿದ್ದೆ ಎಂದ ಶಿವಶಂಕರಪ್ಪ * ನನಗೂ ಈ ಅವ್ಯವಹಾರಕ್ಕೂ ಯಾವುದೇ ಸಂಬಂಧ ಇಲ್ಲ ಅಂತಿದ್ದಾರೆ ಸದಸ್ಯೆ ಗೀತಾ ಬೆಂಗಳೂರು: ಕೆಪಿಎಸ್ಸಿ ನೇಮಕಾತಿ ಹಗರಣ (KPSC Scam) ಪ್ರಕರಣ ಆರೋಪಿಗಳ ವಿಚಾರಣೆಯನ್ನು ಇಡಿ ತೀವ್ರಗೊಳಪಡಿಸಿದೆ. ಇಡಿ ಅಧಿಕಾರಿಗಳ ಮುಂದೆ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ (Shivashankarappa Sahukar) ತಪ್ಪೊಪ್ಪಿಕೊಂಡಿದ್ದಾರೆ. ಅಭ್ಯರ್ಥಿಗೆ ದೂರದ ಸಂಬಂಧಿ ಅಂತ ಸಹಾಯ ಮಾಡಿದ್ದೇನೆ ಅಷ್ಟೇ. ಹಣ ಸಂಪಾದನೆ ಮಾಡುವ ಯಾವುದೇ ದುರುದ್ದೇಶ ಇರಲಿಲ್ಲ. ಮೊದಲ ಹಂತದಲ್ಲಿ ಕೇಳಿದ್ದು 50 ಲಕ್ಷ ರೂ. ಕೊನೆಗೆ 20 ಕ್ಕೆ ಒಪ್ಪಿಕೊಂಡಿದ್ದೆ. 10 ಲಕ್ಷ ಮುಂಗಡ ಹಣವನ್ನು ಪಡೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೆಪಿಎಸ್ಸಿ ಹಗರಣ; ಅಭ್ಯರ್ಥಿ ಬಳಿ 80 ಲಕ್ಷಕ್ಕೆ ಬ್ಲ್ಯಾಂಕ್ ಚೆಕ್ ಪಡೆದುಕೊಂಡಿದ್ದ ಬಸವರಾಜ್ ಕನ್ನಾಳೆ ಇಡಿ ಮುಂದೆ ಆದಂತಹ ಅವ್ಯವಹಾರದ ಬಗ್ಗೆ ಎಳೆಎಳೆಯಾಗಿ ಮಾಹಿತಿಯನ್ನು ಆರೋಪಿ ಶಿವಶಂಕರಪ್ಪ ಬಿಚ್ಚಿಟ್ಟಿದ್ದಾರೆ. ಸದಸ್ಯೆ ಗೀತಾ ಅವರಿಂದ ಅದೇ ಮೊಂಡಾಟ ಮುಂದುವರಿದಿದೆ. ಗೀತಾ ಅವರು, ನನಗೂ ಈ ಅವ್ಯವಹಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಸಾಕ್ಷ್ಯಾಧಾರಗಳನ್ನು ಇಡಿ ತಮ್ಮ ವಿಚಾರಣೆ ಮುಂದುವರಿಸಿದೆ. ಇದನ್ನೂ ಓದಿ: ಕೆಪಿಎಸ್ಸಿ ಹಗರಣ ಕೇಸ್; ಶಿವಶಂಕರಪ್ಪ, ಗೀತಾ 13 ದಿನ ಇ.ಡಿ ಕಸ್ಟಡಿಗೆ