ನಿನ್ನನ್ನು ಒಲಿಸಿಕೊಳ್ಳುವ ಮಾರ್ಗ.. ಸ್ವರ್ಗಕ್ಕಿರುವ ಏಕೈಕ ದಾರಿ!
ಮೈ ಡಿಯರ್ ಹೆಂಡ್ತಿ.! ಎಲ್ಲರೂ ಪ್ರೀತಿಸಿ ಮದುವೆ ಆದ್ರೆ, ನಾನು ನಿನ್ನನ್ನು ಮದುವೆ ಆದ ಮೇಲೆ ಪ್ರೀತಿಸಲು ಆರಂಭಿಸಿದವನು. ನೀನು ನನ್ನ ಬೆಸ್ಟ್ ಲವ್ವರ್! ನನಗೆ ನೀನಂದ್ರೆ ತುಂಬಾ ಇಷ್ಟ. ನಿನ್ನ ಮೇಲೆ ಎದೆಯ ಮೂಲೆಯಲ್ಲಿರುವ ಎಲ್ಲ ಪ್ರೀತಿಯ (Love) ಹನಿಗಳನ್ನು ಸುರಿದು ಶ್ರೀಮಂತನಾಗುವ ಬಯಕೆ ನನಗೆ! ನೀನು ನನ್ನ ಜೊತೆಗಿದ್ದರೆ ಕವಿ ಕೆ.ಎಸ್. ನರಸಿಂಹಸ್ವಾಮಿಯವರು (K. S

ಮೈ ಡಿಯರ್ ಹೆಂಡ್ತಿ.! ಎಲ್ಲರೂ ಪ್ರೀತಿಸಿ ಮದುವೆ ಆದ್ರೆ, ನಾನು ನಿನ್ನನ್ನು ಮದುವೆ ಆದ ಮೇಲೆ ಪ್ರೀತಿಸಲು ಆರಂಭಿಸಿದವನು. ನೀನು ನನ್ನ ಬೆಸ್ಟ್ ಲವ್ವರ್! ನನಗೆ ನೀನಂದ್ರೆ ತುಂಬಾ ಇಷ್ಟ. ನಿನ್ನ ಮೇಲೆ ಎದೆಯ ಮೂಲೆಯಲ್ಲಿರುವ ಎಲ್ಲ ಪ್ರೀತಿಯ (Love) ಹನಿಗಳನ್ನು ಸುರಿದು ಶ್ರೀಮಂತನಾಗುವ ಬಯಕೆ ನನಗೆ! ನೀನು ನನ್ನ ಜೊತೆಗಿದ್ದರೆ ಕವಿ ಕೆ.ಎಸ್. ನರಸಿಂಹಸ್ವಾಮಿಯವರು (K. S. Narasimhaswamy) ಹೇಳಿದಂತೆ “ಹೆಂಡತಿಯೊಬ್ಬಳು (Wife) ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ” ಎಂಬ ಭಾವನೆ ಮೂಡುತ್ತದೆ. ಏಕೆಂದರೆ ನೀನು ಬಂದ ಮೇಲೆ ನಾನು ಹೆಚ್ಚು ಖುಷಿಯಾಗಿದ್ದೇನೆ, ಹೆಚ್ಚು ಸಂಭ್ರಮವನ್ನು ಕಂಡಿದ್ದೇನೆ. ನೀನು ನನ್ನ ಬದುಕಿಗೆ ವಿಶೇಷ ಅರ್ಥ ನೀಡಿದವಳು! ಇದನ್ನೂ ಓದಿ: ನದಿಗೆ ಅದೆಷ್ಟೇ ತಡೆ ಇದ್ದರೂ ಸಮುದ್ರ ಸೇರದೇ ಇರುವುದೇ? ನನಗೆ ನಿನ್ನ ಮೊದಲ ಮುತ್ತು ಇನ್ನೂ ನೆನಪಾಗುತ್ತೆ. ಅದೇ ರೀತಿ ಪ್ರತಿ ಮುತ್ತುನ್ನು ಮೊದಲ ಮುತ್ತಂತೆ ಕೊಡುವ ನಿನ್ನ ಕಲೆ ಅದೆಷ್ಟು ಮತ್ತೇರಿಸುತ್ತೆ ಗೊತ್ತಾ? ಬಹುಶಃ ನನ್ನ ಜಗತ್ತಿಗೆ ಪ್ರೀತಿಯ ಹೊರತು ಬೇರೆ ಯಾವ ವಿಚಾರವೂ ಎಂಟ್ರಿಯಾಗದೇ ತಡೆದಿರೋದಕ್ಕೆ ನಿನ್ನೊಲವೇ ಕಾರಣ. ನಾನು ಪ್ರತಿದಿನ, ಪ್ರತಿಕ್ಷಣ ನಿನ್ನನ್ನು ಮತ್ತಷ್ಟು ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಅದಕ್ಕೆ ಬೇಕಾದ ಎಲ್ಲಾ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತೇನೆ. ಆಗೆಲ್ಲ ನನಗೆ ತುಂಬಾ ಪ್ರೌಡ್ ಫೀಲ್ ಆಗುತ್ತೆ. ʻನಿನ್ನನ್ನು ಒಲಿಸಿಕೊಳ್ಳುವ ಮಾರ್ಗಕ್ಕೂ, ಸ್ವರ್ಗದ ದಾರಿʼಗೂ ಯಾವ ವ್ಯತ್ಯಾಸವೂ ಇಲ್ಲ ಅಂತ ನನಗೆ ಅನ್ಸುತ್ತೆ. ನೀನು ನಗುನಗುತ್ತಾ ಇದ್ರೆ, ಒಲವಿನಿಂದ ಬಂದು ಅಪ್ಪುತ್ತಿದ್ರೆ ಅದಕ್ಕಿಂತ ದೊಡ್ಡ ಸ್ವರ್ಗ ಯಾವುದಿದೆ ನನಗೆ? ನಿನ್ನ ಸಂಭ್ರಮಕ್ಕಿಂತ ನನಗೆ ಯಾವುದು ದೊಡ್ಡದಿಲ್ಲ. ನಿನ್ನ ಸಂಭ್ರಮ ನನಗೆ ಸಿಗುವ ದೊಡ್ಡ ಜಯ! ಇದನ್ನೂ ಓದಿ: ನಿನ್ನ ಪತ್ರಗಳು ತಡವಾಗುತ್ತಿವೆ.. ಭಾವಗಳಲ್ಲ..! ಇಂತಿ ಹೆಂಡತಿಯೊಲುಮೆಯ ಭಾಗ್ಯವನರಿಯದ ಗಂಡಿಗೆ ಜಯವಿಲ್ಲ ಎಂದು ನಂಬಿದವನು!