ಡಾರ್ಕ್ ಜೀನ್ಸ್ ಬಣ್ಣ ಹೋಗದಂತೆ ಕಾಪಾಡಲು ಇಲ್ಲಿದೆ ಸಲಹೆ!
ಜೀನ್ಸ್ ಅನ್ನು ಎಲ್ಲರೂ ಇಷ್ಟಪಟ್ಟು ಧರಿಸುತ್ತಾರೆ. ಆದರೆ, ಖರೀದಿಸಿದ ಕೆಲವೇ ತಿಂಗಳಲ್ಲಿ ಅವುಗಳ ಬಣ್ಣ ಮಾಸಲು ಪ್ರಾರಂಭವಾಗುತ್ತದೆ. ಇದರಿಂದಾಗಿ ನೋಡುಗರಿಗೆ ಅವು ಹಳೆಯದರಂತೆ ಕಾಣುತ್ತವೆ. ಹಾಗಾದರೆ, ಡಾರ್ಕ್ ಜೀನ್ಸ್ ಬಣ್ಣ ಹೋಗದಂತೆ ದೀರ್ಘಕಾಲ ಹೊಸದರಂತೆ ಕಾಪಾಡಿಕೊಳ್ಳುವುದು ಹೇಗೆ ಎಂಬುದರ ಕುರಿತು ಕೆಲವು ಸಲಹೆಗಳು ಇಲ್ಲಿವೆಜೀನ್ಸ್ ಉಲ್ಟಾ ಮಾಡಿ ತೊಳೆಯಿರಿಜೀನ್ಸ್ ತೊ

ಜೀನ್ಸ್ ಅನ್ನು ಎಲ್ಲರೂ ಇಷ್ಟಪಟ್ಟು ಧರಿಸುತ್ತಾರೆ. ಆದರೆ, ಖರೀದಿಸಿದ ಕೆಲವೇ ತಿಂಗಳಲ್ಲಿ ಅವುಗಳ ಬಣ್ಣ ಮಾಸಲು ಪ್ರಾರಂಭವಾಗುತ್ತದೆ. ಇದರಿಂದಾಗಿ ನೋಡುಗರಿಗೆ ಅವು ಹಳೆಯದರಂತೆ ಕಾಣುತ್ತವೆ. ಹಾಗಾದರೆ, ಡಾರ್ಕ್ ಜೀನ್ಸ್ ಬಣ್ಣ ಹೋಗದಂತೆ ದೀರ್ಘಕಾಲ ಹೊಸದರಂತೆ ಕಾಪಾಡಿಕೊಳ್ಳುವುದು ಹೇಗೆ ಎಂಬುದರ ಕುರಿತು ಕೆಲವು ಸಲಹೆಗಳು ಇಲ್ಲಿವೆಜೀನ್ಸ್ ಉಲ್ಟಾ ಮಾಡಿ ತೊಳೆಯಿರಿಜೀನ್ಸ್ ತೊಳೆಯುವ ಮುನ್ನ ಅವುಗಳನ್ನು ಒಳಭಾಗಕ್ಕೆ ತಿರುಗಿಸಿ ತೊಳೆಯಿರಿ. ಇದರಿಂದ ಅದರ ಮೇಲಿರುವ ಬಣ್ಣ ದೀರ್ಘಕಾಲದವರೆಗೂ ಉಳಿಯುತ್ತದೆ. ವಾಷಿಂಗ್ ಮಷಿನ್ ಅಥವಾ ಕೈಯಲ್ಲಿ ಸ್ವಚ್ಛಗೊಳಿಸುವಾಗ ಎರಡರಲ್ಲೂ ಈ ನಿಯಮ ಪಾಲಿಸಿ.ಗೃಹಾಲಂಕಾರ: ಗೋಡೆ ಅಲಂಕರಿಸಿ ಮನೆಯ ಅಂದ ಹೆಚ್ಚಿಸಿಉಪ್ಪು ಅಥವಾ ವಿನೆಗರ್ ಬಳಸಿಹೊಸದಾಗಿ ತಂದ ಜೀನ್ಸ್ ಅನ್ನು ಮೊದಲ ಬಾರಿ ತೊಳೆಯುವ ಮೊದಲು ವಿನೆಗರ್ ಅಥವಾ ಉಪ್ಪಿನ ನೀರಿನಲ್ಲಿ ನೆನೆಸಿ. ಒಂದು ಬಕೆಟ್ ನೀರಿಗೆ ಸುಮಾರು 50 ಗ್ರಾಂ ನಷ್ಟು ವಿನೆಗರ್ ಹಾಕಿ, ಅರ್ಧ ಗಂಟೆ ನೆನೆಸಿಟ್ಟ ನಂತರ ತೊಳೆಯಿರಿ. ವಿನೆಗರ್ ಜೀನ್ಸ್ ಬಣ್ಣ ಹೋಗದಂತೆ ತಡೆಯುತ್ತದೆ.ಟಿವಿ ಸ್ಕ್ರೀನ್ ಮೇಲೆ ಧೂಳು, ಜಿಡ್ಡು ಇದೆಯಾ? ಈ ರೀತಿ ಸ್ವಚ್ಛಗೊಳಿಸಿ...ತೊಳೆಯು ಮುನ್ನ ಎಚ್ಚರಿಕೆ ಇರಲಿಜೀನ್ಸ್ ಸ್ವಚ್ಛಗೊಳಿಸುವಾಗ ತಣ್ಣೀರು ಬಳಸುವುದು ಉತ್ತಮ. ಬಿಸಿ ನೀರು ಬಟ್ಟೆಯ ಮೇಲಿರುವ ಬಣ್ಣ ಬೇಗನೆ ಮಾಸುವಂತೆ ಮಾಡುತ್ತದೆ.ಕಠಿಣ ರಾಸಾಯನಿಕಗಳಿರುವ ಸೋಪ್ ಅಥವಾ ಡಿಟರ್ಜೆಂಟ್ ಪೌಡರ್ ಅನ್ನು ಎಂದಿಗೂ ಬಳಸಬೇಡಿ. ಮೃದುವಾದ ಲಿಕ್ವಿಡ್, ಡಿಟರ್ಜೆಂಟ್ಗಳನ್ನು ಬಳಸಿ. ಹಾಗೆಯೇ, ಜೀನ್ಸ್ ಅನ್ನು ಪದೇ ಪದೆ ತೊಳೆಯುವುದನ್ನು ತಪ್ಪಿಸಿ.ನೆರಳಿನಲ್ಲಿ ಒಣಗಿಸಿಜೀನ್ಸ್ ತೊಳೆದ ಬಳಿಕ ನೆರಳಿನಲ್ಲಿಯೇ ಒಣಗಿಸಿ. ನೇರ ಬಿಸಿಲಿಗೆ ಹಾಕುವುದರಿಂದ ಬಣ್ಣ ಬೇಗನೆ ಮಾಸುತ್ತದೆ. ಗಾಳಿಯಾಡುವ ಸ್ಥಳದಲ್ಲಿ ಒಣಗಿಸುವುದು ಉತ್ತಮ. ಸಾಧ್ಯವಾದಷ್ಟು ಡ್ರೈಯರ್ ಬಳಸುವುದನ್ನು ತಪ್ಪಿಸಿ.