ಗುಂಡ್ಲುಪೇಟೆ: ಕಬ್ಬಿನ ಕೋಲೇಶ್ವರ ಮಠದ ಗಂಗಾಧರ ಸ್ವಾಮೀಜಿ ನಿಧನ
ಗುಂಡ್ಲುಪೇಟೆ (ಚಾಮರಾಜನಗರ): ತಾಲ್ಲೂಕಿನ ಗೋಪಾಲಪುರ ಗ್ರಾಮದ ಕಬ್ಬಿನ ಕೋಲೇಶ್ವರ ಮಠದ ಗಂಗಾಧರ ಸ್ವಾಮೀಜಿ (68) ಬುಧವಾರ ರಾತ್ರಿ ನಿಧನರಾದರು.1978ರಲ್ಲಿ ವೀರಭದ್ರ ಶಿವಾಚಾರ್ಯರಿಂದ ಮಠದ ಪೀಠಾಧಿಪತಿಯಾಗಿ ನೇಮಕಗೊಂಡಿದ್ದರು. 48 ವರ್ಷ ಪರಂಪರೆಯಂತೆ ಮಠವನ್ನು ಮುನ್ನಡೆಸಿದ್ದರು.ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ದೇವನೂರು ಮಹಾಂತ ಸ್ವಾಮೀಜಿ ಸೇರಿದಂತೆ ಹಲವು

ಗುಂಡ್ಲುಪೇಟೆ (ಚಾಮರಾಜನಗರ): ತಾಲ್ಲೂಕಿನ ಗೋಪಾಲಪುರ ಗ್ರಾಮದ ಕಬ್ಬಿನ ಕೋಲೇಶ್ವರ ಮಠದ ಗಂಗಾಧರ ಸ್ವಾಮೀಜಿ (68) ಬುಧವಾರ ರಾತ್ರಿ ನಿಧನರಾದರು.1978ರಲ್ಲಿ ವೀರಭದ್ರ ಶಿವಾಚಾರ್ಯರಿಂದ ಮಠದ ಪೀಠಾಧಿಪತಿಯಾಗಿ ನೇಮಕಗೊಂಡಿದ್ದರು. 48 ವರ್ಷ ಪರಂಪರೆಯಂತೆ ಮಠವನ್ನು ಮುನ್ನಡೆಸಿದ್ದರು.ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ದೇವನೂರು ಮಹಾಂತ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಅಂತಿಮ ದರ್ಶನ ಪಡೆದರು.ಶ್ರೀಗಳ ಪಾರ್ಥಿವ ಶರೀರವನ್ನು ಅಲಂಕೃತ ಅಡ್ಡಪಲ್ಲಕ್ಕಿಯಲ್ಲಿಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ವೀರಶೈವ ಲಿಂಗಾಯತ ಧರ್ಮದ ಸಂಪ್ರದಾಯದಂತೆ ಮಠದ ಆವರಣದಲ್ಲಿ ಅಂತಿಮ ವಿಧಿ ನಡೆಯಿತು.261009-39-1756156980
Read the complete story at Prajavani