ಪ.ಬಂಗಾಳ ಉಪಚುನಾವಣೆ: ನಂದಿಗ್ರಾಮ, ರೇಜಿನಗರದಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು
ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆಯ ಎರಡು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ರಾಜಕೀಯವಾಗಿ ಅತ್ಯಂತ ಮಹತ್ವಪಡೆದಿದ್ದ ನಂದಿಗ್ರಾಮ ಕ್ಷೇತ್ರದಲ್ಲಿ ದಾಖಲೆಯ ಅಂತರದಿಂದ ಜಯಭೇರಿ ಬಾರಿಸಿರುವ ಕಮಲ ಪಡೆ, ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ರೇಜಿನಗರ ಕ್ಷೇತ್ರದಲ್ಲೂ ಗೆಲುವು ದಾಖಲಿಸಿ ಅಚ್ಚರಿ ಮೂಡಿಸಿದೆ. ರಾಜ್ಯದಲ್

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆಯ ಎರಡು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ರಾಜಕೀಯವಾಗಿ ಅತ್ಯಂತ ಮಹತ್ವಪಡೆದಿದ್ದ ನಂದಿಗ್ರಾಮ ಕ್ಷೇತ್ರದಲ್ಲಿ ದಾಖಲೆಯ ಅಂತರದಿಂದ ಜಯಭೇರಿ ಬಾರಿಸಿರುವ ಕಮಲ ಪಡೆ, ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ರೇಜಿನಗರ ಕ್ಷೇತ್ರದಲ್ಲೂ ಗೆಲುವು ದಾಖಲಿಸಿ ಅಚ್ಚರಿ ಮೂಡಿಸಿದೆ. ರಾಜ್ಯದಲ್ಲಿ ಟಿಎಂಸಿಯ 15 ವರ್ಷಗಳ ಆಡಳಿತವನ್ನು ಕೊನೆಗಾಣಿಸಿ ಅಧಿಕಾರಕ್ಕೆ ಬಂದ ಐದೇ ತಿಂಗಳಲ್ಲಿ ಬಿಜೆಪಿ ತನ್ನ ನೆಲೆ ಮತ್ತಷ್ಟು ಗಟ್ಟಿಗೊಳಿಸಿದಂತಾಗಿದೆ. ವಿರೋಧ ಪಕ್ಷಗಳ ಮತ ವಿಭಜನೆ ಹಾಗೂ ಆಂತರಿಕ ಭಿನ್ನಾಭಿಪ್ರಾಯಗಳು ಈ ಚುನಾವಣೆಯಲ್ಲಿ ಸ್ಪಷ್ಟವಾಗಿ ಪ್ರತಿಫಲಿಸಿದ್ದು, ಎರಡೂ ಕ್ಷೇತ್ರಗಳಲ್ಲಿ ಎರಡನೇ ಸ್ಥಾನ ಪಡೆದ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸ್ಪರ್ಧಿಗಳ ಠೇವಣಿ ನಷ್ಟವಾಗಿದೆ.ನಂದಿಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಹಸಿರಾಣಿ ರಥ್ ಅವರು ಕಾಂಗ್ರೆಸ್ನ ಮಿಲನ್ ಪ್ರಧಾನ್ ವಿರುದ್ಧ 1,22,753 ಮತಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಹಸಿರಾಣಿ ರಥ್ 1,64,427 ಮತಗಳನ್ನು ಗಳಿಸಿದರೆ, ಮಿಲನ್ ಪ್ರಧಾನ್ 41,674 ಮತ ಗಳಿಸಿದರು. 2026ರ ವಿಧಾನಸಭೆ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅವರು ನಂದಿಗ್ರಾಮ ಮತ್ತು ಭವಾನಿಪುರ ಎರಡೂ ಕ್ಷೇತ್ರಗಳಿಂದ ಗೆದ್ದು, ಬಳಿಕ ಭವಾನಿಪುರ ಉಳಿಸಿಕೊಂಡು ನಂದಿಗ್ರಾಮಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಉಪಚುನಾವಣೆ ನಡೆದಿತ್ತು. ಇಲ್ಲಿ ಬಿಜೆಪಿ ವಿರೋಧಿ ಮತಗಳು ವಿಭಜನೆಯಾಗದಂತೆ ತಡೆಯಲು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದು ಕಾಂಗ್ರೆಸ್ಗೆ ಬೆಂಬಲ ಘೋಷಿಸಿದ್ದರೂ, ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಅತ್ತ ಮುರ್ಷಿದಾಬಾದ್ ಜಿಲ್ಲೆಯಲ್ಲಿ 70ರಷ್ಟು ಮುಸ್ಲಿಂ ಮತದಾರರನ್ನು ಹೊಂದಿರುವ ರೇಜಿನಗರ ಕ್ಷೇತ್ರದಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಿದೆ. ಬಿಜೆಪಿ ಅಭ್ಯರ್ಥಿ ಸಖಾರವ್ ಸರ್ಕಾರ್ ಅವರು ಎಜೆಯುಪಿ ಗುಲಾಂ ನಬಿ ಆಜಾದ್ ವಿರುದ್ಧ 75,816 ಮತಗಳ ಭಾರಿ ಅಂತರದ ಜಯ ಗಳಿಸಿದ್ದಾರೆ.ಉಪಚುನಾವಣೆಗೂ ಒಂದು ದಿನ ಮುಂಚೆ ನಂದಿಗ್ರಾಮ ಪೊಲೀಸ್ ಇನ್ಸ್ಪೆಕ್ಟರ್ ಬದಲಾವಣೆಉಪಚುನಾವಣೆ ಫಲಿತಾಂಶ: ತ.ನಾಡಿನಲ್ಲಿ ಗೆಲುವಿನತ್ತ ಟಿವಿಕೆ, ವಿಜಯ್ಗೆ ಆನೆ ಬಲ